ರಾಜ್ಯದ ಹವಾಮಾನ ವರದಿ 25-10-2025

1 Min Read

ರಾಜ್ಯಾದ್ಯಂತ ವರುಣನ ಅಬ್ಬರ ಜೋರಾಗಿದ್ದು, ಅಕ್ಟೋಬರ್ 29ರವರೆಗೂ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದೇ ವೇಳೆ ರಾಜ್ಯದ 6 ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಬಂಗಾಳ ಉಪಮಹಾಸಾಗರದಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಗಾಳಿಯ ವೇಗ ಗಂಟೆಗೆ 30-40ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ
ಬೆಂಗಳೂರು: 26-21
ಮಂಗಳೂರು: 28-24
ಶಿವಮೊಗ್ಗ: 27-21
ಬೆಳಗಾವಿ: 25-21
ಮೈಸೂರು: 28-22

ಮಂಡ್ಯ: 27-21
ಮಡಿಕೇರಿ: 24-20
ರಾಮನಗರ: 27-21
ಹಾಸನ: 25-20
ಚಾಮರಾಜನಗರ: 28-21
ಚಿಕ್ಕಬಳ್ಳಾಪುರ: 26-20

ಕೋಲಾರ: 26-21
ತುಮಕೂರು: 26-21
ಉಡುಪಿ: 28-24
ಕಾರವಾರ: 29-26
ಚಿಕ್ಕಮಗಳೂರು: 23-19
ದಾವಣಗೆರೆ: 28-22

ಹುಬ್ಬಳ್ಳಿ: 27-22
ಚಿತ್ರದುರ್ಗ: 27-21
ಹಾವೇರಿ: 28-22
ಬಳ್ಳಾರಿ: 29-23
ಗದಗ: 27-22
ಕೊಪ್ಪಳ: 28-23

ರಾಯಚೂರು: 28-23
ಯಾದಗಿರಿ: 27-23
ವಿಜಯಪುರ: 30-23
ಬೀದರ್: 27-23
ಕಲಬುರಗಿ: 27-23
ಬಾಗಲಕೋಟೆ: 29-22

ಕರ್ನಾಟಕ, ಮಳೆ, ಹವಾಮಾನ, ಹವಾಮಾನ ವರದಿ

Share This Article