BidarCrimeDistrictsKarnatakaLatestLeading NewsMain Post

ಪ್ರಿಯಕರ ನೇಣಿಗೆ ಶರಣಾದ ಸುದ್ದಿ ಕೇಳ್ತಿದ್ದಂತೆ ಪ್ರಿಯತಮೆಯೂ ಆತ್ಮಹತ್ಯೆ

ಬೀದರ್‌: ಪ್ರೀತಿಗೆ ವಿರುದ್ಧವಾಗಿ ಮದುವೆ ಮಾಡಲು ಮುಂದಾಗಿದ್ದರಿಂದ ಮನನೊಂದ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿಕೊಂಡಿರುವ ದಾರುಣ ಘಟನೆ ಬೀದರ್ ನಲ್ಲಿ ನಡೆದಿದೆ.

ನಗರದ ಲಾಡಗೇರಿ ಬಡಾವಣೆಯ ಶರತ್ (28) ಹಾಗೂ ಸಂಗೀತಾ (26) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಇದನ್ನೂ ಓದಿ: Breaking: ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾಗೆ ರಾಜ್ ಬಿ ಶೆಟ್ಟಿ ಆ್ಯಕ್ಷನ್ ಕಟ್

crime

ಹಲವು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಸಂಗೀತಾಗೆ ಬೇರೊಂದು ಹುಡುಗನ ಜೊತೆ ನಿಶ್ಚಿತಾರ್ಥ ನಡೆದಿತ್ತು. ಈ ವಿಷಯ ತಿಳಿದ ಶರತ್‌ ಮೊದಲು ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಿಯಕರ ಶರತ್‌ ಸಾವಿನ ಸುದ್ದಿ ಕೇಳಿದ ಸಂಗೀತಾ ಬಾವಿಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಕುರಿತು ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Live Tv

Leave a Reply

Your email address will not be published.

Back to top button