ಚೆನ್ನೈ: `ವಂದೇ ಮಾತರಂ’ಗೆ ಸಂಬಂಧಿಸಿದ ಕೇಂದ್ರ ಸರ್ಕಾರದ ನಿರ್ದೇಶನದ ನಡುವೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮೊದಲು ರಾಜ್ಯ ಗೀತೆ (ನಾಡಗೀತೆ) ‘ತಮಿಳ್ ತಾಯ್ ವಳ್ತು’ ಹಾಡಬೇಕು ಎಂದು ತಮಿಳುನಾಡು (Tamil Nadu) ವಿಧಾನಸಭೆ ಸರ್ವಾನುಮತದಿಂದ ನಿರ್ಣಯ (C M Vijay) ಅಂಗೀಕರಿಸಿದೆ.
ಈ ಕುರಿತು ನಿರ್ಣಯ ಮಂಡಿಸಿದ ತಮಿಳನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್, ತಮಿಳು ಕೇವಲ ಒಂದು ಭಾಷೆಯಲ್ಲ, ನಮ್ಮ ಜೀವನಾಡಿ ಮತ್ತು ಭಾವನೆ. ರಾಜ್ಯದ ಭಾಷಾ ಮತ್ತು ಸಾಂಸ್ಕೃತಿಕ ಹಕ್ಕುಗಳ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಿಎಂ ವಿಜಯ್ ಅವರ ಈ ಮಾತಿಗೆ ಡಿಎಂಕೆ ಮತ್ತು ಎಐಎಡಿಎಂಕೆ ಸೇರಿದಂತೆ ಎಲ್ಲಾ ಪಕ್ಷಗಳು ಬೆಂಬಲ ನೀಡಿವೆ. ಈ ಕುರಿತು ಸ್ಪೀಕರ್ ಜೆಸಿಡಿ ಪ್ರಭಾಕರ್ ನಿರ್ಣಯ ಅಂಗೀಕಾರಗೊಂಡಿದ್ದು, ಅದರ ಅನುಷ್ಠಾನಕ್ಕೆ ಯಾವುದೇ ಹೆಚ್ಚಿನ ಅನುಮತಿ ಅಗತ್ಯವಿಲ್ಲ ಎಂದು ಘೋಷಿಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ವಿಜಯ್, ತಮಿಳು ಎಂದರೆ ಹೆಮ್ಮೆ, ತಮಿಳು ಎಂದರೆ ಶಕ್ತಿ. ʼತಮಿಳುʼ ಎಂದು ಹೇಳಿದ ಕ್ಷಣ ಇಡೀ ತಮಿಳುನಾಡು ಒಂದಾಗಿ ನಿಲ್ಲುತ್ತದೆ. ತಮಿಳ್ ತಾಯ್ ವಳ್ತು ಗೆ ಮೊದಲ ಸ್ಥಾನ ನೀಡುವುದು ನಮ್ಮ ಹಕ್ಕು. ತಮಿಳುನಾಡಿನ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸರ್ಕಾರಿ ಕಚೇರಿಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ನಡೆಯುವ ಕಾರ್ಯಕ್ರಮಗಳ ಆರಂಭದಲ್ಲಿ ಮೊದಲು ರಾಜ್ಯ ಗೀತೆಯನ್ನು ಹಾಡಬೇಕು ಎಂಬ ನಿರ್ಣಯವನ್ನು ತಮಿಳುನಾಡು ಸರ್ಕಾರ ಕೈಗೊಂಡಿದೆ. ಇದಕ್ಕೂ ಮುನ್ನ ಕೇಂದ್ರ ಗೃಹ ಸಚಿವಾಲಯವು ಸರ್ಕಾರಿ ಕಾರ್ಯಕ್ರಮಗಳಲ್ಲಿ ಮೊದಲು ರಾಷ್ಟ್ರಗೀತೆ ನುಡಿಸುವಂತೆ ನಿರ್ದೇಶನ ನೀಡಿತ್ತು. ಜುಲೈನಲ್ಲಿ ರಾಜ್ಯಗಳು ಈ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೇಂದ್ರ ಸರ್ಕಾರ ಸೂಚಿಸಿತ್ತು. ಇದನ್ನೂ ಓದಿ: ಜೆಡಿಎಸ್ ಪಾದಯಾತ್ರೆಯಲ್ಲಿ ರೈತರು ಯಾರೂ ಇಲ್ಲ: ಡಿಕೆಶಿ
ತಮಿಳುನಾಡಿನಲ್ಲಿ ‘ತಮಿಳು ತಾಯ್ ವಳ್ತು’ ಹಾಡಿಗೆ ಹಲವು ವರ್ಷಗಳ ಇತಿಹಾಸವಿದ್ದು, 2021ರಲ್ಲಿ ಇದನ್ನು ಅಧಿಕೃತವಾಗಿ ರಾಜ್ಯ ಗೀತೆ ಗುರುತಿಸಲಾಯಿತು. 1970ರಿಂದ ಸರ್ಕಾರಿ ಕಾರ್ಯಕ್ರಮಗಳಲ್ಲಿ ಈ ಹಾಡನ್ನು ಹಾಡುವ ಸಂಪ್ರದಾಯ ಮುಂದುವರಿದಿದೆ.
ಇತ್ತೀಚೆಗೆ ಕೆಲವು ಸರ್ಕಾರಿ ಮತ್ತು ವಿಶ್ವವಿದ್ಯಾಲಯದ ಕಾರ್ಯಕ್ರಮಗಳಲ್ಲಿ ತಮಿಳು ಗೀತೆಯನ್ನು ಮೂರನೇ ಸ್ಥಾನದಲ್ಲಿ ಹಾಡಿದ ವಿಚಾರ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಹೊಸ ನಿರ್ಣಯ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.ಇದನ್ನೂ ಓದಿ: ʻನೀನು ಕೊಲ್ಲದಿದ್ದರೆ ನಾನೇ ಕೊಲ್ತೀನಿʼ – ಪತಿಯನ್ನೇ ಮುಗಿಸಲು ಪತ್ನಿ-ಪ್ರಿಯಕರನ ಸ್ಕೆಚ್; ಚಾಟ್ ನೋಡಿ ಪೊಲೀಸರ ಮೊರೆ ಹೋದ ಗಂಡ!

