ಹೈದರಾಬಾದ್: ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL 2026) ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ನಾಯಕ ಪ್ಯಾಟ್ ಕಮ್ಮಿನ್ಸ್ (Pat Cummins) ಅವರಿಗೆ ಭರ್ಜರಿ ಆಫರ್ ಬಂದಿದೆ.
ಹೌದು. ಪ್ಯಾಟ್ ಕಮ್ಮಿನ್ಸ್ ಅವರಿಗೆ ಕ್ರಿಕೆಟ್ ಆಸ್ಟ್ರೇಲಿಯಾ (Cricket Australia) ಮಂಡಳಿಯಿಂದ 113 ಕೋಟಿ ರೂ. ಒಪ್ಪಂದದ ಆಫರ್ ಬಂದಿದೆ. ಮುಂದಿನ ಮೂರು ವರ್ಷಗಳ ವರೆಗೆ ಅಂದ್ರೆ 2029ರ ವರೆಗೆ ರಾಷ್ಟ್ರೀಯ ತಂಡಕ್ಕೆ ಅವರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕ್ರಿಕೆಟ್ ಆಸ್ಟ್ರೇಲಿಯಾ ವಾರ್ಷಿಕ 4 ಮಿಲಿಯನ್ ಡಾಲರ್‌ನಂತೆ 12 ಮಿಲಿಯನ್ ಡಾಲರ್ (ಸುಮಾರು 113 ಕೋಟಿ ರೂ.) ಗಳ ಆಫರ್ ನೀಡಿದೆ. ಇದನ್ನೂ ಓದಿ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಬಾರಿಯ ಐಪಿಎಲ್ ಫೈನಲ್ ನಡೆಯೋದು ಡೌಟ್?

ಈಗಾಗಲೇ ರಾಷ್ಟ್ರೀಯ ಟಿ20 ತಂಡದಿಂದ ಹೊರಗುಳಿದಿರುವ ಪ್ಯಾಟ್ ಕಮ್ಮಿನ್ಸ್, ಐಪಿಎಲ್ ಮತ್ತು ಬಿಗ್‌ಬ್ಯಾಶ್‌ನಂತ ಟಿ20 ಲೀಗ್‌ಗಳಲ್ಲಿ ಮಾತ್ರ ಆಡುತ್ತಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಐಪಿಎಲ್‌ನ ಕೆಲ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇದರ ಮಧ್ಯೆ ಕ್ರಿಕೆಟ್ ಆಸ್ಟ್ರೇಲಿಯಾ 3 ವರ್ಷಗಳಿಗೆ ಬಿಗ್ ಆಫರ್ ನೀಡಿದೆ. ಈ ಬಗ್ಗೆ ಕಮ್ಮಿನ್ಸ್ ಇನ್ನೂ ಯಾವುದೇ ನಿರ್ಣಯ ಕೈಗೊಂಡಿಲ್ಲ.

ಫ್ರಾಂಚೈಸಿಯಿಂದಲೂ ಭರ್ಜರಿ ಆಫರ್
ಕ್ರಿಕೆಟ್ ಆಸ್ಟ್ರೇಲಿಯಾಗೂ ಮುನ್ನ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಜಾಗತಿಕ ಟಿ20 ಲೀಗ್‌ಗಳಲ್ಲಿ ಪ್ರತಿನಿಧಿಸಲು ವಾರ್ಷಿಕ 10 ಮಿಲಿಯನ್ ಡಾಲರ್ ಅಂದ್ರೆ ಸುಮಾರು 94 ಕೋಟಿ ರೂ.ಗಳ ಆಫರ್ ನೀಡಿದೆ. ಇದ್ಯಾವುದಕ್ಕೂ ಕಮ್ಮಿನ್ಸ್ ಸ್ಪಷ್ಟನೆ ನೀಡಿಲ್ಲ. ಇದನ್ನೂ ಓದಿ: ಮೇ 9ಕ್ಕೆ ರಾಜಸ್ಥಾನ್ ರಾಯಲ್ಸ್ ಆಡಲಿದೆ `Pink Promise Match’
ಈ ಬಾರಿ ಐಪಿಎಲ್‌ಗೂ ಮುನ್ನವೇ ಗಾಯದ ಸಮಸ್ಯೆಗೆ ತುತ್ತಾಗಿದ್ದ ಕಮ್ಮಿನ್ಸ್ ಆರಂಭಿಕ ಕೆಲ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಮತ್ತೆ ಸನ್ ರೈಸರ್ಸ್ ತಂಡ ಸೇರಿಕೊಂಡಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಕೊಂಡೊಯ್ದಿದ್ದಾರೆ. ಇದನ್ನೂ ಓದಿ: ಕಳಪೆ ಫೀಲ್ಡಿಂಗ್; ಪಂಜಾಬ್‌ಗೆ ಹ್ಯಾಟ್ರಿಕ್ ಸೋಲು – ಹೈದರಾಬಾದ್‌ಗೆ 33 ರನ್‌ಗಳ ಭರ್ಜರಿ ಜಯ

ದುಬಾರಿ ಆಟಗಾರನೆಂಬ ದಾಖಲೆ
2024ರ ಐಪಿಎಲ್ ಟೂರ್ನಿಗೆ ನಡೆದ ಮೆಗಾ ಹರಾಜಿನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 20.50 ಕೋಟಿ ರೂ.ಗೆ ಬಿಕರಿಯಾಗಿದ್ದ ಪ್ಯಾಟ್ ಕಮ್ಮಿನ್ಸ್, ತಂಡವನ್ನ ಅದೇ ಆವೃತ್ತಿಯಲ್ಲಿ ಫೈನಲ್‌ವರೆಗೆ ಕೊಂಡೊಯ್ದಿದ್ದರು. 2026 ರಲ್ಲಿ 18 ಕೋಟಿಗೆ ಮತ್ತೆ ಫ್ರಾಂಚೈಸಿ ರೀಟೇನ್ ಮಾಡಿಕೊಂಡಿತು. ಕಮ್ಮಿನ್ಸ್ ಈ ಬಾರಿಯೂ ತಂಡವನ್ನ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. SRH 11 ಪಂದ್ಯಗಳಲ್ಲಿ 7 ರಲ್ಲಿ ಗೆಲುವು ಸಾಧಿಸಿದ್ದು, 14 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.

