ಯಶ್ ನಟಿಸಿ, ನಿರ್ಮಿಸಿರುವ ರಾಮಾಯಣ (Ramayana) ಚಿತ್ರ ಭಾರತೀಯ ಸಿನಿಮಾ ರಂಗದ ಹೈಯೆಸ್ಟ್ ಕಲೆಕ್ಷನ್ ಸಿನಿಮಾಗಳಿಗೆ ಸೆಡ್ಡು ಹೊಡೆದು ಮುನ್ನುಗ್ಗುತ್ತಿದೆ. ಸದ್ಯಕ್ಕೆ ದುರಂಧರ್ 2 (Dhurandhar) ಕಲೆಕ್ಷನ್ ದಾಖಲೆಯನ್ನೂ ಧೂಳಿಪಟ ಮಾಡಿರುವ ರಾಮಾಯಣ ಇದೀಗ ಟಾಪ್ ಮೊದಲ ಸ್ಥಾನಕ್ಕೆ ಗುರಿ ಇಟ್ಟಿದೆ. ಈ ನಡುವೆ ತಮ್ಮ ಚಿತ್ರಕ್ಕೆ ಪ್ರೇಕ್ಷಕರಿಂದ ಸಿಕ್ಕ ಪ್ರತಿಕ್ರಿಯೆಗೆ ಕೃತಜ್ಞತೆ ಸಲ್ಲಿಸಲು, ಬುಧವಾರದಂದು (ನ.25) ರಣಬೀರ್ ಕಪೂರ್, ನಮಿತ್ ಮತ್ತು ನಿತೇಶ್ ಗುರುದ್ವಾರಕ್ಕೆ ಭೇಟಿ ನೀಡಿದರು.
ರಾಮಾಯಣ ತಂಡ (ನ.25) ಬುಧವಾರ ಗುರುದ್ವಾರಕ್ಕೆ ಭೇಟಿ ನೀಡಿದ, ಬಳಿಕ ಗುರುವಾರ (ನ.26) ಚಿತ್ರತಂಡ ದೆಹಲಿಯ (Dehli) ಐತಿಹಾಸಿಕ ಗುರುದ್ವಾರ (Gurudwara) ಬಾಂಗ್ಲಾ ಸಾಹಿಬ್ಗೂ ಸಹ ಭೇಟಿ ನೀಡಿದರು. ರಾಮಾಯಣ ಚಿತ್ರದ ಭರ್ಜರಿ ಯಶಸ್ಸಿನ ನಂತರ ಪ್ರಾರ್ಥನೆ ಸಲ್ಲಿಸಲು, ಆಶೀರ್ವಾದ ಪಡೆಯಲು ತಮ್ಮ ಆಧ್ಮಾತ್ಮಿಕ ಪ್ರಯಾಣ ಮುಂದುವರೆಸಿದ್ದು ವಿಶೇಷ. ಇದನ್ನೂ ಓದಿ: ಅಮಿತ್ ಶಾ ಭೇಟಿಯಾದ ರಾಮಾಯಾಣ ಟೀಂ – ಜಾಗತಿಕ ಯಶಸ್ಸಿಗೆ ಮೆಚ್ಚುಗೆ
ಶ್ರೀರಾಮನ ಪಾತ್ರದಲ್ಲಿ ರಣಬೀರ್, ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ (Sai Pallavi) ಮತ್ತು ರಾವಣನ ಪಾತ್ರದಲ್ಲಿ ಯಶ್ ನಟಿಸಿರುವ `ರಾಮಾಯಣ’ ಚಿತ್ರವು, ರಾಮಾಯಣ ಸರಣಿಯ ಮೊದಲ ಭಾಗವಾಗಿದೆ. ಈ ಚಿತ್ರವು ರೂ. ಗಡಿಯನ್ನು ತಲುಪುವ ಹಂತದಲ್ಲಿದೆ. ಚಿತ್ರ ಬಿಡುಗಡೆಯಾಗಿ ಇನ್ನೂ ತಿಂಗಳು ಕಳೆದಿಲ್ಲ. ಅದಾಗಲೇ ಬಾಕ್ಸಾಫೀಸ್ನಲ್ಲಿ ದಾಖಲೆ ಬರೆದಿದೆ. ಇನ್ನೂ ಕಲೆಕ್ಷನ್ ಆರ್ಭಟ ಮುಂದುವರೆದಿದೆ.
