ಮುಂಬೈ: ಬಾಲಿವುಡ್ ಸ್ಟಾರ್ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆ ತಯಾರಿ ಬರದಿಂದ ಸಾಗುತ್ತಿದ್ದು, ರಾಜಮನೆತನದಂತೆ ಮದುವೆಗೆ ವಿಕ್ಕಿ 7 ಕುದುರೆಗಳ ಜೊತೆ ಬರುತ್ತಾರೆ ಎಂಬ ಸುದ್ದಿ ಕೇಳಿಬರುತ್ತಿದೆ.
Advertisement
ಕೆಲವೇ ದಿನಗಳಲ್ಲಿ ವಿಕ್ಕಿ-ಕತ್ರಿನಾ ಮದುವೆ ಸಮಾರಂಭ ನಡೆಯಲಿದ್ದು, ಇದಕ್ಕಾಗಿ ಹಲವು ಸಿದ್ಧತೆಗಳು ನಡೆಯುತ್ತಿದೆ. ಇವರ ವಿವಾಹವು ರಾಜಸ್ಥಾನದ ಖಾಸಗಿ ಹೋಟೆಲ್ ನ ಗಾಜಿನ ಮಂಟಪದಲ್ಲಿ ಇವರಿಬ್ಬರ ಮದುವೆ ಸಮಾರಂಭ ನಡೆಯುತ್ತಿದೆ. ಈ ನಡುವೆ ವರದಿಗಳ ಪ್ರಕಾರ ವಿಕ್ಕಿ ಮದುವೆ ಮಂಟಪಕ್ಕೆ 7 ಬಿಳಿ ಕುದುರೆ ಮೇಲೆ ರಾಯಲ್ ಆಗಿ ಎಂಟ್ರಿ ಕೊಡುತ್ತಿದ್ದಾರೆ ಎಂಬ ಸುದ್ದಿ ತಿಳಿದುಬಂದಿದೆ. ಇದನ್ನೂ ಓದಿ: ವಿಜಯ್ ಸೇತುಪತಿ ಜೊತೆ ನಟಿಸಲು ಸೈ ಎಂದ ಸ್ವೀಟಿ
Advertisement
Advertisement
ವಿಕ್ಕಿ-ಕತ್ರಿನಾ ತಮ್ಮ ಮದುವೆ ಬಗ್ಗೆ ದೊಡ್ಡ ಕನಸನ್ನು ಹೊಂದಿದ್ದು, ಆ ರೀತಿಯಲ್ಲಿಯೇ ಮದುವೆಯಾಗಬೇಕು ಎಂದು ಹಲವು ರೀತಿಯಲ್ಲಿ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಕತ್ರಿನಾ-ವಿಕ್ಕಿ ಕೌಶಲ್ ಮದುವೆಯಾಗುವ ದಿನ ಹತ್ತಿರವಾಗುತ್ತಿದೆ. ರಾಜಸ್ಥಾನದಲ್ಲಿ ತಮ್ಮ ಅದ್ಧೂರಿ ಮದುವೆಗೆ ಮುಂಚಿತವಾಗಿ ಕತ್ರಿನಾ ಅವರ ಕುಟುಂಬ ಭಾನುವಾರ ಸಂಜೆ ವಿಕ್ಕಿ ಮನೆಗೆ ಊಟಕ್ಕೆ ಹೋಗಿದ್ದರು.
Advertisement
ವಿಕ್ಕಿ ತಂದೆ ಶಾಮ್ ಕೌಶಲ್ ಇವರ ಮದುವೆಗಾಗಿ ಭಾರಿ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದು, ವಧು-ವರರನ್ನು ಅಲಂಕಾರ ಮಾಡುವವರಿಂದ ಹಿಡಿದು ಪ್ರತಿಯೊಂದನ್ನು ಸೂಕ್ಷ್ಮವಾಗಿ ಆಯೋಜಿಸುತ್ತಿದ್ದಾರೆ. ಎರಡು ಕುಟುಂಬದ ಸದಸ್ಯರು ಮದುವೆ ಸ್ಥಳಕ್ಕೆ ಇಂದು ತೆರಳಲಿದ್ದು, ಡಿಸೆಂಬರ್ 7 ರಂದು ಹಬ್ಬದ ರೀತಿ ಮದುವೆ ಸಿದ್ಧತೆಗಳನ್ನು ಮಾಡುತ್ತಿದ್ದಾರೆ. ಇದನ್ನೂ ಓದಿ: ಪಿಜ್ಜಾಗೆ ಡೂಡಲ್ ಸಮರ್ಪಿಸಿದ ಗೂಗಲ್
ಮದುವೆ ಮಂಟಪಕ್ಕೆ ಬಂದ ಸೆಲೆಬ್ರಿಟಿಗಳು ಫೋಟೋ ಕ್ಲಿಕ್ಕಿಸಿದಂತೆ ಮಾರ್ಗಸೂಚನೆಯನ್ನು ನೀಡಲಾಗಿದ್ದು, ಇದನ್ನು ನೋಡಿಕೊಳ್ಳಲು 100 ಬೌನ್ಸರ್‍ಗಳನ್ನು ನಿಯೋಜನೆ ಮಾಡಲಾಗಿದೆ. ವಿಕ್ಕಿ-ಕತ್ರಿನಾ ಮದುವೆಯ ಅಪ್ಡೇಟ್ ಕೇಳುತ್ತಿದ್ದರೆ ಇವರ ಮದುವೆ ಯಾವ ರೀತಿ ನಡೆಯಬಹುದು ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡಿದ್ದು, ಅಭಿಮಾನಿಗಳು ಮಾತ್ರ ಸಖತ್ ಥ್ರಿಲ್ ಆಗಿ ಕಾಯುತ್ತಿದ್ದಾರೆ.