
ಮುಂಬೈ: ನಟಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಾಲ್ ಮದುವೆ ಬಾಲಿವುಡ್‍ನಲ್ಲಿ ಸಖತ್ ಸುದ್ದಿಯಲ್ಲಿದೆ. ಈ ಜೋಡಿಯು ಅತಿಥಿಗಳನ್ನು ಸ್ವಾಗತಿಸಲು ಒಂದು ವೆಲ್‍ಕಮ್ ನೋಟ್ ನೀಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೆಲ್‍ಕಮ್ ನೋಟ್ ಫೋಟೋ ವೈರಲ್ ಆಗುತ್ತಿದೆ.
ಪತ್ರದಲ್ಲಿ ಏನಿದೆ?: ಈ ಮದುವೆಯನ್ನು ಬಹಳ ಸೀಕ್ರೆಟ್ ಆಗಿ ಮಾಡಲಾಗುತ್ತಿದೆ. ಮದುವೆಯ ಯಾವುದೇ ವಿವರಗಳೂ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಬಾರದು ಎಂದು ಎಚ್ಚರಿಕೆ ವಹಿಸಲಾಗುತ್ತಿದೆ. ಹಾಗಾಗಿ ಮದುವೆ ಬಂದ ಅತಿಥಿಗಳಿಗೆ ಈ ಬಗ್ಗೆ ಮೊದಲೇ ತಿಳಿಸಲಾಗಿದೆ. ನೀವೆಲ್ಲರೂ ನಿಮ್ಮ ಮೊಬೈಲ್ ಫೋನ್‍ಗಳನ್ನು ರೂಮ್‍ನಲ್ಲಿಯೇ ಇಟ್ಟುಬರಬೇಕು ಎಂದು ಮನವಿ ಮಾಡಿಕೊಳ್ಳುತ್ತೇವೆ. ಯಾವುದೇ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಫೋಸ್ಟ್ ಮಾಡಬೇಡಿ. ನಿಮ್ಮೆಲ್ಲರನ್ನೂ ಭೇಟಿಯಾಗಲು ನಾವು ಕಾದಿದ್ದೇವೆ ಎಂದು ಬರೆಯಲಾಗಿದೆ. ಇದನ್ನೂ ಓದಿ: 7 ಬಿಳಿ ಕುದುರೆಗಳ ಜೊತೆ ಮಂಟಪಕ್ಕೆ ವಿಕ್ಕಿ ಕೊಡಲಿದ್ದಾರೆ ರಾಯಲ್ ಎಂಟ್ರಿ
“We request you to please leave your mobile phones in your respective rooms and refrain from posting pictures or using social media for any of the ceremonies or events” reads the welcome hamper at the #VickatWedding 🥲#KatrinaVickyWedding#VickyKatrinaWedding#VickatKiShaadi pic.twitter.com/6uCBFiwRHd
— 𝗸𝗮𝘁𝗿𝗶𝗻𝗮 𝗸𝗮𝗶𝗳’𝘀 𝗯𝗿𝗶𝗱𝗲𝘀𝗺𝗮𝗶𝗱 (@shayararar) December 7, 2021
ಈ ಮದುವೆಯನ್ನು ಬಹಳ ಸೀಕ್ರೆಟ್ ಆಗಿ ಮಾಡಲಾಗುತ್ತಿದೆ. ಮದುವೆಯ ಯಾವುದೇ ವಿವರಗಳೂ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಬಾರದು ಎಂದು ಎಚ್ಚರಿಕೆ ವಹಿಸಲಾಗುತ್ತಿದೆ. ಹಾಗಾಗಿ ಮದುವೆ ಬಂದ ಅತಿಥಿಗಳಿಗೆ ಈ ಬಗ್ಗೆ ಮೊದಲೇ ತಿಳಿಸಲಾಗಿದೆ. ನೀವೆಲ್ಲರೂ ನಿಮ್ಮ ಮೊಬೈಲ್ ಫೋನ್‍ಗಳನ್ನು ರೂಮ್‍ನಲ್ಲಿಯೇ ಇಟ್ಟುಬರಬೇಕು ಎಂದು ಮನವಿ ಮಾಡಿಕೊಳ್ಳುತ್ತೇವೆ. ಯಾವುದೇ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಬೇಡಿ. ನಿಮ್ಮೆಲ್ಲರನ್ನೂ ಭೇಟಿಯಾಗಲು ನಾವು ಕಾದಿದ್ದೇವೆ ಎಂದು ಬರೆಯಲಾಗಿದ್ದು, ಈ ವೆಲ್‍ಕಮ್ ನೋಟ್ ಸೋಶಿಯಲ್ ಮೀಡಿಯಾ ತುಂಬಾ ಹರಿದಾಡುತ್ತಿದೆ. ಇದನ್ನೂ ಓದಿ: ಅರಬ್ಬಿ ಸಮುದ್ರದ ಹತ್ತು ಮೀಟರ್ ಆಳದಲ್ಲಿ ಸ್ಕೂಬಾ ಡೈವ್ ಮಾಡಿದ್ರು ಅಪ್ಪು
ವಿಕ್ಕಿ-ಕತ್ರಿನಾ ಡಿಸೆಂಬರ್ 9 ರಂದು ರಾಜಸ್ಥಾನದ ಖಾಸಗಿ ಹೋಟೆಲ್‌ನ ಗಾಜಿನ ಮಂಟಪದಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದ್ದು, ಈ ಜೋಡಿ ಮಾತ್ರ ಎಲ್ಲಿಯೂ ಈ ಕುರಿತು ಅಧಿಕೃತವಾಗಿ ಹೇಳಿಕೊಂಡಿಲ್ಲ. ವರದಿಗಳ ಪ್ರಕಾರ ಈ ಜೋಡಿಯ ಮದುವೆ ಮಾತ್ರ ರಾಯಲ್ ಆಗಿ ನಡೆಯುತ್ತಿದ್ದು, ಇವರ ಮದುವೆ ಕ್ಲಿಪ್‍ಸ್‍ಗೆ ಓಟಿಟಿ ಫ್ಲಾಟ್‍ಫಾರ್ಮ್ 100 ಕೋಟಿ ರೂ. ಆಫರ್ ಮಾಡಿದೆ. ಇದನ್ನೂ ಓದಿ: ಓಟಿಟಿಯಿಂದ ವಿಕ್ಕಿ-ಕತ್ರಿನಾ ವೆಡ್ಡಿಂಗ್ ಕ್ಲಿಪ್ಸ್ 100 ಕೋಟಿ ರೂ. ಆಫರ್