ತುಮಕೂರು: ಕಡ್ಡಾಯ ಮತದಾನ ಕಾನೂನು ಜಾರಿಗೆ ತರದೇ ಇರೋದು ಈ ದೇಶದ ದುರಂತ. ಪ್ರತಿಶತ 100 ಮತದಾನ ಆಗಬೇಕಾದರೆ ಕಡ್ಡಾಯ ಮತದಾನ ಕಾನೂನು ತರಬೇಕು ಎಂದು ಸಿದ್ದಗಂಗಾ ಶ್ರೀಗಳು (Siddaganga Shri) ಆಗ್ರಹಿಸಿದರು.
Advertisement
ಲೋಕಸಭಾ ಚುನಾವಣಾ (Loksabha Elections 2024) ಮತದಾನ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಈಗಾಗಲೇ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಅಂತೆಯೇ ಹಸುವಿಗೆ ಹಣ್ಣು ತಿನ್ನಿಸಿ ಸಿದ್ದಗಂಗಾ ಮಠದ ಮತಗಟ್ಟೆ ಸಂಖ್ಯೆ 113 ರಲ್ಲಿ ಸಿದ್ದಗಂಗಾ ಶ್ರೀಗಳು ಮತದಾನ ಮಾಡಿದ್ದಾರೆ. ಇದನ್ನೂ ಓದಿ: ಮತದಾನ ಚಲಾಯಿಸಿ ಮಾದರಿಯಾದ ನಟ ಗಣೇಶ್ ದಂಪತಿ
Advertisement
Advertisement
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀಗಳು, ಮತದಾನ ಮಾಡೋದು ಒಂದು ಪವಿತ್ರ ಕಾರ್ಯ. ಸಿದ್ದಗಂಗಾ ಮಠದ ಸಂಪ್ರದಾಯದಂತೆ ನಾನು ಬಂದು ಮೊದಲು ಮತದಾನ ಮಾಡಿದ್ದೇನೆ. ಶಿವಕುಮಾರ ಶ್ರೀಗಳು ಸಿದ್ದಗಂಗಾ ಮಠದ ಮತಗಟ್ಟೆಯಲ್ಲಿ ಮೊದಲ ಮತದಾನ ಮಾಡುತ್ತಿದ್ದರು. ಮತದಾನ ಮಾಡಲು ಸರ್ಕಾರ ಎಲ್ಲಾ ರೀತಿಯ ಸವಲತ್ತು ಒದಗಿಸಿ ಕೊಟ್ಟಿದೆ ಎಂದರು.
Advertisement
ಎಲ್ಲರೂ ಬಂದು 100ಕ್ಕೆ 100 ರಷ್ಟು ಮತದಾನ ಮಾಡವೇಕು. ಕಡ್ಡಾಯ ಮತದಾನ ಕಾನೂನು ಜಾರಿಗೆ ತರದೇ ಇರೋದು ಈ ದೇಶದ ದುರಂತ. ಪ್ರತಿಶತ 100 ಮತದಾನ ಆಗಬೇಕಾದರೆ ಕಡ್ಡಾಯ ಮತದಾನ ಕಾನೂನು ತರಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಿಗೆ ಮತದಾನ ಆಗುತ್ತದೆ. ನಗರ ಪ್ರದೇಶದಲ್ಲಿ ಕಡಿಮೆ ಆಗುತ್ತದೆ. ವಿದ್ಯಾವಂತರೇ ಮತದಾನದಿಂದ ದೂರ ಉಳಿಯುತ್ತಾರೆ. ಹೀಗಾಗಬಾರದಿದ್ದರೆ ಕಡ್ಡಾಯ ಮತದಾನ ಜಾರಿಯಾಗಬೇಕು ಎಂದು ಶ್ರೀಗಳು ಒತ್ತಾಯಿಸಿದರು.