ಬೆಂಗಳೂರು: ಇಲ್ಲಿನ ಕೆಆರ್ ಪುರದ (KR Pura) ಸಿಗೇಹಳ್ಳಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಮೂವರನ್ನು ನಾವೇ ಹತೈಗೈದಿರುವುದಾಗಿ ಆರೋಪಿಗಳಾದ ಶ್ವೇತಾ ಹಾಗೂ ಕೆನತ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.
ಕಳೆದ ಸೋಮವಾರ ಕೌಟುಂಬಿಕ ಕಲಹದ ಹಿನ್ನೆಲೆ ಶ್ವೇತಾ ಮತ್ತು ಆಕೆಯ ಪ್ರಿಯಕರ ಕೆನತ್ ಸೇರಿಕೊಂಡು ಶ್ವೇತಾಳ ತಂದೆ ಸೋಮಸುಂದರ್, ತಾಯಿ ಮುತ್ತು ಲಕ್ಷ್ಮೀ ಮತ್ತು ಸಹೋದರಿ ಸುಪ್ರಿಯಾಳನ್ನು ತನ್ನ ಫ್ಲ್ಯಾಟ್‌ನಲ್ಲೇ ಬರ್ಬರವಾಗಿ ಇರಿದು ಕೊಲೆ ಮಾಡಿದ್ರು. ನಂತರ ಇಬ್ಬರನ್ನು ಪುದುಚೇರಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಕೆ.ಆರ್ ಪುರ ತ್ರಿಬಲ್ ಮರ್ಡರ್ ಕೇಸ್; ಆರೋಪಿ ಕೆನತ್ ಅರೆಸ್ಟ್
ಪೊಲೀಸರು ಇಬ್ಬರ ಪ್ರಾಥಮಿಕ ವಿಚಾರಣೆ ನಡೆಸಿದ್ದು, ಈ ವೇಳೆ ಮೂವರನ್ನು ನಾವೇ ಕೊಲೆ ಮಾಡಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಕೊಲೆಗೆ ಕಾರಣ ಏನು ಅನ್ನೋದರ ಬಗ್ಗೆ ಖಚಿತವಾಗಿ ಮಾಹಿತಿ ನೀಡುತ್ತಿಲ್ಲ. ಹೀಗಾಗಿ ಕೆಆರ್ ಪುರ ಪೊಲೀಸರು, ಇಬ್ಬರನ್ನೂ ತಲಾ ಹದಿನೈದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.
ಪೊಲೀಸರ ವಿಚಾರಣೆಯಲ್ಲಿ ಕೊಲೆಗೆ ಅಸಲಿ ಕಾರಣ ಏನು ಅನ್ನೋದು ಗೊತ್ತಾಗಬೇಕಿದೆ.ಇದನ್ನೂ ಓದಿ: ಕೆ.ಆರ್ ಪುರ ತ್ರಿಬಲ್ ಮರ್ಡರ್ ಕೇಸ್; ಒಂದು ಕೊಲೆಗೆ ಸ್ಕೆಚ್, ಆಗಿದ್ದು ಮೂರು ಮರ್ಡರ್
