– ಕೊಲೆ ಸಮಯಕ್ಕೆ ಚೀಲ, ಸೀರೆ, ಹಗ್ಗ, ಟೇಪ್ ಹಿಡಿದು ಹೊರಗಡೆ ನಿಲ್ಲುತ್ತಿದ್ದಳು
– ಹತ್ಯೆ ಬಳಿಕ ತಾನೇ ಪೆನಾಯಿಲ್ ಹಾಕಿ ರಕ್ತ ವಾಶ್ ಮಾಡ್ತಿದ್ದ ಮಗಳು
ಬೆಂಗಳೂರು: ಒಂದೇ ಕುಟುಂಬದ 7 ಜನರ ದಾರುಣ ಹತ್ಯೆ ಪ್ರಕರಣದ ವಿಚಾರಣೆಯಲ್ಲಿ ಹಂತಕನ ಮಗಳ ಕರಾಳ ಮುಖ ಬಯಲಾಗಿದೆ. ಕೊಲೆಗಾರ ಪುತ್ರಿ ಅಪ್ರಾಪ್ತಳಾಗಿದ್ರೂ ಕ್ರೂರತೆಯ ಮನಸಿತ್ತು ಎಂಬುದು ತಿಳಿದುಬಂದಿದೆ.
ರಕ್ತದ ಮುದ್ದೆಯಂತಿದ್ದ ಶವದ ಪಕ್ಕದಲ್ಲೇ ಮಗಳು ರಾತ್ರಿಯಿಡೀ ಮಲಗಿದ್ದಳು. ಒಂದು ದಿನ ತಾಯಿ ಶವ, ಮತ್ತೊಂದು ದಿನ ಅಜ್ಜಿ ಮತ್ತು ತಾಯಿಯ ಶವದ ಜೊತೆ ಮಲಗಿದ್ದಳು. ಮಲಗಿದ್ದಾಗ ರಕ್ತ ಸೋರುತ್ತಿದ್ರೆ, ಟೇಪ್ ಹಾಕಿ ಟೈಟ್ ಆಗಿ ಕಟ್ಟುತ್ತಿದ್ದಳು. ಇದನ್ನೂ ಓದಿ: ಹತ್ಯೆ ಬಳಿಕ ಆತ್ಮಗಳ ಭಯದಿಂದ ನಡುಗಿದ್ದ ಹಂತಕ; ತಾಯಿ ಕೊಲೆ ಕಣ್ಣಾರೆ ಕಂಡರೂ ಕಣ್ಣೀರು ಹಾಕದ ಮಗಳು
ಇದೇ ರೀತಿ ಎಲ್ಲರ ಶವದ ಜೊತೆ ಮಲಗಿದ್ದಾಕೆಗೆ ಕಿಂಚಿತ್ತೂ ಪಶ್ಚಾತ್ತಾಪವಿಲ್ಲ. ಕೊಲೆ ಮಾಡುವ ಸಮಯಕ್ಕೆ ಹೊರಬಂದು ವಸ್ತುಗಳನ್ನ ರೆಡಿ ಮಾಡ್ಕೊಳ್ತಿದ್ದಳು. ಚೀಲ, ಸೀರೆ, ಹಗ್ಗ ಟೇಪ್ ಹಿಡಿದು ಹೊರ ನಿಲ್ಲುತ್ತಿದ್ದಳು. ಮನೆ ಮೇಲಿಂದಲೇ ರಸ್ತೆಯಲ್ಲಿ ಅಬ್ಸರ್ವ್ ಮಾಡುತ್ತಿದ್ದಳು. ಆ ಬಳಿಕ ತಾನೇ ಮೃತದೇಹಗಳನ್ನು ಪ್ಯಾಕಿಂಗ್ ಮಾಡುತ್ತಿದ್ದಳು.
ಕೊಲೆ ವೇಳೆ ಮೃತ ನಳಿನಿ ಕೂಗಾಟ, ಚೀರಾಟ ಮಾಡಿದ್ದರು. ‘ಅಣ್ಣಾ ಯಾಕಣ್ಣ.. ಕೊಲೆ ಮಾಡ್ತಿದ್ಯಾ’ ಎಂದು ನಳಿನ ಪರಿಪರಿಯಾಗಿ ಬೇಡಿದ್ದಳು. ಆಗ ಹೊರಗಡೆ ಶಬ್ದ ಕೇಳುತ್ತೆ ಅಂತ ಮಗಳು ಡೋರ್ ಲಾಕ್ ಮಾಡಿದ್ದಳು. ಕೊಲೆ ಮಾಡಿದ ಬಳಿಕ ತಾನೇ ಪೆನಾಯಿಲ್ ಹಾಕಿ ರಕ್ತ ವಾಶ್ ಮಾಡ್ತಿದ್ದೆ ಎಂದು ಪೊಲೀಸರ ವಿಚಾರಣೆ ವೇಳೆ ಹಂತಕನ ಮಗಳು ತಿಳಿಸಿದ್ದಾಳೆ. ಇದನ್ನೂ ಓದಿ: ಒಂದೇ ಕುಟುಂಬದ ಏಳು ಮಂದಿ ಬರ್ಬರ ಹತ್ಯೆ – ಕೊಲೆ ನಡೆದ ಸ್ಥಳ ಮಹಜರು
ಹಂತಕ ಕೊಲೆ ಮಾಡಿ ಹೊರಗಡೆ ಹೋದರೆ ಮಗಳೇ ಹೆಣದ ಜೊತೆ ಮಲಗುತ್ತಿದ್ದಳು. ಕೊಲೆ ಬಳಿಕ ಇಬ್ಬರ ಬಟ್ಟೆಗಳನ್ನು ಅಪ್ಪ-ಮಗಳು ಚೀಲದಲ್ಲಿ ಹಾಕಿ ಗಂಟು ಕಟ್ಟಿದ್ದರು. ಸದ್ಯ ಮಗಳ ಕಸ್ಟಡಿ ಮುಗಿದಿದ್ದು, ಎರಡು ದಿನದ ಹಿಂದೆ ದಾವಣಗೆರೆಯ ಬಾಲಮಂದಿರಕ್ಕೆ ಕರೆದೊಯ್ದು ಪೊಲೀಸರು ಬಿಟ್ಟಿದ್ದಾರೆ. ಹಂತಕನ ಪೊಲೀಸ್ ಕಸ್ಟಡಿ ಇಂದು ಮುಗಿಯಲಿದ್ದು, ಕೋರ್ಟ್ಗೆ ಹಾಜರುಪಡಿಸಲಾಗುವುದು.
