– ಹೋಟೆಲ್‌ನಲ್ಲಿ ಸಿಕ್ಕಿಬಿದ್ದಿದ್ದ ಅಪ್ರಾಪ್ತ ಬಾಲಕಿ, ಮುಸ್ಲಿಂ ಯುವಕ
ಕೊಪ್ಪಳ: ಇತ್ತೀಚೆಗಷ್ಟೇ ಜಿಲ್ಲೆಯಲ್ಲಿ ನಡೆದಿದ್ದ ಲವ್ ಜಿಹಾದ್ (Lova Jihad) ಪ್ರಕರಣ ಮರೆಯುವ ಮುನ್ನವೇ ಮತ್ತೊಂದು ಲವ್ ಜಿಹಾದ್ ಪ್ರಕರಣ ನಡೆದಿರುವ ಶಂಕೆ ವ್ಯಕ್ತವಾಗಿದೆ. ಹೋಟೆಲ್‌ನಲ್ಲಿ ಸಿಕ್ಕಿಬಿದ್ದ ಅಪ್ರಾಪ್ತ ಹಿಂದೂ ಬಾಲಕಿ ಹಾಗೂ ಮುಸ್ಲಿಂ ಯುವಕನನ್ನು ಪ್ರಶ್ನಿಸಿದ್ದಕ್ಕೆ 8 ಭಜರಂಗದಳ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಕೊಪ್ಪಳ (Koppal) ನಗರದ ಖಾಸಗಿ ಹೋಟೆಲ್‌ನಲ್ಲಿ ಅಪ್ರಾಪ್ತ ಹಿಂದೂ ಯುವತಿಯ ಜೊತೆಗೆ ಮುಸ್ಲಿಂ ಯುವಕ ಸಿಕ್ಕಿಬಿದ್ದಿದ್ದ. ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಭಜರಂಗದಳದ ಕಾರ್ಯಕರ್ತರು ಪ್ರಶ್ನೆ ಮಾಡಿದ್ರು. ಈ ವೇಳೆ ಸಮೀರ್ ಹಾಗೂ ಭಜರಂಗದಳದ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಪರಸ್ಪರ ಹಲ್ಲೆಯಾಗಿದೆ. ಇದನ್ನೂ ಓದಿ: 10 ಸಾವಿರ ಉಚಿತ ಟಿಕೆಟ್ ಕೇಳಿದ್ದಕ್ಕೆ ಬೆಂಗಳೂರಿನಿಂದ ಅಹಮದಾಬಾದ್‌ಗೆ ಐಪಿಎಲ್ ಫೈನಲ್ ಶಿಫ್ಟ್
ಈ ಸಂಬಂಧ ಸಮೀರ್ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ದೂರಿನನ್ವಯ ಪೊಲೀಸರು 8 ಭಜರಂಗದಳದ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಇನ್ನು ಪ್ರಕರಣದ ಕುರಿತು ಅಪ್ರಾಪ್ತ ಬಾಲಕಿಯ ಪೋಷಕರು ಕಳವಳ ವ್ಯಕ್ತಪಡಿಸಿದ್ದಾರೆ.
ಇನ್ನು ಘಟನೆಯ ವಿಷಯ ತಿಳಿಯುತ್ತಲೇ ನಗರ ಪೊಲೀಸ್ ಠಾಣೆಗೆ ಎಸ್ಪಿ ಡಾಕ್ಟರ್ ರಾಮ್ ಅರಸಿದ್ದಿ ಭೇಟಿ ನೀಡಿದ್ದಾರೆ. ಬಳಿಕ ಬಿಜೆಪಿ ನಾಯಕರು ಹಾಗೂ ನೂರಾರು ಹಿಂದೂ ಕಾರ್ಯಕರ್ತರು ಸಹ ಠಾಣೆಗೆ ಆಗಮಿಸಿದ್ದರು. ಈ ವೇಳೆ ಠಾಣೆಯಲ್ಲಿ ಬಿಜೆಪಿ ನಾಯಕರು ಎಸ್ಪಿ ಮಧ್ಯೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಲವ್ ಜಿಹಾದ್ ನಡೆದ್ರೂ ಪೊಲೀಸರು ವಿನಾಕಾರಣ ಹಿಂದೂ ಕಾರ್ಯಕರ್ತರಿಗೆ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅಪ್ರಾಪ್ತ ಹಿಂದೂ ಬಾಲಕಿಯನ್ನು ಪುಸಲಾಯಿಸಿ ಲವ್ ಜಿಹಾದ್‌ಗೆ ಯತ್ನಿಸಿದ ಆರೋಪಿ ಸಮೀರ್‌ನನ್ನು ಬಂಧಿಸಬೇಕೆಂದು ಬಿಜೆಪಿ ನಾಯಕರು ಪಟ್ಟುಹಿಡಿದಿದ್ದಾರೆ. ಕೊಪ್ಪಳದಲ್ಲಿ ಲವ್ ಜಿಹಾದ್‌ನಂತಹ ಪ್ರಕರಣಗಳು ಪದೇ ಪದೇ ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಕೈಗಾ ಅಣುಸ್ಥಾವರಕ್ಕೆ ಬರುತ್ತಿದ್ದ 140 ಟನ್ ತೂಕದ ಯಂತ್ರ ಹೊತ್ತ ವಾಹನ ಪಲ್ಟಿ

