ನವದೆಹಲಿ: ಕರ್ನಾಟಕ ಕೇಡರ್‌ನ ದಕ್ಷ ಹಾಗೂ ಖಡಕ್ ಐಪಿಎಸ್ ಅಧಿಕಾರಿ ಸೋನಿಯಾ ನಾರಂಗ್(Sonia Narang) ಅವರ ಕೇಂದ್ರ ನಿಯೋಜನೆ (Central Deputation) ಅವಧಿಯನ್ನು ಕೇಂದ್ರ ಸರ್ಕಾರವು ಮತ್ತೆ ಒಂದು ವರ್ಷದ ಅವಧಿಗೆ ವಿಸ್ತರಿಸಿ ಆದೇಶ ಹೊರಡಿಸಿದೆ.
ಪ್ರಸ್ತುತ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಯಲ್ಲಿ ಇನ್ಸ್‌ಪೆಕ್ಟರ್ ಜನರಲ್ (IG) ಆಗಿ ಸೇವೆ ಸಲ್ಲಿಸುತ್ತಿರುವ ಸೋನಿಯಾ ನಾರಂಗ್ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರಿಸಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಕೇಂದ್ರ ಕ್ಯಾಬಿನೆಟ್‌ನ ನೇಮಕಾತಿ ಸಮಿತಿ (ACC) ಅಸ್ತು ಎಂದಿದೆ.
2002ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಸೋನಿಯಾ ನಾರಂಗ್ ಅವರು ಕರ್ನಾಟಕದಲ್ಲಿ ಲೋಕಾಯುಕ್ತ ಎಸ್ಪಿಯಾಗಿ, ಸಿಐಡಿ ಡಿಐಜಿಯಾಗಿ ಕಾರ್ಯನಿರ್ವಹಿಸಿ ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿದ್ದರು. ಲೋಕಾಯುಕ್ತದಲ್ಲಿದ್ದ ಭ್ರಷ್ಟಾಚಾರ ಜಾಲ ಹಾಗೂ ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ ಹಗರಣಗಳನ್ನು ಬಯಲಿಗೆಳೆದ ಕೀರ್ತಿ ಇವರಿಗಿದೆ. ಇದನ್ನೂ ಓದಿ: ದಿಲ್ಲಿಯಲ್ಲೂ ದೂರ ದೂರ – ಸಿಎಂ & ಟೀಂನಿಂದ ಅಂತರ ಕಾಯ್ದುಕೊಂಡ ಡಿಕೆಶಿ
