-2016ರಲ್ಲೇ ಕಟ್ಟಡ ತೆರವಿಗೆ ಆದೇಶಿಸಿದ್ದ ಸರ್ಕಾರ
ಲಕ್ನೋ: ಅಲಿಗಂಜ್‌ನ (Aliganj) ಕೋಚಿಂಗ್ ಸೆಂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡು 15 ಜನರು ಸಾವನ್ನಪ್ಪಿದ ಬೆನ್ನಲ್ಲೇ ಲಕ್ನೋ ಅಭಿವೃದ್ಧಿ ಪ್ರಾಧಿಕಾರ (Lucknow Development Authority) ಕಟ್ಟಡ ತೆರವಿಗೆ ಆದೇಶ ಹೊರಡಿಸಿದೆ.
ಲಕ್ನೋ ಅಭಿವೃದ್ಧಿ ಪ್ರಾಧಿಕಾರ (LDA)) ಸದ್ಯ ಮಾಲೀಕರಿಗೆ ಕಟ್ಟಡವನ್ನು ತೆರವುಗೊಳಿಸುವಂತೆ ಆದೇಶಿಸಿದೆ. ಒಂದು ವೇಳೆ ತೆರವುಗೊಳಿಸದಿದ್ದರೆ ಖುದ್ದು ಪ್ರಾಧಿಕಾರವೇ ಕಟ್ಟಡವನ್ನು ನೆಲಸಮಗೊಳಿಸುವುದಾಗಿ ತಿಳಿಸಿದೆ. ಇದನ್ನೂ ಓದಿ:ಲಕ್ನೋ ಅಗ್ನಿ ಅವಘಡ | ಅಪ್ಪಾ, ಇಲ್ಲಿ ಬೆಂಕಿ ಹೊತ್ತಿಕೊಂಡಿದೆ, ನನ್ನನ್ನು ಕಾಪಾಡು ಬಾ: ತಂದೆಗೆ ಕರೆ ಮಾಡಿದ್ದ ಮಗ

2016ರಲ್ಲೇ ಕಟ್ಟಡ ತೆರವಿಗೆ ಆದೇಶ:
ಈ ಜಾಗವನ್ನು ಮೊದಲು 1980ರಲ್ಲಿ ವಿಜಯ್ ಕುಮಾರ್ ಅವರಿಗೆ ನೀಡಲಾಗಿತ್ತು. 2005ರಲ್ಲಿ ಇದು ಅವರ ಮತ್ತು ಅವರ ಪತ್ನಿಯ ಹೆಸರಿಗೆ ನೋಂದಣಿಯಾಗಿತ್ತು. ನಂತರ, 2013ರಲ್ಲಿ ಅವರು ಇದನ್ನು ವೀರೇಂದ್ರ ಮತ್ತು ಸುರೇಂದ್ರ ಶುಕ್ಲಾ ಅವರಿಗೆ ಮಾರಾಟ ಮಾಡಿ, 2014ರಲ್ಲಿ ಅವರ ಹೆಸರಿಗೆ ವರ್ಗಾವಣೆ ಮಾಡಲಾಗಿತ್ತು.
2014ರಲ್ಲಿ ಸುಮಾರು 1,992 ಚದರ ಅಡಿಯ ಈ ಕಟ್ಟಡಕ್ಕೆ ಮನೆ ಕಟ್ಟಲು ಸ್ವಯಂ ಪ್ರಮಾಣೀಕರಣ ಯೋಜನೆಯಡಿ ಅಧಿಕೃತ ಅನುಮೋದನೆ ಸಿಕ್ಕಿತ್ತು. 2016ರಲ್ಲಿ ಈ ಕಟ್ಟಡವು ಅನಧಿಕೃತ ನಿರ್ಮಾಣ ಎಂಬ ಆರೋಪ ಎದುರಿಸಿತ್ತು. ಇದರಿಂದಾಗಿ ಕಟ್ಟಡ ತೆರವಿಗೆ ಆದೇಶ ನೀಡಲಾಗಿತ್ತು ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ. ಆದರೆ, ಕೇವಲ ಎರಡು ತಿಂಗಳ ಒಳಗೆ ಕಟ್ಟಡ ತೆರವಿಗಾಗಿ ನೀಡಿದ್ದ ಆದೇಶವನ್ನು ರದ್ದುಗೊಳಿಸಲಾಗಿತ್ತು.ಇದನ್ನೂ ಓದಿ: ಲಕ್ನೋದ ಕೋಚಿಂಗ್ ಸೆಂಟರ್‌ನಲ್ಲಿ ಘನಘೋರ ಅಗ್ನಿ ದುರಂತ; 11 ಮಂದಿ ಸಜೀವ ದಹನ

ಆಗಿದ್ದೇನು?
ಲಕ್ನೋದ ಅಲಿಗಂಜ್ ಪ್ರದೇಶದಲ್ಲಿ ಕೋಚಿಂಗ್ ಸೆಂಟರ್ ಇತ್ತು. ಅದೇ ಕಟ್ಟಡದ ನೆಲಮಹಡಿಯಲ್ಲಿ ಪ್ರಾಣಿಗಳ ಮಾರಾಟದ ಅಂಗಡಿಯಿತ್ತು. ಅಲ್ಲಿ ಹೊತ್ತಿಕೊಂಡ ಬೆಂಕಿ ಬಳಿಕ ಉಳಿದ ಮಹಡಿಗೂ ಪಸರಿಸಿದೆ. ದಟ್ಟ ಹೊಗೆ ಆವರಿಸಿದ ಪರಿಣಾಮ 24 ಮಂದಿ ಗಾಯಗೊಂಡಿದ್ದು, ಆ ಪೈಕಿ 15 ಮಂದಿ ಸಾವನ್ನಪ್ಪಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ಆರೋಪದ ಮೇಲೆ ಲಕ್ನೋ ಅಭಿವೃದ್ಧಿ ಪ್ರಾಧಿಕಾರದ ಇಬ್ಬರು, ವಿದ್ಯುತ್ ಇಲಾಖೆಯ ಒಬ್ಬರು ಮತ್ತು ಅಗ್ನಿಶಾಮಕ ದಳದ ಒಬ್ಬರು ಸೇರಿದಂತೆ ನಾಲ್ಕು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಇನ್ನೂ ಈ ಸಂಬಂಧ ಸಿಎಂ ಯೋಗಿ ಆದಿತ್ಯನಾಥ್ ಎಸ್‌ಐಟಿ ತನಿಖೆ ಆದೇಶಿಸಿದ್ದು, ಇಬ್ಬರು ಸದಸ್ಯರನ್ನು ಹೊಂದಿರುವ ತಂಡವನ್ನು ರಚಿಸಲಾಗಿದೆ.

ಪೊಲೀಸರು ಈಗಾಗಲೇ ಕಟ್ಟಡದ ಜಂಟಿ ಮಾಲೀಕರಾದ ರಾಮ್ ಕೃಷ್ಣ ಉಪಾಧ್ಯಾಯ, ವೀರೇಂದ್ರ ಪ್ರಸಾದ್ ಶುಕ್ಲಾ, ತುಷಾರ್ ಕೃಷ್ಣ ಜೈಸ್ವಾಲ್ ಮತ್ತು ಸುರೇಶ್ ಕುಮಾರ್ ಸಾಹು ಎಂಬ ನಾಲ್ವರನ್ನು ಬಂಧಿಸಿದ್ದಾರೆ.ಇದನ್ನೂ ಓದಿ: ಲಕ್ನೋ ಕೋಚಿಂಗ್ ಸೆಂಟರ್ ಅಗ್ನಿ ದುರಂತ; ಮೃತರ ಕುಟುಂಬಗಳಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ ಪ್ರಧಾನಿ
