– ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸಿಎಂ ಆಫರ್ ಮಾಡಿದ್ದಾರೆ: ಶಿವರಾಮ್ ಹೆಬ್ಬಾರ್
ಬೆಂಗಳೂರು: ಕಾಂಗ್ರೆಸ್ (Congress) ಅಭ್ಯರ್ಥಿ ಪರ ನಾನು ಮತ ಹಾಕಿ ಆಯ್ತು. ನನ್ನ ಆತ್ಮಸಾಕ್ಷಿಗೆ ನಾನು ಮತ ಹಾಕಿದ್ದೇನೆ ಎಂದು ಶಾಸಕ ಸೋಮಶೇಖರ್ ಹೇಳಿದ್ದಾರೆ.
ಪರಿಷತ್ ಚುನಾವಣೆಯಲ್ಲಿ (Karnataka MLC Polls) ಮತದಾನ ಮಾಡಿದ ಬಳಿಕ ಅವರು ʻಪಬ್ಲಿಕ್ ಟಿವಿʼ ಜೊತೆ ಮಾತನಾಡಿದರು. ಈ ವೇಳೆ, ಬಿಜೆಪಿಯವರು (BJP) ನನ್ನನ್ನು ಸಂಪರ್ಕ ಮಾಡಿಲ್ಲ. ಸಂಪರ್ಕ ಮಾಡದೇ ಇದ್ದರೆ ಮತದಾನ ಹೇಗೆ? ಯಾರು ಮನವಿ ಮಾಡಿದ್ದಾರೆ ಅವರಿಗೆ ಮತದಾನ ಆಗುತ್ತದೆ. ನನ್ನ ಕ್ಷೇತ್ರದ ಅನುದಾನ ವಿಚಾರಕ್ಕಾಗಿ ಕಾಂಗ್ರೆಸ್ ಪಕ್ಷದ ಜೊತೆ ಇದ್ದೇನೆ ಅಷ್ಟೇ ಎಂದರು. ಇದನ್ನೂ ಓದಿ: ಪರಿಷತ್ ಚುನಾವಣೆಯಲ್ಲಿ ಜೆಡಿಎಸ್‌ಗೆ ಶಾಕ್ – ಅಡ್ಡ ಮತದಾನ ಮಾಡಿದ್ರಾ ಜಿ.ಟಿ ದೇವೇಗೌಡ?
ಬಿಜೆಪಿಯಾಗಲಿ ಜೆಡಿಎಸ್ (JDS) ಆಗಲಿ ಮತಕ್ಕಾಗಿ ನನಗೆ ಮನವಿ ಮಾಡಿಲ್ಲ. ಸಿಎಂ ಕರೆ ಮಾಡಿ ಮತ ಹಾಕಲು ಮನವಿ ಮಾಡಿಕೊಂಡ್ರು. ನಮ್ಮ ಏರಿಯಾದ ಸಮಸ್ಯೆ ಬಗೆಹರಿಸಿದರೆ ಮತ ಹಾಕೋದಾಗಿ ಹೇಳಿದ್ದೆ. ಹಂತ ಹಂತವಾಗಿ ಕ್ಷೇತ್ರದ ಅಭಿವೃದ್ಧಿ ಮಾಡ್ತೇವೆ ಎಂದು ಹೇಳಿದ್ದಾರೆ. ಈಗ ಎಲ್ಲವೂ ಮುಗಿಯಿತು. ನಾನು ಕಾಂಗ್ರೆಸ್ ಅಭ್ಯರ್ಥಿ ಪರ ಮತ ಹಾಕಿ ಆಯ್ತು. ನನ್ನ ಆತ್ಮಸಾಕ್ಷಿಗೆ ಮತ ಹಾಕಿದ್ದೇನೆ ಎಂದು ಅವರು ಹೇಳಿದರು.
ಶಾಸಕ ಶಿವರಾಮ್ ಹೆಬ್ಬಾರ್ ಮಾತನಾಡಿ, ಜೆಡಿಎಸ್ ಬಿಜೆಪಿಯವರು ಯಾರು ನನ್ನ ಹತ್ತಿರ ಮತ ಕೇಳಿಲ್ಲ. ಕಾಂಗ್ರೆಸ್‌ನವರು ಮತ ಕೇಳಿದ್ದಾರೆ. ಮತ ಕೇಳಲು ಸಿಎಂ ಕರೆ ಮಾಡಿದ್ರು. ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ನಂಗೂ ಆಫರ್ ಮಾಡಿದ್ದಾರೆ.
ನಾನೇನು ಕಾಂಗ್ರೆಸ್‌ಗೆ ಮತ ಹಾಕಿದ್ದೀನಿ ಅಂತಾ ಎಲ್ಲೂ ಹೇಳಿಲ್ಲ. ಆತ್ಮಸಾಕ್ಷಿಗೆ ಮತ ಅಂತ ಹೇಳಿದ್ದೇನೆ ಎಂದರು. ಇದನ್ನೂ ಓದಿ: ವಂಡರ್‌ಲಾ ರೆಸಾರ್ಟ್‌ನಲ್ಲಿರೋ ‘ಕೈ’ ಶಾಸಕರನ್ನ ಕರೆತರಲು 5 ಬಸ್‌ಗಳ ವ್ಯವಸ್ಥೆ
