– ರೈತರಿಗೆ ಹೆಚ್ಚಿನ ಪರಿಹಾರ ಬೇಕಿದ್ರೆ ಕೊಡುವ ಕೆಲಸ ಮಾಡ್ತೀವಿ ಎಂದ ಡಿಸಿಎಂ
ಬೆಂಗಳೂರು: ರೈತರನ್ನ ಒಕ್ಕಲೆಬ್ಬಿಸಿ ಟೌನ್‌ಶಿಪ್ (Bidadi Township) ಮಾಡುವುದರಲ್ಲಿ ಅರ್ಥವಿಲ್ಲ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ (G Parameshwar) ಹೇಳಿದ್ದಾರೆ.
ಬಿಡದಿ ಟೌನ್ ಶಿಪ್ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಮೊದಲನೇ ಹೇಳಿದ್ದೆ. ರೈತರನ್ನ (Farmers) ಫೋರ್ಸ್ ಮಾಡಿ ಒಕ್ಕಲೆಬ್ಬಿಸಿ ಟೌನ್ ಶಿಪ್ ಮಾಡೋದರಲ್ಲಿ ಅರ್ಥ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: 72,186 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಅಸ್ತು – 6 ತಿಂಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚನೆ
ಯಾವುದೇ ಗೊಂದಲ ಇಲ್ಲದೇ ಟೌನ್ ಶಿಪ್ ಮಾಡಬೇಕು. ರೈತರ ಒಪ್ಪಿಗೆ ಪಡೆದೇ ಟೌನ್ ಶಿಪ್ ಮಾಡ್ತೀವಿ. ಭೂ ಪರಿಹಾರ ಕೊಟ್ಟಿರೋದು ಸಾಕಾಗ್ತಿಲ್ಲ ಅಂದ್ರೆ ಇನ್ನೊಮ್ಮೆ ಪರಿಶೀಲನೆ ಮಾಡಬಹುದು. ರೈತರಿಗೆ ಹೆಚ್ಚು ಪರಿಹಾರ ಬೇಕು ಅಂದರೆ ಕೊಡುವಂತ ಕೆಲಸ ಮಾಡ್ತೀವಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಜೊತೆ ನನಗಾವ ವ್ಯವಹಾರವೂ ಇಲ್ಲ, ಆತ್ಮೀಯತೆಯೂ ಇಲ್ಲ: ಧರ್ಮಸ್ಥಳದಲ್ಲಿ ವಿಜಯೇಂದ್ರ

ಇನ್ನೂ ಬಿಡದಿಯಲ್ಲಿ ಎಐ ಹಬ್ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, AI ಹಬ್ ಮಾಡುವ ಬಗ್ಗೆ ಮಾಹಿತಿ ಇಲ್ಲ. ಎಐ ಹಬ್ ಗೋಸ್ಕರ ಟೌನ್‌ಶಿಪ್ ಮಾಡ್ತಾ ಇಲ್ಲ. ಬೆಂಗಳೂರಲ್ಲಿ ದಿನನಿತ್ಯ ನೋಡ್ತಾ ಇರ್ತೀವಿ. ಟ್ರಾಫಿಕ್ ಸಮಸ್ಯೆ ಇದೆ, ಬೆಂಗಳೂರು ನಗರದ ಮೇಲೆ ಒತ್ತಡ ಇದೆ. ಅದರ ಪಕ್ಕದಲ್ಲಿ ಇನ್ನೊಂದು ಟೌನ್ ಶಿಪ್ ಆದಾಗ ಪ್ರೆಷರ್ ಕಡಿಮೆಯಾಗುತ್ತೆ. ಬೆಂಗಳೂರಿನ ಹತ್ತಿರ ಕೋಲಾರ, ತುಮಕೂರು ಇದೆ. ಹತ್ತಿರದಲ್ಲಿರುವಂತ ಪಟ್ಟಣಗಳನ್ನ ಡೆವಲಪ್ ಮಾಡಿದ್ರೆ, ಬೆಂಗಳೂರು ಮೇಲೆ ಪ್ರೆಷರ್ ಕಡಿಮೆ ಆಗುತ್ತೆ. ಬಿಡದಿ ಟೌನ್ ಶಿಪ್ ಆದ್ರೆ ಸ್ವಲ್ಪ ಸುಧಾರಿಸಬಹುದು. ಬೆಂಗಳೂರಿನಂತೆ ತುಮಕೂರು, ಕೋಲಾರದಲ್ಲೂ ಟೌನ್ ಶಿಪ್ ಮಾಡಿದ್ರೆ ಪ್ರೆಷರ್ ಕಡಿಮೆಯಾಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನೂ 72 ಸಾವಿರ ಹುದ್ದೆಗಳ ನೇಮಕಾತಿಗೆ ಅನುಮೋದನೆ ನೀಡಿರುವ ವಿಚಾರ ಕುರಿತು ಮಾತನಾಡಿ, ನಮ್ಮ ಪ್ರಣಾಳಿಕೆಯಲ್ಲಿ ನಮ್ಮ ಸರ್ಕಾರ ಬರುವಾಗ ಖಾಲಿ ಇರುವ ಹುದ್ದೆ ಭರ್ತಿ ಮಾಡ್ತೀವಿ ಅಂತ ಹೇಳಿದ್ವಿ. 2.50 ಲಕ್ಷ ಹುದ್ದೆ ಖಾಲಿ ಇದೆ, ಹಂತ-ಹಂತವಾಗಿ ತುಂಬುತ್ತೇವೆ ಅಂತ ಹೇಳಿದ್ವಿ. ಅನೇಕ ಕಾರಣದಿಂದ ಅದು ವಿಳಂಬ ಆಗಿತ್ತು. ಅದೊಂದು ದೊಡ್ಡ ಸಮಸ್ಯೆಯಾಗಿ ಬಂದಿತ್ತು. ಕಮಿಟಿ ಮಾಡಿ ಜ. ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಕೂಲಂಕುಶವಾಗಿ ಪರಿಶೀಲನೆ ಮಾಡಿ, ಈ ಮೊದಲು 24 ಸಾವಿರ ಹುದ್ದೆ ತುಂಬಲು ಸರ್ಕಾರ ಸಿದ್ಧತೆ ಮಾಡಿಕೊಂಡಿತ್ತು. ಈ ಮಧ್ಯ ಸರ್ಕಾರ ಮುಖ್ಯಮಂತ್ರಿಗಳ ಬದಲಾವಣೆ ಆದ್ಮೇಲೆ ಅದನ್ನ ಪುನರ್ ಪರಿಶೀಲನೆ ಮಾಡಿ 72,000 ಹುದ್ದೆಗಳನ್ನು ತುಂಬಲು ತೀರ್ಮಾನ ಮಾಡಿದ್ದೇವೆ ಎಂದು ವಿವರಿಸಿದ್ದಾರೆ.
ನೋಟಿಫಿಕೇಶನ್ ಮಾಡಲು ಸೂಚನೆ ಕೊಟ್ಟಿದ್ದೇವೆ. ಟೀಚರ್ಸ್, ಡಾಕ್ಟರ್ಸ್, ಎಂಜಿನಿಯರ್ಸ್ ಹೀಗೆ ಎಲ್ಲಾ ಇಲಾಖೆಗಳಲ್ಲೂ ತಡ ಮಾಡದಂತೆ ನೋಟಿಫಿಕೇಶನ್ ಮಾಡಲು ಹೇಳಿದ್ದೇವೆ. ಅದಕ್ಕೆ ಸಿಎಂ ಇಬ್ಬರು ಅಧಿಕಾರಿಗಳನ್ನೂ ಈಗಾಗಲೇ ನೇಮಕ ಮಾಡಿದ್ದಾರೆ. ಉಮಾ ಮಹದೇವನ್ ಹಾಗೂ ಗೌರವ್ ಗುಪ್ತ ಅವರನ್ನ ಮೇಲ್ವಿಚಾರಕರಾಗಿ ನೇಮಕ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಸಾಕಷ್ಟು ನಿರುದ್ಯೋಗಿಗಳಿದ್ದಾರೆ. ಸಾಕಷ್ಟು ಸಮಯದಲ್ಲಿ ನಮಗೆ ಹುದ್ದೆ ಭರ್ತಿ ಮಾಡಿ ಅಂತ ಹೇಳಿದ್ರು. ಈಗ 72,000 ಹುದ್ದೆಗಳನ್ನು ತುಂಬುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಾಮೈದನ ಮೇಲಿನ ಇಡಿ ದಾಳಿ ನನಗೆ ಅಚ್ಚರಿ ತಂದಿದೆ: ಸತೀಶ್ ಜಾರಕಿಹೊಳಿ
