ಬಿಗ್ ಬಾಸ್ ಕನ್ನಡ (Bigg Boss Kannada 13) ಮನೆಯಲ್ಲಿ ದಿನದಿಂದ ದಿನಕ್ಕೆ ಗಲಾಟೆಗಳು ಹೆಚ್ಚಾಗುತ್ತಿವೆ. ಸ್ಪರ್ಧಿಗಳ ನಡುವಿನ ವಾಗ್ವಾದ ಈಗ ಅವಾಚ್ಯ ಪದಗಳ ಬಳಕೆಯವರೆಗೂ ತಲುಪಿದೆ. ಗಾನವಿ ಹಾಗೂ ಗಗನ್ ನಡುವೆ ಜಗಳವಾಗುತ್ತಿದ್ದಾಗ ವಿವೇಚನೆ ಕಳೆದುಕೊಂಡು ಅಹಸ್ಯಕರ ಪದ ಬಳಕೆ ಮಾಡಿದ್ದಕ್ಕೆ ಗಾನವಿಗೆ ಬುದ್ಧಿವಾದ ಹೇಳುತ್ತಾ ಸುದೀಪ್ ಕಣ್ಣೀರಿಟ್ಟಿದ್ದಾರೆ.
ವಾರ ಪೂರ್ತಿ ಟಾಸ್ಕ್ ನೆಪದಲ್ಲಿ ಸ್ಪರ್ಧಿಗಳು ಮಾಡಿದ ಅತಿರೇಕದ ವರ್ತನೆಗೆ ಹಿಂದೆಂದೂ ಕಾಣದ ರೀತಿಯಲ್ಲಿ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಳಪೆ ಕೊಟ್ಟ ಬಳಿಕ ಗಗನ್ ಹಾಗೂ ಗಾನವಿ ನಡುವೆ ಜಗಳವಾಗಿತ್ತು. ಗಗನ್ ಆಡಿದ ಒಂದು ಮಾತಿನಿಂದ ಗಾನವಿ ಅಸಹ್ಯಕರ ಮಾತನ್ನು ಬಳಸಿದ್ದರು. ಇದರ ಬಗ್ಗೆ ಮಾತನಾಡುತ್ತಾ ಸುದೀಪ್ ಭಾವುಕರಾಗಿದ್ದಾರೆ. ಇದನ್ನೂ ಓದಿ: ಚರ್ಚೆ ಅಲ್ಲ, ನಿರ್ಧಾರ ತೆಗೆದೊಕೊಳ್ಳುವ ಸಮಯ; ಅತಿರೇಕದ ವರ್ತನೆಗೆ ಕಿಚ್ಚನ ಕ್ಲಾಸ್

ನಿಮ್ಮ ನಡುವೆ ಮನಸ್ತಾಪ ಇದ್ದರೆ, ಜಗಳವಾಗುತ್ತಿದ್ದರೆ ನಿಮ್ಮ ಬಗ್ಗೆ ನೀವು ಏನಾದರೂ ಮಾತಾಡಿಕೊಳ್ಳಿ. ಆದರೆ ನಿಮ್ಮ ಕುಟುಂಬದವರ ಬಗ್ಗೆ ಇಲ್ಲಿ ಮಾತಾಡಬೇಡಿ. ಇದು ವ್ಯಕ್ತಿತ್ವದ ಆಟ ಎನ್ನುವ ನಿಮ್ಮನ್ನು ಕೋಟ್ಯಂತರ ಜನ ನೋಡುತ್ತಿರುವಾಗ ಹೀಗೆಲ್ಲ ಮಾತಾಡಿದರೆ ಆಗ ನಿಮ್ಮ ವ್ಯಕ್ತಿತ್ವದ ಬೆಲೆ ಏನು? ಎಂದು ಕಿಡಿಕಾರಿದ್ದಾರೆ.
ಗಗನ್ ಅವರ ಬಗ್ಗೆ ನೂರು ಮಾತಾಡಿ, ಅವರ ಬಗ್ಗೆ ಏನೂ ಬೇಕಾದರೂ ಹೇಳಿ. ಅವರ ಮಾತಿನ ವಿರುದ್ಧ ನಿಲ್ಲಿ. ಆದರೆ ಇದೆಲ್ಲವನ್ನು ಬಿಟ್ಟು ಅವರ ಮನೆಯ ವಿರುದ್ಧ ಹೋಗೋದ್ಯಾಕೆ? ಎಂದು ಹೇಳುತ್ತಲೇ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ದೊಡ್ಮನೆಯಲ್ಲಿ ಬೀಪ್ಗಳದ್ದೇ ಸದ್ದು; ಮಂಜು ಜೊತೆ ಈ ಮೂರು ಸ್ಪರ್ಧಿಗಳಿಗೂ ಎಲಿಮಿನೇಷನ್ ಭೀತಿ

