ಜೈಪುರ: ಐಪಿಎಲ್ 2026ರ ಆವೃತ್ತಿಯಲ್ಲಿ ಮೇ 9ರಂದು ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡ `ಪಿಂಕ್ ಪ್ರಾಮೀಸ್ ಮ್ಯಾಚ್’ (Pink Promise Match) ಆಡಲಿದೆ.
ಶನಿವಾರ (ಮೇ 9) ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಆರ್‌ಸಿಬಿ (RCB) ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಸಂಪೂರ್ಣ ಗುಲಾಬಿ ಬಣ್ಣದ ವಿಶೇಷ ಜೆರ್ಸಿ ಧರಿಸಿ ಕಣಕ್ಕಿಳಿಯಲಿದೆ. ಇದನ್ನೂ ಓದಿ: ಕಳಪೆ ಫೀಲ್ಡಿಂಗ್; ಪಂಜಾಬ್‌ಗೆ ಹ್ಯಾಟ್ರಿಕ್ ಸೋಲು – ಹೈದರಾಬಾದ್‌ಗೆ 33 ರನ್‌ಗಳ ಭರ್ಜರಿ ಜಯ
ಈ ಮೂಲಕ ರಾಜಸ್ಥಾನದ ಮಹಿಳೆಯರ ಸಬಲೀಕರಣಕ್ಕೆ ನೆರವಾಗುವ ಉದ್ದೇಶವನ್ನು ಹೊಂದಿದೆ. ಇದು ಕೇವಲ ಕ್ರೀಡೆಯಾಗಿರದೇ, ಸಮಾಜ ಕಲ್ಯಾಣಕ್ಕಾಗಿ, ಮುಖ್ಯವಾಗಿ ರಾಜಸ್ಥಾನದ ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕಾಗಿ ಕೈಗೊಂಡಿರುವ ಒಂದು ಮಹತ್ವದ ಹೆಜ್ಜೆಯಾಗಿದೆ. ಈ ಪಂದ್ಯದ ಮೂಲಕ ರಾಜಸ್ಥಾನದ ಗ್ರಾಮೀಣ ಮಹಿಳೆಯರಿಗೆ ಶಿಕ್ಷಣ, ಆರೋಗ್ಯ ಮತ್ತು ಜೀವನೋಪಾಯದ ಅಗತ್ಯತೆಗಳನ್ನು ನೆರವೇರಿಸುವ “ರಾಯಲ್ ರಾಜಸ್ಥಾನ್ ಫೌಂಡೇಶನ್’ಗೆ ಬೆಂಬಲ ನೀಡಲಾಗುತ್ತದೆ.
Another year, another #PinkPromise 💗
Today, alongside the change-makers of Sambhar, Rajasthan, we unveiled our special all-Pink jersey which we’ll wear on May 9 – where every six hit will help light up six homes in Rajasthan ☀️💗 pic.twitter.com/pk35ImLHLa
— Rajasthan Royals (@rajasthanroyals) May 6, 2026
ಏನಿದು ಪಿಂಕ್ ಪ್ರಾಮಿಸ್ ಅಭಿಯಾನ?
ರಾಜಸ್ಥಾನ್ ರಾಯಲ್ಸ್ ತಂಡವು ಮಹಿಳಾ ಸಬಲೀಕರಣ ಉದ್ದೇಶದಿಂದ 2024ರಲ್ಲಿ ಈ ಅಭಿಯಾನ ಆರಂಭಿಸಿತ್ತು. ಈ ಪಂದ್ಯದ ಪ್ರತಿ ಟಿಕೆಟ್ ಬೆಲೆಯಲ್ಲಿ 100 ರೂ.ಗಳನ್ನ ಮಹಿಳಾ ಸಬಲೀಕರಣ ಕಾರ್ಯಕ್ಕೆ ಸಮರ್ಪಿಸಲಿದೆ. ಜೊತೆಗೆ ಪಿಂಕ್ ರಾಯಲ್ಸ್ ಜೆರ್ಸಿ ಮಾರಾಟದ ಮೊತ್ತವನ್ನೂ ಇದಕ್ಕೆ ವಿನಿಯೋಗಿಸಲಿದೆ. ಅಷ್ಟೇ ಅಲ್ಲದೇ ರಾಜಸ್ಥಾನ-ಆರ್‌ಸಿಬಿ ತಂಡಗಳು ಈ ಪಂದ್ಯದಲ್ಲಿ ಸಿಡಿಸುವ ಪ್ರತಿ ಸಿಕ್ಸರ್‌ಗೆ ರಾಜಸ್ಥಾನದಲ್ಲಿ ಗ್ರಾಮವೊಂದರ ಪ್ರತಿ 6 ಮನೆಗಳಿಗೆ ಸೌರಶಕ್ತಿಯನ್ನು ಫ್ರಾಂಚೈಸಿ ವತಿಯಿಂದ ಒದಗಿಸಲಾಗುತ್ತದೆ.
ಐಪಿಎಲ್‌ನಲ್ಲಿ ಕಂಡ ವಿಶೇಷ ಅಭಿಯಾನಗಳು?
ಬಿಸಿಸಿಐ ಸೇರಿದಂತೆ ಹಲವು ಫ್ರಾಂಚೈಸಿಗಳು ಐಪಿಎಲ್ ಟೂರ್ನಿಯನ್ನ ಕೇವಲ ಹಣದ ಉದ್ದೇಶಕ್ಕಾಗಿ ನಡೆಸದೇ ವಿಶಿಷ್ಟ ಜಾಗೃತಿ ಅಭಿಯಾನಗಳನ್ನೂ ಹಮ್ಮಿಕೊಳ್ಳಲಾಗುತ್ತದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರತಿ ಆವೃತ್ತಿಯ ಒಂದು ಪಂದ್ಯದಲ್ಲಿ ಹಸಿರು ಪರಿಸರ ಜಾಗೃತಿ ದೃಷ್ಟಿಯಿಂದ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯುತ್ತದೆ. 2023ರಲ್ಲಿ ಗುಜರಾತ್ ಟೈಟಾನ್ಸ್ ತಂಡವು ಅನ್ನನಾಳದ ಕ್ಯಾನ್ಸರ್ ಕುರಿತು ಜಾಗೃತಿಗಾಗಿ ಲ್ಯಾವೆಂಡರ್ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿದಿತ್ತು.ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಬಾರಿಯ ಐಪಿಎಲ್ ಫೈನಲ್ ನಡೆಯೋದು ಡೌಟ್?

