ರಿಯಲ್ ಸ್ಟಾರ್ ಉಪೇಂದ್ರ ಬಿಡುಗಡೆ ಮಾಡಿದ ರೊಮ್ಯಾಂಟಿಕ್ ರಾಮು ಲವ್ಲಿ ಸೀತಾ ಚಿತ್ರದ ಶೀರ್ಷಿಕೆ ಟೀಸರ್, ಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿರೋ ಬೆನ್ನಲೇ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಈ ಚಿತ್ರದ ಕಂಟೆಂಟ್ ಹಾಗೂ ಹಾಡು ನೋಡಿ ಕೊಂಡಾಡಿ ಖುದ್ದು ಮಳೆ ಹನಿ ಸಾಂಗ್ ಅನ್ನು ಬಿಡುಗಡೆ ಮಾಡಿಕೊಟ್ಟಿದ್ದಾರೆ. ಈ ಹಾಡಿಗೆ ಗೌರವ್ ಆರ್ಯನ್ ಸಂಗೀತ ಸಂಯೋಜನೆ ಹಾಗು ಸಾಹಿತ್ಯವಿದೆ. ಜಸ್ಕರಣ್ ಸಿಂಗ್ ಧ್ವನಿಯಾಗಿರೋ ಈ ಮಾಧುರ್ಯ ಭರಿತ ಹಾಡಿಗೆ ಮದನ್ ಹರಿಣಿ ನೃತ್ಯ ನಿರ್ದೇಶನ ಮಾಡಿದ್ದಾರೆ. ನಾಯಕ ಗೌರವ್ ಆರ್ಯನ್ ಮತ್ತು ನಾಯಕಿ ಸಿಂಚನಾ ಪಿ ರಾವ್ ಜೋಡಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.. ಪದೇ ಪದೇ ನೋಡೋ ತರಹ ಪದೇ ಪದೇ ಕೇಳೋ ಹಾಗಿರೋ ಈ ಹಾಡು ರೊಮ್ಯಾಂಟಿಕ್ ರಾಮು ಲವ್ಲಿ ಸೀತಾ ಚಿತ್ರದ ಹೈಲೈಟ್.
‘ಪುಣ್ಯಕೋಟಿ’ ಕಥೆಯ ಮೂಲ ಆಶಯದಿಂದ ಪ್ರೇರಿತವಾದ, ತಂದೆ ಮತ್ತು ಮಗಳ ನಡುವಿನ ನಿಸ್ವಾರ್ಥ ಪ್ರೀತಿ, ಬಾಂಧವ್ಯ ಹಾಗೂ ಭಾವನಾತ್ಮಕ ಪಯಣವನ್ನು ಆಧರಿಸಿದ ಹೊಸ ಚಿತ್ರ ಇದಾಗಿದೆ. ರೊಮ್ಯಾಂಟಿಕ್ ರಾಮು ಲವ್ಲಿ ಸೀತಾ ಚಿತ್ರವನ್ನ ಗೌರವ್ ಆರ್ಯನ್ ನಿರ್ದೇಶಿಸೋದ್ರ ಜೊತೆಗೆ ನಾಯಕನಟನಾಗಿ ಅಭಿನಯಿಸಿದ್ದಾರೆ. ಕಿರುತೆರೆಯಲ್ಲಿ ನಟನೆಯ ಮೂಲಕ ವೃತ್ತಿ ಬದುಕನ್ನಾರಂಭಿಸಿ, ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕ ಹಾಗೂ ಗೀತರಚನೆಕಾರರಾಗಿ ಕೆಲಸ ಮಾಡಿದ್ದ ಗೌರವ್ ಆರ್ಯನ್ ಈ ಚಿತ್ರದ ಮೂಲಕ ನಿರ್ದೇಶಕ ಮತ್ತು ನಾಯಕ ನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡ್ತಿದ್ದಾರೆ. ನಾಯಕಿಯಾಗಿ ತುಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಸಿಂಚನಾ ಪಿ. ರಾವ್ ಅಭಿನಯಿಸಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ಭೇಟಿಯಾದ ರಾಮಾಯಾಣ ಟೀಂ – ಜಾಗತಿಕ ಯಶಸ್ಸಿಗೆ ಮೆಚ್ಚುಗೆ
ಬಿಗ್ಬಾಸ್ ಖ್ಯಾತಿಯ ವಿನಯ್ ಗೌಡ ಹಾಗೂ ಮೂಲತಃ ರಂಗಭೂಮಿ ಕಲಾವಿದರೂ ಆಗಿರುವ ಕೂರ್ಗ್ ನ್ಯಾಚುರಲ್ ಸ್ಪೈಸಸ್ ಮಾಲೀಕ ಚೇತನ್ ಎಂ. ಮಾದಾಪುರ ಈ ಚಿತ್ರದಲ್ಲಿ ಪ್ರಮುಖ ಖಳನಾಯಕನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ರೊಮ್ಯಾಂಟಿಕ್ ರಾಮು ಲವ್ಲಿ ಸೀತಾ ಚಿತ್ರಕ್ಕೆ ಬಂಡವಾಳ ಹೂಡಿರೋದು, ಜಿಆರ್ಎಲ್ (GRL) ಟ್ರಾವೆಲ್ಸ್ನ ಮಾಲೀಕರಾದ ಗಂಗಾಧರಯ್ಯ. ಈ ಮೂಲಕ ‘ಜಿಆರ್ಎಲ್ ಮೂವೀಸ್’ ಕನ್ನಡ ಚಿತ್ರರಂಗಕ್ಕೆ ನಿರ್ಮಾಣ ಸಂಸ್ಥೆಗಳ ಸಾಲಿಗೆ ಸೇರಿಕೊಳ್ತಿದೆ.
ಕ್ರಿಕೆಟ್ ಕ್ಷೇತ್ರದಲ್ಲಿ ಡಿವಿಷನ್ ಲೀಗ್ ಆಟಗಾರರಾಗಿ ಗುರುತಿಸಿಕೊಂಡಿರುವ ಪ್ರಣಯ್ ಜಿ. ಗೌಡ ಹಾಗೂ ಖಳನಟ ಚೇತನ್ ಎಂ. ಮಾದಾಪುರ ಅವರು ಸಹ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಗೌರವ್ ಆರ್ಯನ್, ಸಿಂಚನಾ ಪಿ. ರಾವ್, ವಿನಯ್ ಗೌಡ, ವಿನೋದ್ ಗೊಬರಗಾಲ, ಜಿ.ಆರ್.ಎಲ್ ಗಂಗಾಧರಯ್ಯ, ರಮೇಶ್ ಭಟ್, ಬಿರಾದಾರ್, ಟೆನ್ನಿಸ್ ಕೃಷ್ಣ,ವಿಜಯಲಕ್ಷ್ಮಿ,ರಾಧಾ ರಾಮಚಂದ್ರ,ಮುಬಾರಕ್ ಅಲಿ(ಸಿದ್ದಗಂಗಾ ಮಠ ), ಬೇಬಿ ನಿಧಿ, ಚೇತನ್ ಎಂ. ಮಾದಾಪುರ, ರಾಘವ್ ರಾಮ್,ಶ್ರೀನಾಥ್ ಬಜಾಜ್, ಮಂಜು ಅಲಂಕಾರ್, ಫಿರೋಜ್ ಮಾಗರೆ, ಅವಿನಾಶ್ ಹೊಯ್ಸಳ ,ಹರ್ಷಿತ ಟಿ.ಎ., ಕೀರ್ತನ ಗೌಡ, ಸುಪ್ರೀತಾ ಪ್ರೇಮ್, ನಾಗರಾಜ್ ಬೇಲೂರು ಮುಂತಾದವರು ತಾರಾಗಣದಲ್ಲಿದ್ದಾರೆ. ಶ್ರೀರಾಮ್ ಗಂಧರ್ವ ಹಾಗೂ ಗೌರವ್ ಆರ್ಯನ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ 3 ಹಾಡುಗಳಿವೆ. ಕೆ.ಬಿ ಪ್ರವೀಣ್ ಹಿನ್ನೆಲೆ ಸಂಗೀತ , ಮದನ್ ಹರಿಣಿ ನೃತ್ಯನಿರ್ದೇಶನವಿದೆ. ವಿನೋದ್ ಮಾಸ್ಟರ್ , ಚಂದ್ರು ಬಂಡೆ ಸಾಹಸ ಚಿತ್ರಕ್ಕಿದೆ. ಈ ಚಿತ್ರಕ್ಕೆ ಸಿದ್ಧಾರ್ಥ್ ಮೈಸೂರು, ಅರುಣ್ ಸುರೇಶ್ ಛಾಯಾಗ್ರಣ ಮಾಡಿದ್ದಾರೆ. ಶಶಾಂಕ್ ನಾರಾಯಣ್ ಸಂಕಲನವಿದೆ. ನಿರ್ದೇಶನ ತಂಡದಲ್ಲಿ ಕುಮಾರ್ ಗೌಡ, ಮನು ದೇವರಹಳ್ಳಿ, ಸುನಿಲ್ ಕುಮಾರ್ ಕಾರ್ಯ ನಿರ್ವಹಿಸಿದ್ದಾರೆ. ಇದನ್ನೂ ಓದಿ: ವಿಷ್ಯುವಲ್ ಎಫೆಕ್ಟ್ ಆಸ್ಕರ್ ರೇಸ್ನಲ್ಲಿ ‘ರಾಮಾಯಣ’ – ಹಾಲಿವುಡ್ ಮೂವಿಗಳ ಜೊತೆ ಯಶ್ ಸಿನಿಮಾ ಪೈಪೋಟಿ

