ಬೆಂಗಳೂರು: ನಗರದಲ್ಲಿ ದಾಖಲೆ ಇಲ್ಲದೇ ಪತ್ತೆಯಾಗಿದ್ದ 2.98 ಕೋಟಿ ಹಣವನ್ನು ವಾಪಸ್ ಕೊಡಲು ಪೊಲೀಸರಿಗೆ ಹೈಕೋರ್ಟ್ (Karnataka High Court) ಆದೇಶ ಹೊರಡಿಸಿದೆ.
ಮಹಾಲಕ್ಷ್ಮೀ ಲೇಔಟ್‌ನ ಕುರುಬರಹಳ್ಳಿಯಲ್ಲಿ ದಾಖಲೆ ಇಲ್ಲದ 2.98 ಕೋಟಿ ಹಣ ಪತ್ತೆ ಪ್ರಕರಣದಲ್ಲಿ ಅರ್ಜಿದಾರ ನಾಗರಾಜ್ ಎಂಬವರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದರು. ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಪೀಠ ಹಣವನ್ನು ವಾಪಸ್ ನೀಡಲು ಸೂಚಿಸಿದೆ. ಇದನ್ನೂ ಓದಿ: ಬೆಂಗಳೂರು | ಸಿಮೆಂಟ್ ಚೀಲದಲ್ಲಿ ಕೋಟಿ ಕೋಟಿ ಹಣ ಪತ್ತೆ
ತಾವರೆಕೆರೆ ಮೂಲದ ನಾಗರಾಜ್ ಎಂಬವರು ಆಸ್ತಿ ಹರಾಜು ತಡೆಯಲು ಕೆನರಾ ಬ್ಯಾಂಕ್‌ಗೆ ಹಣ ಕಟ್ಟಬೇಕಿತ್ತು. ಅದಕ್ಕಾಗಿ ಹಣ ತಂದಿಟ್ಟಿದ್ದರು. ಈ ವೇಳೆ ಪೊಲೀಸರು ಹಣವನ್ನು ವಶಕ್ಕೆ ಪಡೆದು ದಾಖಲೆ ನೀಡುವಂತೆ ಹೇಳಿದ್ದಾರೆ. ಸೂಕ್ತ ದಾಖಲೆ ನೀಡಿದರೂ, ಇಲ್ಲಿವರಗೂ ಹಣವನ್ನು ವಾಪಸ್ ನೀಡಿಲ್ಲ. 3 ಕೋಟಿ ಹಣ ನೀಡಿದವರೊಂದಿಗೆ ಮಾರ್ಚ್‌ನಲ್ಲೇ MOU ಮಾಡಿಕೊಳ್ಳಲಾಗಿದೆ. ಆದಾಯ ತೆರಿಗೆ ಇಲಾಖೆ ನೋಟಿಸ್‌ಗೆ ಉತ್ತರ ನೀಡುತ್ತಿದ್ದೇವೆ. ಪೊಲೀಸರು ಹಣ ವಶಕ್ಕೆ ಪಡೆದಿರುವುದರಿಂದ ಆಸ್ತಿ ಹರಾಜಾಗುತ್ತಿದೆ. ಮಾತುಕತೆಗೆ ಬರುವಂತೆ ಪೊಲೀಸರು ನೋಟಿಸ್ ನೀಡುತ್ತಿದ್ದಾರೆಂದು ವಾದ ಮಂಡಿಸಿದರು.
ಮಹಾಲಕ್ಷ್ಮೀಪುರಂ ಪೊಲೀಸರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ಪೊಲೀಸರ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಇದನ್ನೂ ಓದಿ: ಶಿಕ್ಷಕಿ ಬೈದರೆಂಬ ಆರೋಪ; ಮನನೊಂದು ನೇಣಿಗೆ ಶರಣಾದ 8ನೇ ತರಗತಿ ವಿದ್ಯಾರ್ಥಿನಿ
