ಗದಗ: ಎರಡು ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವ ವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ನಗರದ ಮಸಾರಿ ಭಾಗದ ನಂದೀಶ್ವರಮಠ ಬಳಿ ಇರುವ ಮನೆಯಲ್ಲಿ ಈ ಘಟನೆ ನಡೆದಿದೆ. 21 ವರ್ಷದ ಧನಲಕ್ಷ್ಮೀ ನವಲಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
Advertisement
Advertisement
ಲಾಕ್‍ಡೌನ್ ಮುನ್ನವೇ ಧನಲಕ್ಷೀ ಮದುವೆ ನಿಶ್ಚಯವಾಗಿತ್ತು. ಆದರೆ ಕುಟುಂಬದವರು ಮದುವೆ ಮುಂದೂಡುವುದು ಬೇಡ ಎಂದು ಲಕ್ಷ್ಮೇಶ್ವರ ಪಟ್ಟಣದಲ್ಲಿ ಸರಳವಾಗಿ ಮದುವೆ ಮಾಡಿದ್ದಾರೆ.
Advertisement
ಮನೆಯಲ್ಲಿ ಸಂಬಂಧಿಗಳು ಇದ್ದರೂ ಸಹ ಸ್ನಾನಮಾಡಿ ಬರುವುದಾಗಿ ಹೇಳಿ ಬಾತ್‍ರೂಮ್ ಹೋಗಿದ್ದಾಳೆ. ಸುಮಾರು ಎರಡು ಗಂಟೆಯಾದರೂ ಧನಲಕ್ಷೀ ಬಂದಿಲ್ಲ. ನಂತರ ಮನೆಯವರು ಹೋಗಿ ನೋಡಿದ್ದಾರೆ. ಅಷ್ಟರಲ್ಲಿ ಧನಲಕ್ಷೀ ಬಾತ್‍ರೂಮ್ ಲಾಕ್‍ಮಾಡಿಕೊಂಡು ಒಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
Advertisement
ಸ್ಥಳಕ್ಕೆ ಬಡಾವಣೆ ಪೊಲೀಸರು ಹಾಗೂ ಗದಗ ತಹಶೀಲ್ದಾರ್ ಶ್ರೀನಿವಾಸ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗದಗನ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧನಲಕ್ಷ್ಮೀ ಸಾವಿಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರ ತನಿಖೆ ನಂತರವಷ್ಟೇ ಸತ್ಯಾಸತ್ಯತೆ ಹೊರಬಿಳ್ಳಲಿದೆ.