ಪಾಟ್ನಾ: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಬೆಂಕಿ (Fire) ಅನಾಹುತವಾಗಿ 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಬಿಹಾರದ (Bihar) ಔರಂಗಬಾದ್‍ನಲ್ಲಿ ನಡೆದಿದೆ.
ಶಹಗಂಜ್ ಪ್ರದೇಶದಲ್ಲಿ ಅನಿಲ್ ಗೋಸ್ವಾಮಿ ಅವರ ಕುಟುಂಬಸ್ಥರು ಛಠ್ ಪೂಜೆಗಾಗಿ (Chhath Puja) ಪ್ರಸಾದವನ್ನು ತಯಾರಿಸುತ್ತಿದ್ದಾಗ ಗ್ಯಾಸ್ ಸಿಲಿಂಡರ್‍ಗೆ ಬೆಂಕಿ ಹತ್ತಿಕೊಂಡಿದೆ. ಇದರಿಂದ ಅನಿಲ ಸೋರಿಕೆ ಆಗಿದ್ದು, ಭಾರೀ ಬೆಂಕಿ ಹೊತ್ತಿಕೊಂಡಿದೆ. ಅದನ್ನು ನಂದಿಸಲು ಸ್ಥಳೀಯರು ಎಲ್ಲ ಪ್ರಯತ್ನಗಳನ್ನು ಮಾಡಿದ್ದರು. ಆದರೆ ಪ್ರಯತ್ನ ವ್ಯರ್ಥವಾಗಿದೆ.
Advertisement
Advertisement
ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದರು. ಆದರೆ, ಬೆಂಕಿಯ ತೀವ್ರತೆ ಹೆಚ್ಚಾಗಿ ಸಿಲಿಂಡರ್ ಸ್ಫೋಟಗೊಂಡಿದ್ದು, 30ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ವೇಳೆ ಬೆಂಕಿ ನಂದಿಸಲು ಬಂದಿದ್ದ ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ. ಇದನ್ನೂ ಓದಿ: ಹಲವು ಪ್ರತಿಪಕ್ಷ ನಾಯಕರ ಭದ್ರತೆ ಹಿಂಪಡೆದ ಮಹಾರಾಷ್ಟ್ರ ಸರ್ಕಾರ
Advertisement
Advertisement
ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಗಾಗಿ ಔರಂಗಾಬಾದ್ ಸದರ್ ಆಸ್ಪತ್ರೆಗೆ ರವಾನಿಸಲಾಗಿದೆ. ಹಾಗೂ ಹಲವರು ಖಾಸಗಿ ನರ್ಸಿಂಗ್ ಹೋಮ್‍ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಕಾರಣವನ್ನು ಆಡಳಿತವು ಇನ್ನೂ ಖಚಿತಪಡಿಸಿಲ್ಲ ಎಂದು ನಗರ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಹೇಳಿದರು. ಇದನ್ನೂ ಓದಿ: ಜನಪ್ರತಿನಿಧಿಯಾಗುವವರೆಗೂ ಗುದ್ದಲಿ ಹಿಡಿಯಲ್ಲ- ನಿಖಿಲ್ ಕುಮಾರಸ್ವಾಮಿ ಶಪಥ