ಕೋಲ್ಕತ್ತಾ: ಇಲ್ಲಿನ ಪ್ರತಿಷ್ಠಿತ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ (Salt Lake Stadium) ನಡೆದ ಐತಿಹಾಸಿಕ ಫಿಫಾ ಸೌಹಾರ್ದ ಫುಟ್‌ಬಾಲ್ ಪಂದ್ಯದಲ್ಲಿ ವಿಶ್ವದ ಬಲಿಷ್ಠ ಬ್ರೆಜಿಲ್(Brazil) ತಂಡವು ಭಾರತದ(India) ವಿರುದ್ಧ 4-0 ಗೋಲುಗಳ ಅಂತರದ ಭರ್ಜರಿ ಜಯ ದಾಖಲಿಸಿದೆ.
ಭಾರತೀಯ ಪುರುಷರ ಸೀನಿಯರ್ ಫುಟ್‌ಬಾಲ್ ಇತಿಹಾಸದಲ್ಲೇ ಬ್ರೆಜಿಲ್ ವಿರುದ್ಧ ನಡೆದ ಮೊದಲ ಮುಖಾಮುಖಿ ಇದಾಗಿದ್ದು, ಬ್ರೆಜಿಲ್ ತಂಡ ತನ್ನ ಸಾಂಪ್ರದಾಯಿಕ ಶೈಲಿಯ ಆಟದೊಂದಿಗೆ ಸಂಪೂರ್ಣ ಪ್ರಾಬಲ್ಯ ಮೆರೆಯಿತು.
ಫಿಫಾ ಶ್ರೇಯಾಂಕದಲ್ಲಿ 5ನೇ ಸ್ಥಾನದಲ್ಲಿರುವ ಬಲಿಷ್ಠ ಬ್ರೆಜಿಲ್ ವಿರುದ್ಧ 138ನೇ ಶ್ರೇಯಾಂಕದ ಭಾರತ ಆರಂಭದ 25 ನಿಮಿಷಗಳ ಕಾಲ ಅತ್ಯಂತ ಸಂಘಟಿತ ರಕ್ಷಣಾತ್ಮಕ ಆಟ ಪ್ರದರ್ಶಿಸಿತು. ಬ್ರೆಜಿಲ್‌ನ ನಿರಂತರ ಆಕ್ರಮಣಗಳನ್ನು ಭಾರತೀಯ ಡಿಫೆಂಡರ್‌ಗಳು ಹಾಗೂ ಗೋಲ್‌ಕೀಪರ್ ದಿಟ್ಟವಾಗಿ ತಡೆದು ನಿಲ್ಲಿಸಿದರು.
TWIST. TURN. BOOM! 💥
Estevao beats Gurpreet at the near post with a sharp finish. ⚡
Watch #INDvBRA LIVE NOW on Sony Sports Network TV channels, Sony Aath & Sony LIV.#SonySportsNetwork #SonyLIV #SonyAATH #IndiaKiSabseBadiParty pic.twitter.com/sZuvYB1p1o
— Sony Sports Network (@SonySportsNetwk) October 3, 2026
28ನೇ ನಿಮಿಷದಲ್ಲಿ ಯುವ ಮುಂಚೂಣಿ ಆಟಗಾರ ಎಸ್ಟೆವಾವೊ ವಿಲಿಯನ್ ಗೋಲು ಬಾರಿಸಿ ಬ್ರೆಜಿಲ್ ಖಾತೆ ತೆರೆದರು. ಮೊದಲಾರ್ಧ ಮುಕ್ತಾಯದ ಹಂತದಲ್ಲಿ (42ನೇ ನಿಮಿಷ) ಎಸ್ಟೆವಾವೊ ನೀಡಿದ ನಿಖರ ಪಾಸ್ ನೆರವಿನಿಂದ ಫ್ಲಮೆಂಗೊ ಕ್ಲಬ್‌ನ ಸ್ಟ್ರೈಕರ್ ಪೆಡ್ರೊ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿ ಮುನ್ನಡೆಯನ್ನು 2-0ಗೆ ಏರಿಸಿದರು. ಇದನ್ನೂ ಓದಿ: 44 ವರ್ಷದ ಬಳಿಕ ಇತಿಹಾಸ ಸೃಷ್ಟಿ – ಚಿನ್ನಕ್ಕೆ ಮುತ್ತಿಟ್ಟ ಭಾರತ, ಒಲಿಂಪಿಕ್ಸ್‌ಗೆ ಅರ್ಹತೆ
LINO MAKES IT THREE!
Samuel Lino keeps his cool and calmly slots it home to put Brazil firmly in control.
Watch #INDvBRA LIVE NOW on Sony Sports Network TV channels, Sony Aath & Sony LIV.#SonySportsNetwork #SonyLIV #SonyAATH #IndiaKiSabseBadiParty pic.twitter.com/vTETPQjogM
— Sony Sports Network (@SonySportsNetwk) October 3, 2026
ದ್ವಿತೀಯಾರ್ಧದಲ್ಲಿ ಪೂರ್ಣ ನಿಯಂತ್ರಣ ಸಾಧಿಸಿದ ಬ್ರೆಜಿಲ್ ಪರ ಸ್ಯಾಮ್ಯುಯೆಲ್ ಲಿನೋ 58ನೇ ನಿಮಿಷದಲ್ಲಿ ತಂಡದ ಮೂರನೇ ಗೋಲು ದಾಖಲಿಸಿದರು. ಬಳಿಕ ಪಂದ್ಯದ ಹೆಚ್ಚುವರಿ ಅವಧಿಯಲ್ಲಿ (90+5ನೇ ನಿಮಿಷ) ವೈಯಕ್ತಿಕ ಎರಡನೇ ಹಾಗೂ ತಂಡದ ಪರ ನಾಲ್ಕನೇ ಗೋಲು ಬಾರಿಸಿ ಗೆಲುವಿನ ಅಂತರವನ್ನು 4-0ಗೆ ವಿಸ್ತರಿಸಿದರು.
ಭಾರತ ಸೋಲು ಕಂಡರೂ, ವಿಶ್ವಶ್ರೇಷ್ಠ ಆಟಗಾರರ ಎದುರು ನೀಡಿದ ಹೋರಾಟ ಮತ್ತು ಪಡೆದ ಅನುಭವವು ಭಾರತೀಯ ಫುಟ್‌ಬಾಲ್‌ನ ಮುಂದಿನ ಹಾದಿಗೆ ಮಹತ್ವದ ಮೈಲಿಗಲ್ಲಾಗಿ ಪರಿಣಮಿಸಿದೆ.

