ಢಾಕಾ: ಬಾಂಗ್ಲಾದೇಶದ (Bangladesh) ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ (Shahabuddin) ಅವರು ತಮ್ಮ ಅಧಿಕಾರಾವಧಿ ಮುಗಿಯಲು ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಶಹಾಬುದ್ದೀನ್ ಹಿಂದಿನ ಸಂಸತ್ತಿನಿಂದ ಆಯ್ಕೆಯಾಗಿದ್ದರು. ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರವನ್ನು ಉರುಳಿಸಿದ 2024ರ ವಿದ್ಯಾರ್ಥಿಗಳ ನೇತೃತ್ವದ ಹಿಂಸಾತ್ಮಕ ಪ್ರತಿಭಟನೆಗಳ ನಂತರವೂ ಅವರ ಸಾಂವಿಧಾನಿಕ ಹುದ್ದೆಯಲ್ಲಿರುವ ಏಕೈಕ ವ್ಯಕ್ತಿ. ಇದನ್ನೂ ಓದಿ: ನನ್ನನ್ನು ಬಂಧಿಸಬಹುದು ಅಥವಾ ಕೊಲ್ಲಬಹುದು, ಡಿಸೆಂಬರ್‌ನಲ್ಲಿ ನಾನು ಬಾಂಗ್ಲಾದೇಶಕ್ಕೆ ತೆರಳುತ್ತೇನೆ: ಶೇಖ್ ಹಸೀನಾ
ಪ್ರಧಾನಿ ತಾರಿಕ್ ರೆಹಮಾನ್ ನೇತೃತ್ವದ ಸರ್ಕಾರದ ಜೊತೆ ಶಹಾಬುದ್ದೀನ್ ಅವರ ಬಾಂಧವ್ಯ ಸರಿಯಾಗಿಲ್ಲ ಎಂಬಂತಹ ವರದಿಗಳಾಗಿವೆ. ದೇಶದಲ್ಲಿ ಭಾರಿ ಪ್ರತಿಭಟನೆ ಬೆನ್ನಲ್ಲೇ 2024ರ ಆಗಸ್ಟ್‌ನಲ್ಲಿ ಹಸೀನಾ ಅವರು ಭಾರತಕ್ಕೆ ಪಲಾಯನ ಮಾಡಿದ್ದರು. ಅಂದಿನಿಂದ ಭಾರತದಲ್ಲೇ ವಾಸವಾಗಿದ್ದಾರೆ.
ಶಹಾಬುದ್ದೀನ್ ಅವರು ಶೀಘ್ರದಲ್ಲೇ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಆಡಳಿತಾರೂಢ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ಶಹಾಬುದ್ದೀನ್ ಇತ್ತೀಚೆಗೆ ಹಸೀನಾ ಅವರೊಂದಿಗೆ ಸಂಪರ್ಕವನ್ನು ಮರುಸ್ಥಾಪಿಸಲು ಪ್ರಯತ್ನಿಸಿದ್ದಾರೆ ಎಂಬ ವರದಿಗಳಿಂದ ಸರ್ಕಾರ ಅತೃಪ್ತವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಶೇಖ್ ಹಸೀನಾ ವಿರೋಧಿ ಕಾರ್ಯಕ್ರಮದಲ್ಲಿ ನಿಗೂಢ ಸ್ಫೋಟ – ಬಾಂಗ್ಲಾದಲ್ಲಿ ಮತ್ತೆ ಉದ್ವಿಗ್ನ
ಹಸೀನಾ ಅವರು ವಾಪಸ್ ಆಗುವುದನ್ನು ಬಾಂಗ್ಲಾದೇಶ ಸ್ವಾಗತಿಸಿದೆ. ಆದರೆ, ಅವರು ಕೋರ್ಟ್ ವಿಚಾರಣೆಗಳನ್ನು ಎದುರಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದೆ. 2025ರಲ್ಲಿ ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು, ಹಸೀನಾ ಮತ್ತು ಮಾಜಿ ಗೃಹ ಸಚಿವ ಅಸದುಜ್ಜಮಾನ್ ಖಾನ್ ಕಮಲ್ ಅವರನ್ನು ಗೈರುಹಾಜರಿಯಲ್ಲಿ ವಿಚಾರಣೆ ನಡೆಸಿದ ನಂತರ ಮರಣದಂಡನೆ ವಿಧಿಸಿತ್ತು.
