– ಅಭಿಮಾನಿಗಳ ಜೊತೆ ನಟಿ ಬರ್ತ್‌ಡೇ ಸೆಲಬ್ರೇಷನ್
– ಎಲ್ಲರೂ ಒಳ್ಳೆಯದನ್ನೇ ಮಾಡಿ, ಯಾರಿಗೂ ಕೆಟ್ಟದ್ದನ್ನು ಮಾಡಬೇಡಿ: ಫ್ಯಾನ್ಸ್‌ಗೆ ನಟಿ ಕಿವಿಮಾತು
ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್‌ಗೆ (Rachita Ram) ಹುಟ್ಟುಹಬ್ಬದ ಸಂಭ್ರಮ. ಬೆಂಗಳೂರಿನ ಆರ್‌ಆರ್ ನಗರ ನಿವಾಸದಲ್ಲಿ ನೂರಾರು ಅಭಿಮಾನಿಗಳ ಸಮ್ಮುಖದಲ್ಲಿ ನಟಿ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಸಂಭ್ರಮದ ನಡುವೆ ಜೈಲಲ್ಲಿರುವ ನಟ ದರ್ಶನ್ (Darshan) ನೆನೆದು ಭಾವುಕರಾಗಿದ್ದಾರೆ.
ರಾತ್ರಿ 12 ಗಂಟೆಗೆ ಕೇಕ್ ಕತ್ತರಿಸಿ ನಟಿ ಹುಟ್ಟುಹಬ್ಬ ಆಚರಿಸಿಕೊಂಡರು. 14 ವರ್ಷಗಳಿಂದ ಕನ್ನಡ ಸಿನಿರಂಗದಲ್ಲಿ ಹೆಸರು ಮಾಡಿರುವ ನಟಿ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಅವರ ಜೊತೆಯೇ ಬರ್ತ್‌ಡೇ ಸೆಲಬ್ರೇಟ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಪುತ್ರನ ಮೊದಲ ಸಿನಿಮಾ ‘ಸಿಗ್ಮಾ’ ವೀಕ್ಷಿಸಲು ಚೆನ್ನೈಗೆ ಬಂದ ವಿಜಯ್ ಪತ್ನಿ ಸಂಗೀತಾ
ನಟ ದರ್ಶನ್ ನೆನಪಿಸಿಕೊಂಡ ನಟಿ ರಚಿತಾ ರಾಮ್, ಮೊನ್ನೆ ಅವರ ಆಶೀರ್ವಾದ ಪಡೆಯಲು ಹೋಗಿದ್ದೆ. ಅದರೆ, ವಾರದಲ್ಲಿ ಎರಡೇ ಭೇಟಿಗೆ ಅವಕಾಶ ಇರೋದು. ಕುಟುಂಬದವರನ್ನ ಭೇಟಿ ಮಾಡಲಿದ್ದಾರೆ. ಅದಕ್ಕಾಗಿ ಅವರನ್ನ ನಾನು ಭೇಟಿ ಮಾಡಿ ಆಶೀರ್ವಾದ ಪಡೆಯಲು ಆಗಲಿಲ್ಲ. ಎರಡೂವರೆ ಗಂಟೆ ಕಾದು ವಾಪಸ್ ಬಂದೆ ಎಂದು ಬೇಸರದಿಂದ ನುಡಿದರು.
ಅವರ ಆಶೀರ್ವಾದ ನನ್ನ ಮೇಲೆ ಇದೆ. ಅವರನ್ನ ಮತ್ತೆ ಭೇಟಿ ಮಾಡಿ ಆಶೀರ್ವಾದ ಪಡೆಯುತ್ತೇನೆ. ಅಭಿಮಾನಿಗಳ ಸಂಭ್ರಮಕ್ಕೆ ನಟಿ ಖುಷಿಯಾದರು. ಇಷ್ಟೊಂದು ಅಭಿಮಾನಿಗಳು ಬಂದಿದ್ದೀರಾ. ನಿಮ್ಮೆಲ್ಲರಿಗೂ ಥ್ಯಾಂಕ್ಸ್. ನೀವೆಲ್ಲ ಕೂಗೋದು ನಮ್ಮ ಕುಟುಂಬದ ಪರವಾಗಿ ನಿಮಗಾಗಿ ನಾನು ಕೂಗ್ತೀನಿ ಎಂದು ನಟಿ ಕೂಗಿದರು. ಇದನ್ನೂ ಓದಿ: ಮನೆಯಿಂದ ಹೋದ್ರೂ ಪರವಾಗಿಲ್ಲ, ಇಬ್ರು ಹುಡುಗ್ರನ್ನ ಹೊಡೆದು ಹೋಗ್ತೀನಿ: ಆಸಿಯಾ ವೈಲೆಂಟ್
ಎಲ್ಲರೂ ಒಳ್ಳಯದನ್ನೇ ಮಾಡಿ. ಯಾರು ಯಾರಿಗೂ ಕೆಟ್ಟದನ್ನ ಮಾಡಬೇಡಿ. ಇರೋದು ಒಂದು ಜೀವನ, ಚೆನ್ನಾಗಿ ಎಂಜಯ್ ಮಾಡಿ. ಒಳ್ಳೆತನದಲ್ಲಿ ದುಡ್ಡು ಮಾಡಿ, ಕೈಲಾದ ಸಹಾಯ ಮಾಡಿ ಎಂದು ಅಭಿಮಾನಿಗಳಿಗೆ ಸಲಹೆ ನೀಡಿದರು.

