ಕೋಲಾರ: ಜೆಡಿಎಸ್ ಪಾದಯಾತ್ರೆಯಲ್ಲಿ (JDS Padayatra) ರೈತರು ಯಾರೂ ಇಲ್ಲ, ಹೊರಗಡೆ ಕ್ಷೇತ್ರದ ಕಾರ್ಯಕರ್ತರನ್ನು ಕರೆತಂದು ಹೋರಾಟ ನಡೆಸುತ್ತಿದ್ದಾರೆ ಎಂದು ಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಬಿಡದಿ ಹೋರಾಟದ ಕುರಿತು ಕೋಲಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕೀಯದ ಉಳಿವಿಗಾಗಿ ದೇವೇಗೌಡರು ಮಾಡುತ್ತಿದ್ದಾರೆ. ರೈತರು ಯಾರೂ ಇಲ್ಲ, ಹೊರಗಡೆ ಕ್ಷೇತ್ರದ ಕಾರ್ಯಕರ್ತರನ್ನು ತಂದು ಹೋರಾಟ ನಡೆಸುತ್ತಿದ್ದಾರೆ. ಪ್ರಜಾಪ್ರಭುತ್ವದ ಹಕ್ಕುನ್ನು ಬೇಡ ಅನ್ನುವುದಕ್ಕೆ ಆಗಲ್ಲ. ಅವರು ಮಾಡಿದ ಯೋಜನೆ ಮುಂದುವರಿಸಿದ್ದೇವೆ ಎಂದರು. ಇದನ್ನೂ ಓದಿ: ರಷ್ಯಾದ ಮೇಲೆ ಉಕ್ರೇನ್ ಭೀಕರ ಡ್ರೋನ್ ದಾಳಿ – ಮಗು ಸೇರಿ 13 ಮಂದಿ ಸಾವು
25 ಲಕ್ಷ ಕೊಡುತ್ತೇನೆ ಎಂದು ಹೇಳಿದರು. ನಾವು 2 ರಿಂದ 3 ಕೋಟಿಗೆ ಹೋಗಿದ್ದೀವಿ. ನೈಸ್ ಮತ್ತು ಬಿಡದಿ ಎರಡಕ್ಕೂ ಅವರೇ ಸೈನ್ ಮಾಡಿರೋದು. ನೈಸ್ ಯೋಜನೆ ಮಾಡಿರೋದು ಒಳ್ಳೆಯದು ಎಂದು ಹೇಳಿದರು. ಇದನ್ನೂ ಓದಿ: ಮಂಡ್ಯದಲ್ಲಿ ಜೈಲ್ ಭರೋ ಚಳವಳಿ – ಹೆದ್ದಾರಿ ತಡೆದ ಮಹಿಳಾ ಪ್ರತಿಭಟನಾಕಾರರನ್ನ ಹೊತ್ತೊಯ್ದ ಪೊಲೀಸರು
ಸದ್ಯದಲ್ಲಿ ಸಚಿವ ಸ್ಥಾನ ಹಂಚಿಕೆಯಾಗಲಿದೆ. ಇವತ್ತು ಸಂಜೆಯ ವೇಳೆಗೆ ಎಲ್ಲಾ ಕ್ಲಿಯರ್ ಆಗಲಿದೆ. ದೆಹಲಿಯಲ್ಲಿ ಎಲ್ಲಾ ಚರ್ಚೆಯಾಗಿದೆ. ಅಧಿವೇಶನದೊಳಗೆ ಸಚಿವ ಸ್ಥಾನ ಹಂಚಿಕೆಯಾಗಲಿದೆ. ಸದ್ಯ ಇಬ್ಬರಿಗೆ ಅಧಿವೇಶನದ ನಂತರ ಸಚಿವ ಸ್ಥಾನ ಹಂಚಿಕೆಯಾಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ರೈತರ ಜಮೀನು ಕಬಳಿಸಲು ಪೆನ್ನು, ಪೇಪರ್ ಬಳಸ್ತಿದ್ದೀರಾ?: ಸಿಎಂ ವಿರುದ್ಧ ನಿಖಿಲ್ ವಾಗ್ದಾಳಿ

