ಲಕ್ನೋ: ವಾಯುವ್ಯ ಲಕ್ನೋದ ಅಲಿಗಂಜ್ ಪ್ರದೇಶದಲ್ಲಿ ತರಬೇತಿ ಕೇಂದ್ರವಿದ್ದ (Lucknow Coaching Centre) ಕಟ್ಟಡದಲ್ಲಿ ಸೋಮವಾರ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ದುರಂತ ಸಂಭವಿಸಿದ್ದು, ಕಟ್ಟಡದಲ್ಲಿ ಹಲವರು ಸಿಲುಕಿಕೊಂಡಿದ್ದರು. ಕೆಲವು ವಿದ್ಯಾರ್ಥಿಗಳು ಪ್ರಾಣ ರಕ್ಷಣೆಗಾಗಿ ಮೊದಲ ಮಹಡಿಯಿಂದ ಜಿಗಿದ ದೃಶ್ಯದ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದನ್ನೂ ಓದಿ: ಲಕ್ನೋದಲ್ಲಿ ಧಗಧಗನೆ ಹೊತ್ತಿ ಉರಿದ ಕೋಚಿಂಗ್ ಸೆಂಟರ್ – ಪಾರಾಗಲು ಕಟ್ಟಡದ ಮೇಲಿಂದ ಜಿಗಿದ ವಿದ್ಯಾರ್ಥಿಗಳು
ಬೆಂಕಿ ಕೆನ್ನಾಲಿಗೆ ಆವರಿಸಿದ್ದ ಕಟ್ಟಡದಿಂದ ಹುಡುಗನೊಬ್ಬ ಕೆಳಕ್ಕೆ ಜಿಗಿಯುತ್ತಾನೆ. ಗೇಟ್‌ಗೆ ಬಡಿದು ನೆಲಕ್ಕೆ ಅಪ್ಪಳಿಸುತ್ತಾನೆ. ಅಲ್ಲೇ ನೆರೆದಿದ್ದ ಕೆಲವರು ಆತನಿಗೆ ಸಹಾಯ ಮಾಡಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಾರೆ. ಹುಡುಗನಿಗೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.
ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಕೂಡ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಗಳ ಮೇಲ್ವಿಚಾರಣೆ ನಡೆಸಿದ್ದಾರೆ.
ಇದು ಮೂರು ಅಂತಸ್ತಿನ ಕಟ್ಟಡ. ಮೇಲಿನ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಬೇಗನೆ ಇಡೀ ಕಟ್ಟಡಕ್ಕೆ ಹರಡಿತು. ರಕ್ಷಣಾ ಕಾರ್ಯದ ಭಾಗವಾಗಿ ಕೆಲವು ಕಿಟಕಿಗಳು ಒಡೆದುಹಾಕಲಾಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ರಾಮಮಂದಿರ ದೇಣಿಗೆ ದುರ್ಬಳಕೆ – ಸಿಎಂ ಯೋಗಿಗೆ SIT ವರದಿ, ಇತ್ತ ಪಿಎಂ ಕಚೇರಿಗೂ ತಲುಪಿದ ಗೌಪ್ಯ ವರದಿ
ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಜನರು ಕಟ್ಟಡದೊಳಗೆ ಸಿಲುಕಿಕೊಂಡಿದ್ದರು. ಐದರಿಂದ ಏಳು ವಿದ್ಯಾರ್ಥಿಗಳು ಬೆಂಕಿ ಅವಘಡದಿಂದ ಪಾರಾಗಲು ಕಟ್ಟಡದ ಮೇಲಿಂದ ಕೆಳಗೆ ಹಾರಿ ಬಿದ್ದಿದ್ದಾರೆ. ಅವರಲ್ಲಿ ಒಬ್ಬರಿಗೆ ಮೂಳೆಗಳು ಮುರಿದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
