BBK 13 : ಇಂದಿನ ʼಬಿಗ್‌ಬಾಸ್ ಸೂಪರ್ ಸಂಡೇ ವಿತ್ ಬಾದ್ಷಾ ಸುದೀಪʼ ವೀಕೆಂಡ್ ಎಪಿಸೋಡ್‌ನಲ್ಲಿ (Bigg Boss 13) ಹೊಸ ಸ್ಪರ್ಧಿಯ ಎಂಟ್ರಿಯಾಗಿದೆ.
ಬಿಗ್‌ಬಾಸ್‌ನಲ್ಲಿ ಈ ವಾರ ಪೂರ್ತಿ ನಡೆದ ಅಹಿತಕರ ಘಟನೆಗಳ ಕುರಿತು ಚರ್ಚೆ ಮಾಡಿ, ದೊಡ್ಮನೆ ಸ್ಪರ್ಧಿಗಳಿಗೆ ಸುದೀಪ್ ಶನಿವಾರದ (Kiccha Sudeep) ಎಪಿಸೋಡ್‌ನಲ್ಲಿ ಬುದ್ದಿ ಹೇಳಿದ್ರು. ಆದರೆ ಸಂಡೇ ಎಪಿಸೋಡ್‌ನಲ್ಲಿ ಏಕಾಏಕಿ ಹೊಸ ಕಂಟೆಸ್ಟಂಟ್ ಆಗಮನವಾಗಿದೆ.
ಮನರಂಜನೆಗಿಂದ ಜಗಳಗಳೇ ತುಂಬಿರುವ ಬಿಗ್‌ಬಾಸ್ ಈ ಸೀಸನ್‌ನಲ್ಲಿ, ಒಂದು ಹೊಸ ಬದಲಾವಣೆ ಇರಲಿ ಎಂದ ಕಾರಣಕ್ಕೆ ಹೊಸ ವ್ಯಕ್ತಿಯ ಆಗಮನವಾಗಿದೆ. ಅಗ್ನಿಪರೀಕ್ಷೆಯಲ್ಲಿ ಭಾಗವಹಿಸಿದ್ದ ಲಾವಣ್ಯ ಕುಮಾರಿ ಈಗ ಬಿಗ್‌ಬಾಸ್ ಮನೆಯೊಳಗೆ ಎಂಟ್ರಿ ಕೊಡುತ್ತಿದ್ದಾರೆ. ಇದ್ನನೂ ಓದಿ: ಬ್ಯಾರಿಕೇಡ್ ಕೂಡಲೇ ತೆರವುಗೊಳಿಸಿ, ಇಂಟರ್ನೆಟ್ ಸೇವೆ ಕಡಿತಗೊಳಿಸಬೇಡಿ: ಸುಪ್ರೀಂ ಕೋರ್ಟ್
ಬಿಗ್ ಬಾಸ್ ಅಗ್ನಿಪರೀಕ್ಷೆಯಲ್ಲಿ ಸ್ಪರ್ಧಿಯಾಗಿದ್ದ 20 ವರ್ಷದ ಲಾವಣ್ಯ ಕುಮಾರಿ (ಕುಮಾರಿ) ಅವರು ತಮ್ಮ ವಿಶಿಷ್ಟ ವ್ಯಕ್ತಿತ್ವದಿಂದ ಪ್ರೇಕ್ಷಕರ ಗಮನ ಸೆಳೆದಿದ್ದರು.
View this post on Instagram
ಭಾನುವಾರದ ಎಪಿಸೋಡ್‌ನಲ್ಲಿ ಕುಮಾರಿಯನ್ನು ದಸರಾಗೆ ಒಂದು ಪಾಸಿಟಿವ್ ಎನರ್ಜಿ ಮನೆಗೆ ಸಿಗಲಿ ಎಂಬ ಕಾರಣಕ್ಕೆ ಕಳಿಸುತ್ತಿದ್ದೇವೆ ಎಂದು ಸುದೀಪ್ ಅವರು ಹೇಳಿದ್ದಾರೆ. ಮುಗ್ದ ಮನಸ್ಸಿನ ಹುಡುಗಿ ಎಂದು ಪರಿಚಯವಾಗಿದ್ದ ಕುಮಾರಿ ಈಗ ದೊಡ್ಮನೆಯಲ್ಲಿ ಯಾವ ರೀತಿ ಆಟವಾಡುತ್ತಾರೆ ಎಂದು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.ಇದ್ನನೂ ಓದಿ: ಗಾನವಿ ಅಹಸ್ಯಕರ ಪದ ಬಳಕೆ – ಬುದ್ಧಿವಾದ ಹೇಳುತ್ತಾ ಕಣ್ಣೀರಿಟ್ಟ ಕಿಚ್ಚ

