Connect with us

International

ತನ್ನ ಬೈಕ್ ಮೇಲೆ ಕುಳಿತೇ ಮತ್ತೊಂದು ಬೈಕ್‍ನಲ್ಲಿ ಲಿಫ್ಟ್ ಪಡೆದ

Published

on

ಮನಿಲಾ: ಬೈಕ್ ಅಥವಾ ಯಾವುದೇ ವಾಹನ ರಸ್ತೆ ಮಧ್ಯೆ ಕೆಟ್ಟು ಹೋದ್ರೆ ಬೇರೆ ವಾಹನಗಳಿಂದ ಲಿಫ್ಟ್ ಪಡೆಯೋದು ಕಾಮನ್. ಈ ವೇಳೆ ಕೆಟ್ಟು ಹೋದ ವಾಹನವನ್ನ ಲಾಕ್ ಮಾಡಿ ಅಲ್ಲೇ ಬಿಟ್ಟು ಲಿಫ್ಟ್ ಕೊಡಲು ಒಪ್ಪಿದವರ ವಾಹನ ಏರಿ ಹೋಗ್ತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ತಾನು ಮಾತ್ರವಲ್ಲದೇ ತನ್ನ ಬೈಕಿಗೂ ಲಿಫ್ಟ್ ಪಡೆದಿದ್ದಾನೆ.

ಫಿಲಿಪೈನ್ಸ್‍ನಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಈ ವಿಡಿಯೋವನ್ನ ಡಿಸೆಂಬರ್ 8ರಂದು ಸೆರೆಹಿಡಿಲಾಗಿದೆ. ಬೈಕ್ ಮೇಲೆ ಚಾಲಕ, ಆತನ ಹಿಂದೆ ಸೀಟ್ ಮೇಲೆ ಮತ್ತೊಂದು ಬೈಕ್, ಆ ಬೈಕ್ ಮೇಲೆ ವ್ಯಕ್ತಿ ಕುಳಿತಿರೋದನ್ನ ಕಾಣಬಹುದು.

ಇದನ್ನ ನೋಡಿ ಅಚ್ಚರಿಗೊಂಡ ಪ್ರತ್ಯಕ್ಷದರ್ಶಿಯೊಬ್ಬರು ಈ ದೃಶ್ಯ ಮತ್ತೆಲ್ಲೂ ನೋಡಲು ಸಿಗಲ್ಲ ಅಂತ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ.

ಲಿಫ್ಟ್ ಪಡೆದ ವ್ಯಕ್ತಿಯ ಬೈಕ್ ಕೆಟ್ಟು ಹೋಗಿತ್ತು ಎಂದು ವಿಡಿಯೋ ಸೆರೆಹಿಡಿದ ವ್ಯಕ್ತಿ ಹೇಳಿದ್ದಾರೆ. ವ್ಯಕ್ತಿಯನ್ನ ಮನೆಗೆ ಕರೆದೊಯ್ಯುವಾಗ ಆತ ತನ್ನ ಬೈಕ್ ಮೇಲೆಯೇ ಕುಳಿತಿದ್ದ. ಇದನ್ನ ಈ ಹಿಂದೆ ಎಲ್ಲೂ ನೋಡಿಲ್ಲ. ಫಿಲಿಪೈನ್ಸ್‍ನಲ್ಲಿ ಮಾತ್ರ ಎಂದು ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *