ಬೆಂಗಳೂರು: ನಗರದ ಕುರುಬರಹಳ್ಳಿಯ (Kurubarahalli) ಶೆಡ್‌ನಲ್ಲಿ ಸಿಮೆಂಟ್ ಚೀಲದಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿದೆ.
ಪೊಲೀಸರು ನೈಟ್ ರೌಂಡ್‌ನಲ್ಲಿದ್ದ ವೇಳೆ ಹಣದ ಬಗ್ಗೆ ಮಾಹಿತಿ ಸಿಕ್ಕಿತ್ತು. ಶೇಷಾದ್ರಿ ಇಂಡಸ್ಟ್ರೀಸ್ ಹೆಸರಿನ ಒಂದು ಶೆಡ್‌ನಲ್ಲಿ ದಾಖಲೆಯೇ ಇಲ್ಲದ 2.98 ಕೋಟಿ ರೂ. ಹಣ ಸಿಕ್ಕಿದೆ. ಇದನ್ನೂ ಓದಿ: ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ – ಸಿ.ಟಿ ರವಿ ನೇತೃತ್ವದ ಸಮಿತಿಯಿಂದ ಬಿವೈವಿಗೆ ವರದಿ ಸಲ್ಲಿಕೆ
ಪ್ರಕರಣ ಸಂಬಂಧ ನಾಗರಾಜ್ ಹಾಗೂ ವೆಂಕಟೇಶ್ ಎಂಬವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬ್ಯಾಂಕ್ ಒಂದಕ್ಕೆ ಹಣ ಕಟ್ಟಲು ತಂದಿರುವುದಾಗಿ ಆರೋಪಿಗಳು ಹೇಳುತ್ತಿದ್ದಾರೆ.
ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಣದ ಮೂಲದ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಸದ್ಯ ಐಟಿ ಇಲಾಖೆಗೂ ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬಸ್ ಟಿಕೆಟ್ ದರ ಹೆಚ್ಚಳದ ಸುಳಿವು ನೀಡಿದ ಬೈರತಿ ಸುರೇಶ್
