Monday, 16th December 2019

ಸುದ್ದಿವಾಹಿನಿಯ ನೇರ ಪ್ರಸಾರದ ಕಾರ್ಯಕ್ರಮದಲ್ಲೆ ಬಡಿದಾಡಿಕೊಂಡ ಅತಿಥಿಗಳು

ನವದೆಹಲಿ: ನೊಯ್ಡಾದ ಖಾಸಗಿ ಸುದ್ದಿವಾಹಿನಿಯ ನೇರ ಪ್ರಸಾರದ ಚರ್ಚಾ ಕಾರ್ಯಕ್ರಮದಲ್ಲೇ ಮೌಲಾನಾ ಹಾಗೂ ಮಹಿಳಾ ವಕೀಲೆ ಬಡಿದಾಡಿಕೊಂಡಿದ್ದಾರೆ.

ಮಂಗಳವಾರ ಸಂಜೆ ತ್ರಿವಳಿ ತಲಾಖ್‍ಗೆ ಸಂಬಂಧಿಸಿದಂತೆ ಸ್ಥಳೀಯ ಖಾಸಗಿ ಸುದ್ದಿವಾಹಿನಿಯಲ್ಲಿ ನೇರ ಪ್ರಸಾರ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೌಲಾನ ಇಜಾಜ್ ಅರ್ಷದ್ ಕಜ್ಮಿ ಹಾಗೂ ಸುಪ್ರಿಂಕೋರ್ಟ್ ನ ಮಹಿಳಾ ವಕೀಲೆಯಾದ ಫರ್ಹಾ ಫೈಯಾಜ್ ನಡುವೆ ಮಾತುಕತೆ ತಾರಕ್ಕೇರಿದೆ. ನೇರಪ್ರಸಾರದ ಕಾರ್ಯಕ್ರಮವನ್ನು ಲೆಕ್ಕಿಸದೆ ಇವರಿಬ್ಬರು ಪರಸ್ಪರ ಬಡಿದಾಡಿಕೊಂಡಿದ್ದಾರೆ. ಇದೇ ವೇಳೆ ಕೋಪಗೊಂಡ ಮೌಲನಾ ಮಹಿಳೆಯ ಮೇಲೆ ಕೈ ಮಾಡಿದ್ದಾರೆ.

ಘಟನೆ ಸಂಬಂಧ ಎಚ್ಚೆತ್ತ ಸುದ್ದಿವಾಹಿನಿಯು ಮೌಲಾನನ್ನು ತಡೆದು, ಮಹಿಳಾ ವಕೀಲೆಯನ್ನು ರಕ್ಷಿಸಿದ್ದಾರೆ. ಘಟನೆ ಸಂಬಂಧ ಮೌಲಾನ ಇಜಾಜ್ ಅರ್ಷದ್ ಕಜ್ಮಿ ವಿರುದ್ಧ ಸುದ್ದಿವಾಹಿನಿಯು ದೂರು ನೀಡಿದ ಹಿನ್ನೆಲೆಯಲ್ಲಿ ಬುಧವಾರ ಮೌಲಾನನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಗಲಾಟೆ?
ತ್ರಿವಳಿ ತಲಾಖ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಪ್ರೀಂ ಕೋರ್ಟ್‍ನ ಮಹಿಳಾ ವಕೀಲೆ ಫರ್ಹಾ ಫಯಾಜ್‍ರವರು ತ್ರಿವಳಿ ತಲಾಕ್ ಕುರಿತು ಕುರಾನ್ ನಲ್ಲಿ ಉಲ್ಲೇಖವಿಲ್ಲ, ಮುಸ್ಲಿಂ ಸಮುದಾಯ ಮಹಿಳೆಯ ಮೂಲಭೂತ ಹಕ್ಕಿಗೆ ಧಕ್ಕೆಮಾಡುತ್ತಿದ್ದು, ಮದುವೆಯ ಸಮಯದಲ್ಲಿ ಲಿಂಗ ತಾರತಮ್ಯ ನಡೆಸುತ್ತದೆ. ಇದರಿಂದಾಗಿ ಮಹಿಳೆಯರು ಬಲಿಪಶುಗಳಾಗಿದ್ದಾರೆ. ತಲಾಖ್ ನಿಂದಾಗಿ ಮಹಿಳೆಗೆ ಸರಿಯಾದ ಪರಿಹಾರಗಳು ಸಹ ಸಿಗುವುದಿಲ್ಲ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದರು. ಇದರಿಂದ ರೊಚ್ಚಿಗೆದ್ದ ಮೌಲಾನಾ ಕಜ್ಮಿ ಮಹಿಳಾ ವಕೀಲೆ ಮೇಲೆ ಹಲ್ಲೆ ನಡೆಸಿದ್ದಾನೆ.

Leave a Reply

Your email address will not be published. Required fields are marked *