ಮಂಗಳೂರು: ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲು ಟೋಲ್ನಲ್ಲಿ (Brahmarakotlu Toll) SDPI ಕಾರ್ಯಕರ್ತರು ಪ್ರತಿಭಟನೆ (Protest) ನಡೆಸಿ, ಬ್ಯಾರಿಯರ್ ಕಿತ್ತು ವಾಹನಗಳನ್ನು ಫ್ರೀಯಾಗಿ ಬಿಟ್ಟಿದ್ದಾರೆ.
ಇದ್ದಕ್ಕಿದ್ದಂತೆ ಟೋಲ್ಗೆ ನುಗ್ಗಿದ SDPI ಕಾರ್ಯಕರ್ತರು ಟೋಲ್ ಕ್ಯಾಮೆರಾ ಜಖಂ ಮಾಡಿದ್ದಾರೆ. ಅಲ್ಲದೇ ಬೂಮ್ ಬ್ಯಾರಿಯರ್ ಕಿತ್ತು, ಟೋಲ್ ಸಂಗ್ರಹಿಸದೆ ವಾಹನಗಳನ್ನು ಬಿಟ್ಟು ಕಳಿಸಿದ್ದಾರೆ. ಈ ವೇಳೆ ಟೋಲ್ ಸಿಬ್ಬಂದಿಗೂ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ರಾತ್ರೋರಾತ್ರಿ ಪೊಲೀಸ್ ಠಾಣೆಯಲ್ಲಿ ಕಾಣಿಸಿಕೊಂಡ ಧನ್ವೀರ್ – ಎದುರಾಗುತ್ತಾ ಸಂಕಷ್ಟ?
ಉಪ್ಪಿನಂಗಡಿ ಬಳಿ ನೂತನ ಟೋಲ್ ಇಂದು (ನ.26) ಉದ್ಘಾಟನೆಯಾಗಿದೆ. ಇದರಿಂದ SDPIಕಾರ್ಯಕರ್ತರು ಬಿ.ಸಿ.ರೋಡ್ ಟೋಲ್ಗೆ ಮುತ್ತಿಗೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಗಲಾಟೆ ನಡೆಯುತ್ತಿದ್ದ ಸ್ಥಳಕ್ಕೆ ಬಂಟ್ವಾಳ ಪೊಲೀಸರು ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಭೂ ಕಬಳಿಕೆ ಆರೋಪ – ಮಾಜಿ ಸಚಿವ ಪ್ರಭು ಚೌಹಾಣ್ಗೆ ನೋಟಿಸ್ ಜಾರಿ
