ಲಕ್ನೋ: ಐಪಿಎಸ್ ಅಧಿಕಾರಿಯ (IPS Officer) ತಾಯಿ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದು, ಅವರು ಧರಿಸಿದ್ದ ಚಿನ್ನಾಭರಣಗಳು ನಾಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಅಂಬೇಡ್ಕರ್‌ನಗರದಲ್ಲಿ (Ambedkar Nagar) ನಡೆದಿದೆ.

ರುಧಾ ಧಮ್ರುವಾ ಗ್ರಾಮದಲ್ಲಿ (Rudha Dhamrua) ಘಟನೆ ನಡೆದಿದೆ. ಮೃತರನ್ನು ಇಂದ್ರಾವತಿ (91) ಎಂದು ಗುರುತಿಸಲಾಗಿದೆ. ಇಂದ್ರಾವತಿ ಅವರು 2016ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿ ಅಶುತೋಷ್ ಮಿಶ್ರಾ ಅವರ ತಾಯಿಯಾಗಿದ್ದು, ಒಂಟಿಯಾಗಿ ವಾಸಿಸುತ್ತಿದ್ದರು. ಇದನ್ನೂ ಓದಿ: ನಾಯಿ ಮೂತ್ರದಿಂದ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ – ಚಾಕು ಇರಿದು ಯುವಕನ ಹತ್ಯೆ
ಭಾನುವಾರ ಬೆಳಗ್ಗೆ 9 ಗಂಟೆಗೆ ಇಂದ್ರಾವತಿಯ ಮೃತದೇಹ ಮನೆಯೊಳಗಿನ ಮಂಚದ ಮೇಲೆ ಪತ್ತೆಯಾಗಿದೆ. ಮನೆಗೆಲಸದವರು ಮನೆಗೆ ಬಂದಾಗ ಮೃತದೇಹವನ್ನು ಕಂಡು ಮಾಹಿತಿ ನೀಡಿದ್ದಾರೆ. ಸದ್ಯ ಲಕ್ನೋದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಐಪಿಎಸ್ ಅಧಿಕಾರಿ ಅಶುತೋಷ್ ಮಿಶ್ರಾ ಭಾನುವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಗ್ರಾಮಕ್ಕೆ ಆಗಮಿಸಿದ್ದಾರೆ. ಬಳಿಕ ಅಪರಿಚಿತ ವ್ಯಕ್ತಿಗಳ ವಿರುದ್ಧ ಕೊಲೆ ಹಾಗೂ ದರೋಡೆ ಪ್ರಕರಣ ದಾಖಲಿಸುವಂತೆ ದೂರು ನೀಡಿದ್ದಾರೆ. ಇದನ್ನೂ ಓದಿ: ಉಕ್ರೇನ್‌ನಲ್ಲಿರುವ ಭಾರತೀಯ ಬಿಲಿಯನೇರ್ ಕಾರ್ಖಾನೆ ಮೇಲೆ ರಷ್ಯಾ ದಾಳಿ
ಇಂದ್ರಾವತಿ ಧರಿಸಿದ್ದ ಚಿನ್ನದ ಸರ, ಮೂಗುತಿ, ಕಿವಿಯೋಲೆಗಳು ಮತ್ತು ಕಾಲುಚೈನ್ ನಾಪತ್ತೆಯಾಗಿವೆ ಎಂದು ವರದಿಯಾಗಿದೆ. ಶನಿವಾರ ರಾತ್ರಿ ಕಳ್ಳರು ಮನೆಗೆ ನುಗ್ಗಿ, ಇಂದ್ರಾವತಿಯನ್ನು ಹತ್ಯೆ ಮಾಡಿದ ಬಳಿಕ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿರಬಹುದು ಎಂದು ಕುಟುಂಬಸ್ಥರು ಶಂಕಿಸಿದ್ದಾರೆ. ಇದನ್ನೂ ಓದಿ: ಪಿಜಿ ಗಳಲ್ಲಿ ಕಳಪೆ ಆಹಾರ ನೀಡಿ ಸಿಕ್ಕಿಬಿದ್ರೆ ಕ್ಷಮೆ ಇಲ್ಲ – ಅಡುಗೆ ಕೋಣೆಯಲ್ಲಿ ಸಿಸಿಟಿವಿ ಕಡ್ಡಾಯ: ಖಾದರ್ ಖಡಕ್ ವಾರ್ನಿಂಗ್
ಈ ಘಟನೆ ಕುರಿತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸರ್ಕಾರವನ್ನು ಟೀಕಿಸಿದ್ದಾರೆ. ಅಂಬೇಡ್ಕರ್‌ನಗರದಲ್ಲಿ ಐಪಿಎಸ್ ಅಧಿಕಾರಿಯ ತಾಯಿಯ ಹತ್ಯೆಯ ದುಃಖದ ಸುದ್ದಿ ಬಂದಿದೆ. ಉತ್ತರ ಪ್ರದೇಶದಲ್ಲಿ ಪೊಲೀಸರೇ ಸುರಕ್ಷಿತವಾಗಿಲ್ಲ, ಇದು ದುರದೃಷ್ಟಕರ ಎಂದು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ತಂದೆ-ಮಗ ಅನುಮಾನಾಸ್ಪದ ಸಾವು: ಪತ್ನಿ ವಶಕ್ಕೆ, ಕೊಲೆ ಶಂಕೆ
ಪೊಲೀಸರು ಹೇಳಿದ್ದೇನು?
ಪೊಲೀಸರ ಹೇಳಿಕೆಯ ಪ್ರಕಾರ, ರಮೇಶ್ ಚಂದ್ರ ಮಿಶ್ರಾ ಎಂಬ ವ್ಯಕ್ತಿ ಮಾಲಿಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ರುಧಾ ಧಮ್ರುವಾ ಗ್ರಾಮದ ನಿವಾಸಿ ಅಶುತೋಷ್ ಮಿಶ್ರಾ ಅವರ ತಾಯಿ ಬೆಳಗ್ಗೆ 8 ಗಂಟೆಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದರು. ಇದನ್ನೂ ಓದಿ: ಫ್ಲೈವುಡ್ ಗೋಡೌನ್ ನಲ್ಲಿ ಆಕಸ್ಮಿಕ ಬೆಂಕಿ – ಲಕ್ಷಾಂತರ ರೂಪಾಯಿ ಮೌಲ್ಯದ ಯಂತ್ರೋಪಕರಣ ಸುಟ್ಟು ಭಸ್ಮ
ಬಳಿಕ ಮಧ್ಯಾಹ್ನ ಸುಮಾರು 2:30ಕ್ಕೆ ಆಶುತೋಷ್ ಮಿಶ್ರಾ ಅವರು ತಮ್ಮ ತಾಯಿ ಹತ್ಯೆಯಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅವರು ಧರಿಸಿದ್ದ ಆಭರಣಗಳು ಮೃತದೇಹದ ಮೇಲೆ ಇಲ್ಲ ಎಂದು ತಿಳಿಸಿದ್ದಾರೆ.ವಿಧಿವಿಜ್ಞಾನ ತಂಡ ಹಾಗೂ ಅಧಿಕಾರಿಗಳು ಘಟನಾ ಸ್ಥಳವನ್ನು ಪರಿಶೀಲಿಸಿದ್ದು, ಪಂಚನಾಮೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಮೃತದೇಹದ ಮೇಲೆ ಯಾವುದೇ ಗಾಯಗಳು ಅಥವಾ ಹೊಡೆದಾಟ ನಡೆದಿರುವ ಗುರುತುಗಳು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: BJPಗೆ ಶೆಹಜಾದ್ ಪೂನಾವಾಲಾ ದಿಢೀರ್ ರಾಜೀನಾಮೆ
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಮೂವರು ವೈದ್ಯರನ್ನೊಳಗೊಂಡ ವೈದ್ಯಕೀಯ ತಂಡ ವಿಡಿಯೋಗ್ರಫಿ ಮೂಲಕ ಮರಣೋತ್ತರ ಪರೀಕ್ಷೆ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂದ್ರಾವತಿಯ ಸಾವಿಗೆ ನಿಖರ ಕಾರಣ ಹಾಗೂ ಆಭರಣಗಳು ನಾಪತ್ತೆಯಾಗಿರುವುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಬಂಗಾಳದ ಬಿರ್ಭೂಮ್‌ನ ತಾರಾಪಿತ್ ದೇವಾಲಯ ಬಳಿಯ ಹೋಟೆಲ್‌ನಲ್ಲಿ ಬೆಂಕಿ; 7 ಯಾತ್ರಿಕರು ಸಾವು
