– ಖುಷಿಯಿಂದ ಬಾಯಿ ಸಿಹಿ ಮಾಡಿಕೊಂಡ ಯಶಸ್
ಮನೆಯೊಳಗೆ ಪದೇ ಪದೇ ಅಸಭ್ಯ ಮಾತುಗಳ ಬಳಕೆ ಮಾಡಿದ ಮಂಜುಗೆ (Manja) ಎಷ್ಟೇ ವಾರ್ನಿಂಗ್ ಕೊಟ್ಟರೂ ಬದಲಾಗದೇ ಇದ್ದಾಗ ಕೊನೆಗೆ ಬಿಗ್ಬಾಸ್ (Bigg Boss) ಪರ್ಮ್ನೆಂಟ್ ಪಾಠ ಕಲಿಸಿ, ಮನೆಯಿಂದ ಹೊರಕಳಿಸಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ 13ರ (Bigg Boss Kannada Season 13) ಮನೆಯಲ್ಲಿ ಮಿತಿ ಮೀರಿದ ಅಸಭ್ಯ ಮಾತುಗಳು ಹಾಗೂ ಸಹ-ಸ್ಪರ್ಧಿಗಳ ತೇಜೋವಧೆ ಮಾಡಿದ ಆರೋಪದ ಮೇಲೆ ನಿಯಮ ಉಲ್ಲಂಘನೆಯಡಿ ಮಾರ್ಡನ್ ಮಹಾಕವಿ ಮಂಜುನಾಥ್ (Modern Mahakavi Manja) ಅವರನ್ನು ಬಿಗ್ಬಾಸ್ ಮನೆಯಿಂದ ನೇರವಾಗಿ ಎವಿಕ್ಟ್ ಮಾಡಿದ್ದಾರೆ. ಇದನ್ನೂ ಓದಿ: BBK 13: ನವರಾತ್ರಿ ಉಡುಗೊರೆ – ದೊಡ್ಮನೆಗೆ ಹೊಸ ಸ್ಪರ್ಧಿ ಎಂಟ್ರಿ
Super Sunday With ಬಾದ್ಷಾ ಸುದೀಪ | ಇಂದು ರಾತ್ರಿ 9
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq
#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKPromo https://t.co/EAwH9KyO9J
— Colors Kannada (@ColorsKannada) October 11, 2026
ಎರಡು ವಾರದ ಹಿಂದೆಯಷ್ಟೇ ತೂಕವಿಲ್ಲದ ಮಾತುಗಳು ಹಾಗೂ ಸಹ-ಸ್ಪರ್ಧಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಮಂಜ ಅವರನ್ನು ಹೊರಕಳಿಸಿ, ಪಾಠ ಕಲಿಸಲು ಬಿಗ್ಬಾಸ್ ಯತ್ನಿಸಿದ್ದರು. ಅದರಂತೆ ಮನೆಯಿಂದ ಹೊರಕಳಿಸಿ, ಬಳಿಕ ಮತ್ತೆ ಮನೆಯೊಳಗೆ ಕಳುಹಿಸಿದ್ದರು. ಅದಾದ ಬಳಿಕ ಸ್ವಲ್ಪ ಸುಮ್ಮನಾಗಿದ್ದ ಮಂಜು ಈ ವಾರ ವಿಪರೀತವಾಗಿ ನಡೆದುಕೊಂಡಿದ್ದರು. ಕೊನೆಗೆ ಈ ವಾರ ಸ್ವತಃ ಮಂಜು ಅವರ ತಾಯಿಯವರಿಂದಲೇ ಬಿಗ್ಬಾಸ್ ಬುದ್ಧಿವಾದ ಹೇಳಿಸಿದ್ದರು.ಇದನ್ನೂ ಓದಿ :ಗಾನವಿ ಅಹಸ್ಯಕರ ಪದ ಬಳಕೆ – ಬುದ್ಧಿವಾದ ಹೇಳುತ್ತಾ ಕಣ್ಣೀರಿಟ್ಟ ಕಿಚ್ಚ
ಇಷ್ಟೆಲ್ಲಾ ನಡೆದು, ಸುದೀಪ್ ಅವರ ಕಠಿಣ ಎಚ್ಚರಿಕೆಯ ಬಳಿಕವೂ ನಿಯಮ ಮುರಿದಿದ್ದರಿಂದ ಬಿಗ್ಬಾಸ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಮಂಜ ಹೊರಹೋಗುತ್ತಿದ್ದಂತೆ ಮನೆಯ ಕೆಲ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ.
ಮಾಡಿದ ತಪ್ಪಿಗೆ ಬಿಕ್ಕಳಿಸಿದ ಮಂಜುನಾಥ್
Super Sunday With ಬಾದ್ಷಾ ಸುದೀಪ | ಇಂದು ರಾತ್ರಿ 9
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq
#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKSP https://t.co/aHlDQif9ZT
— Colors Kannada (@ColorsKannada) October 11, 2026
ಇದಾದ ಬಳಿಕ ವೇದಿಕೆಯ ಮೇಲೆ ಕಿಚ್ಚ ಸುದೀಪ್ ಅವರ ಮುಂದೆ ಬಂದ ಮಂಜು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಇದು ನನ್ನ ಹತ್ತು ವರ್ಷದ ಕನಸು. ಅದರಲ್ಲೂ ನಿಮಗೆ ಕಣ್ಣೀರು ಹಾಕಿಸಿದೆ. ತಪ್ಪಾಯ್ತು ಸರ್ ಎಂದು ಸುದೀಪ್ ಮುಂದೆ ಅತ್ತಿದ್ದಾರೆ. ಅದಕ್ಕೆ ಸುದೀಪ್, ತಪ್ಪಾಯ್ತು ಬಿಡಿ, ಇನ್ಮುಂದೆ ತಿದ್ದಿಕೊಳ್ಳಿ… ಹತ್ತು ವರ್ಷದ ಕನಸನ್ನು ಹೀಗೆ ಹಾಳು ಮಾಡ್ಕೋಬೇಕಿತ್ತಾ? ಎಂದು ಪ್ರಶ್ನಿಸಿದಾಗ, ಮಂಜು ಗಳಗಳನೆ ಅತ್ತು ತಮ್ಮ ತಪ್ಪಿನ ಅರಿವಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ. ಕೊನೆಗೆ ಸುದೀಪ್ ಮಂಜು ಅವರನ್ನು ಅಪ್ಪಿಕೊಂಡು ಸಾಂತ್ವನ ಹೇಳಿದ್ದಾರೆ.ಇದನ್ನೂ ಓದಿ: ಚರ್ಚೆ ಅಲ್ಲ, ನಿರ್ಧಾರ ತೆಗೆದೊಕೊಳ್ಳುವ ಸಮಯ; ಅತಿರೇಕದ ವರ್ತನೆಗೆ ಕಿಚ್ಚನ ಕ್ಲಾಸ್

