ವಿಂಟೇಜ್ ಜ್ಯುವೆಲರಿಗಳಲ್ಲಿ ಇದೀಗ ಕಾಸಗಲದ ಹರಳಿನ ಕಿವಿಯೋಲೆಗಳು (Kasagala Earring Fashion) ಟ್ರೆಂಡಿಯಾಗಿವೆ. ಹಾಗೆಂದು ಈ ವಿನ್ಯಾಸದ ಕಿವಿಯೋಲೆಗಳ ಸ್ಟೈಲಿಂಗ್ ಹೊಸತೇನಲ್ಲ. ಅಜ್ಜಿ ಕಾಲದ ಆಂಟಿಕ್ ವಿನ್ಯಾಸದಲ್ಲಿ ಬಹಳ ಕಾಲ ಪ್ರಚಲಿತದಲ್ಲಿದ್ದ ಕಿವಿಯೋಲೆಗಳಿವು. ಧರಿಸಿದಾಗ ನೋಡಲು ಪಕ್ಕಾ ಟ್ರೆಡಿಷನಲ್ ಲುಕ್ ನೀಡುವ ಈ ಕಾಸಗಲದ ಸ್ಟಡ್ಸ್, ಈ ಫೆಸ್ಟಿವ್ ಸೀಸನ್‌ನಲ್ಲಿ, ಅದರಲ್ಲೂ ವಿಂಟೇಜ್ ಜ್ಯುವೆಲರಿ ಕೆಟಗರಿಯಲ್ಲಿ ಮಹಿಳೆಯರ ಮನವನ್ನು ಗೆದ್ದಿವೆ.
Advertisement
ಅಂದಹಾಗೆ, ಕಿವಿಗೆ ಅಗಲವಾದ ಓಲೆಯನ್ನು ಧರಿಸುವುದು ರಾಜ-ಮಹಾರಾಜರ ಕಾಲದಿಂದಲೇ ಇದೆ. ಅಗಲವಾದ ಓಲೆ ಧರಿಸುವ ಮಹಿಳೆಯರು ಶ್ರೀಮಂತರು ಅಥವಾ ಗಣ್ಯ ವ್ಯಕ್ತಿಗಳೆಂದು ಪರಿಗಣಿಸಲಾಗುತ್ತಿತ್ತು. ಅದರಲ್ಲೂ ಹರಳಿನ ಅಗಲವಾದ ಓಲೆಗಳನ್ನು ಧರಿಸುವ ಮಾನಿನಿಯರಿಗೆ ಹೆಚ್ಚು ಗೌರವ ನೀಡಲಾಗುತ್ತಿತ್ತು. ಕಾಲ ಕ್ರಮೇಣ, ಈ ಫ್ಯಾಷನ್ ಸೈಡಿಗೆ ಸರಿಯಿತು. ಪ್ರತಿಷ್ಠೆಯ ಸಂಕೇತವಾಗಿದ್ದ, ಈ ಶೈಲಿಯ ಕಾಸಗಲದ ಓಲೆಗಳು ಬರಬರುತ್ತಾ ಮತ್ತೊಮ್ಮೆ ಫ್ಯಾಷನ್‌ಗೆ ಸೇರಿಕೊಂಡಿತು. ಜೊತೆಗೆ ಒಂದಿಷ್ಟು ಬದಲಾವಣೆಗಳೊಂದಿಗೆ ವಿಂಟೇಜ್ ಜ್ಯುವೆಲರಿ ಕೆಟಗರಿಯಲ್ಲಿ ಮರು ಎಂಟ್ರಿ ನೀಡಿತು. ಅದರಲ್ಲೂ, ಯುವತಿಯರನ್ನು ಸೆಳೆಯತೊಡಗಿತು. ಇದನ್ನೂ ಓದಿ:ತಿರುಪತಿ ಲಡ್ಡು ವಿವಾದ: ತಿಮ್ಮಪ್ಪನ ಕ್ಷಮೆ ಕೋರಿ 11 ದಿನಗಳ ಉಪವಾಸ ಕೈಗೊಂಡ ಪವನ್ ಕಲ್ಯಾಣ್
Advertisement
Advertisement
ಭೂ ಚಕ್ರದಂತಹ ವಿನ್ಯಾಸ, ಹೂಗಳ ವಿನ್ಯಾಸ, ಚಕ್ರದೊಳಗೆ ನವಿಲಿನ ವಿನ್ಯಾಸ, ಸೂರ್ಯಕಾಂತಿ ಸೇರಿದಂತೆ ನಾನಾ ಬಗೆಯು ಹೂಗಳು ಅರಳಿರುವಂತೆ ಕಾಣಿಸುವ ವಿನ್ಯಾಸದವು ಅದರಲ್ಲೂ ಕುಂದನ್ ಅಥವಾ ಕೆಂಪು-ಹಸಿರು-ಬಿಳಿ ಹರಳಿನಲ್ಲಿ ಡಿಸೈನ್ ಮಾಡಲಾದ ಓಲೆಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ.
Advertisement
ಇನ್ನು, ಈ ಟ್ರೆಡಿಷನಲ್ ಲುಕ್ ನೀಡುವ ಹರಳಿನ ಕಿವಿಯೋಲೆಗಳಲ್ಲಿ ಇದೀಗ ಮುತ್ತಿನ ಲೈನ್ ಇರುವಂತಹ ಲೇಯರ್ ಲುಕ್ ನೀಡುವ ಕಿವಿ ಸರಪಳಿ ಡಿಸೈನ್‌ಗಳು ಜೊತೆಯಾಗಿವೆ. ಕಿವಿಯೋಲೆಯೊಂದಿಗೆ ಅಟ್ಯಾಚ್ ಆಗಿರುವಂತಹ ವಿನ್ಯಾಸದಲ್ಲೂ ಬಂದಿವೆ. ಇನ್ನು ಕೆಲವು ಜುಮಕಿ ಶೈಲಿಯಲ್ಲೂ ಎಂಟ್ರಿ ನೀಡಿವೆ.
ಟ್ರೆಡಿಷನಲ್ ಲುಕ್‌ಗೆ ಸಾಥ್ ನೀಡುವ ಕಾಸಗಲದ ಹರಳಿನ ಓಲೆಗಳು:
*ಸೀರೆ, ಲಂಗ-ದಾವಣಿಯಂತಹ ಟ್ರೆಡಿಷನಲ್ ಅಟೈರ್‌ನೊಂದಿಗೆ ಧರಿಸಬಹುದು.
*ಹೇರ್ ಸ್ಟೈಲ್ ಈ ಓಲೆಗಳಿಗೆ ಮ್ಯಾಚ್ ಆಗಬೇಕು.
*ಸಾಂಪ್ರದಾಯಿಕ ಸ್ಟೈಲಿಂಗ್ ಈ ಓಲೆಗಳಿಗೆ ಬೆಸ್ಟ್.
*ಗೋಲ್ಡ್-ಸಿಲ್ವರ್‌ನಲ್ಲಿ ಮಾತ್ರವಲ್ಲ, 1 ಗ್ರಾಮ್ ಗೋಲ್ಡ್ ಮೆಟಲ್‌ನಲ್ಲೂ ಇವು ದೊರೆಯುತ್ತಿವೆ.