ಚಿಕ್ಕೋಡಿ: ಇಲ್ಲಿ ನಡೆಯುತ್ತಿದ್ದ ರೈತ ಹೋರಾಟ ಮುಕ್ತಾಯವಾಗಿ ಸಂಚಾರ ಆರಂಭ ಆಗ್ತಿದ್ದಂತೆ ದುರಂತವೊಂದು ಸಂಭವಿಸಿದೆ. ಸ್ಪೀಡ್ ಬ್ರೇಕರ್ ಬಳಿ ಬೈಕ್ ಸ್ಲೋ ಮಾಡ್ತಿದ್ದಂತೆ ಹಿಂದಿನಿಂದ ಬಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ತಂದೆ, ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬೆಳಗಾವಿ (Belagavi) ಜಿಲ್ಲೆಯ ನಿಪ್ಪಾಣಿ (Nippani) ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಸ್ತವನಿಧಿ ಘಾಟ್ನಲ್ಲಿ ರಸ್ತೆ ಅಪಘಾತ ಸಂಭವಿಸಿದೆ.ಇದನ್ನೂ ಓದಿ: ಸಿದ್ರಾಮಯ್ಯ, ಪರಮೇಶ್ವರ್ ವಿಡಿಯೋ ಬರಬಹುದು ಅಂತ 2024ರಲ್ಲೇ ರಮೇಶ್ ಜಾರಕಿಹೊಳಿ ಎಚ್ಚರಿಸಿದ್ರು: ಹೆಚ್ಡಿಕೆ
ಅಪಘಾತದಲ್ಲಿ ಮೂಲತಃ ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರ ಗ್ರಾಮದವರಾದ ತಂದೆ ಪುಂಡಲೀಕ ಹಟ್ಟಿ (50) ಹಾಗೂ ಮಗಳು ನಿಖಿತಾ (24) ಸಾವನ್ನಪ್ಪಿದ್ದಾರೆ. ಪುಂಡಲೀಕ ಅವರು ನಿಪ್ಪಾಣಿ ಟೌನ್ಪೊಲೀಸ್ ಠಾಣೆಯ ಮುಖ್ಯಪೇದೆಯಾಗಿದ್ದರು ಎಂದು ತಿಳಿದುಬಂದಿದೆ.
ತಂದೆ ಹಾಗೂ ಮಗಳು ಬೈಕ್ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಸ್ತವನಿಧಿ ಘಾಟ್ನ ಸ್ಪೀಡ್ ಬ್ರೇಕರ್ ಬಳಿ ಬೈಕ್ ಸ್ಲೋ ಮಾಡಿದ್ದಾರೆ. ಕೂಡಲೇ ಹಿಂದಿನಿಂದ ಬಂದು ಲಾರಿ ಗುದ್ದಿದೆ.
ಡಿಕ್ಕಿಯ ರಭಸಕ್ಕೆ ಬೈಕ್ನಲ್ಲಿದ್ದ ತಂದೆ-ಮಗಳು ರಸ್ತೆ ಮೇಲೆ ಬಿದ್ದಿದ್ದು, ಅವರ ಮೇಲೆಯೇ ಲಾರಿ ಹರಿದುಕೊಂಡು ಹೋಗಿದೆ. ಪೊಲೀಸ್ ಇಲಾಖೆ ಹಾಗೂ ಸ್ಥಳೀಯರಲ್ಲಿ ಶೋಕದ ಛಾಯೆ ಮೂಡಿದ್ದು, ನಿಪ್ಪಾಣಿ ಶಹರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ನಾಳೆ ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ಪ್ರಮಾಣವಚನ ಸ್ವೀಕಾರ

