ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ(Chinnaswamy Stadium) ನಡೆಯಬೇಕಿದ್ದ ಐಪಿಎಲ್ 2026ರ ಫೈನಲ್ (IPL Final) ಪಂದ್ಯವನ್ನು ಅಹಮದಾಬಾದ್‌ಗೆ ಸ್ಥಳಾಂತರಿಸಲು 10 ಸಾವಿರ ಹೆಚ್ಚುವರಿ ಉಚಿತ ಟಿಕೆಟ್‌ಗಳ (ComplimentaryTickets) ಟಿಕೆಟ್‌ಗಳ ಬೇಡಿಕೆಯೇ ಮುಖ್ಯ ಕಾರಣ ಎಂದು ಬಿಸಿಸಿಐ (BCCI) ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ.
ಸೈಕಿಯಾ ಅವರ ಪ್ರಕಾರ, ಐಪಿಎಲ್ ಶಿಷ್ಟಾಚಾರದ ಅನ್ವಯ ಕೇವಲ ಶೇ. 15ರಷ್ಟು ಉಚಿತ ಟಿಕೆಟ್‌ಗಳನ್ನು ಮಾತ್ರ ಆತಿಥೇಯ ಸಂಸ್ಥೆಗೆ ನೀಡಲು ಅವಕಾಶವಿದೆ. ಆದರೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು (KSCA) ಇದಕ್ಕಿಂತ ಹೆಚ್ಚುವರಿಯಾಗಿ ಸುಮಾರು 10 ಸಾವಿರ ಟಿಕೆಟ್‌ಗಳನ್ನು ನೀಡುವಂತೆ ಪಟ್ಟು ಹಿಡಿದಿತ್ತು ಎಂದು ಹೇಳಿದರು.
ಮೇ 2ರಂದು ಕೆಎಸ್‌ಸಿಎ ಕಳುಹಿಸಿದ ಇಮೇಲ್ ನೋಡಿ ನಾವು ಶಾಕ್‌ಗೆ ಒಳಗಾದೆವು. ಆ ಇಮೇಲ್‌ನಲ್ಲಿ ಶಾಸಕರು (MLAs), ವಿಧಾನ ಪರಿಷತ್ ಸದಸ್ಯರು (MLCs) ಮತ್ತು ಕರ್ನಾಟಕ ಸರ್ಕಾರಕ್ಕಾಗಿ (700 ಟಿಕೆಟ್‌ಗಳು) ದೊಡ್ಡ ಪ್ರಮಾಣದ ಉಚಿತ ಟಿಕೆಟ್‌ಗಳನ್ನು ಕೇಳಲಾಗಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ಮೇ 9ಕ್ಕೆ ರಾಜಸ್ಥಾನ್ ರಾಯಲ್ಸ್ ಆಡಲಿದೆ `Pink Promise Match’

ಇಷ್ಟು ದೊಡ್ಡ ಪ್ರಮಾಣದ ಉಚಿತ ಟಿಕೆಟ್‌ಗಳನ್ನು ನೀಡಲು ಸಾಧ್ಯವಾಗದ ಕಾರಣ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಕಡಿಮೆ ಆಸನ ಸಾಮರ್ಥ್ಯದಿಂದಾಗಿ (36 ಸಾವಿರ) ಬಿಸಿಸಿಐ ಫೈನಲ್ ಪಂದ್ಯವನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂಗೆ (1.30 ಲಕ್ಷ ಸಾಮರ್ಥ್ಯ) ಸ್ಥಳಾಂತರ ಮಾಡಿದೆ. ಇದನ್ನೂ ಓದಿ: ಮೆಗಾ ಡೀಲ್ – ಸನ್ ರೈಸರ್ಸ್ ಕ್ಯಾಪ್ಟನ್ ಪ್ಯಾಟ್ ಕಮ್ಮಿನ್ಸ್‌ಗೆ ಬಂತು 113 ಕೋಟಿ ಆಫರ್
ಲೀಗ್ ಪಂದ್ಯಗಳಲ್ಲಿ ಕೆಲವು ರಿಯಾಯಿತಿ ಕೊಡಬಹುದು. ಆದರೆ ಪ್ಲೇ-ಆಫ್ ಮತ್ತು ಫೈನಲ್ ಪಂದ್ಯಗಳು ಸಂಪೂರ್ಣವಾಗಿ ಬಿಸಿಸಿಐ ನಿಯಂತ್ರಣದಲ್ಲಿರುತ್ತವೆ. ಅಲ್ಲಿ ಯಾವುದೇ ಶಿಷ್ಟಾಚಾರದ ಉಲ್ಲಂಘನೆಗೆ ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

