– ರಿಯಲ್ ಅನುಭವ ನೀಡುವ ಫ್ಯಾನ್ಸ್ ಪಾರ್ಕ್ – ಎಂಟ್ರಿ ಫ್ರೀ
ಶಿವಮೊಗ್ಗ: ಬೃಹತ್ ಮೈದಾನದಲ್ಲಿ ಸಾವಿರಾರು ಜನ ಒಟ್ಟಿಗೆ ಕುಳಿತು ಕ್ರಿಕೆಟ್ ಪಂದ್ಯ ವೀಕ್ಷಿಸಲು ಅನುಕೂಲವಾಗುವಂತಹ ʻಐಪಿಎಲ್ ಫ್ಯಾನ್ಸ್ ಪಾರ್ಕ್ʼನ್ನು (IPL Fans Park) ಶಿವಮೊಗ್ಗದಲ್ಲಿ ಮೇ 16ರಂದು (ನಾಳೆ) ಉದ್ಘಾಟಿಸಲಾಗುತ್ತಿದೆ.
ಶನಿವಾರ ಸಂಜೆ 6.30ಕ್ಕೆ ಶಿವಮೊಗ್ಗ ನಗರದ (Shivamogga City) ಎನ್‌ಇಎಸ್ ಮೈದಾನದಲ್ಲಿ ಪಂದ್ಯ ವೀಕ್ಷಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಿಸಿಸಿಐ ಮಾಧ್ಯಮ ಪ್ರಮುಖರಾದ ರಾಘವೇಂದ್ರ ತಿಳಿಸಿದ್ದಾರೆ. ಇದನ್ನೂ ಓದಿ: ಮಹಿ ನಿವೃತ್ತಿಯನ್ನ ಮುಚ್ಚಿಟ್ಟಿತಾ ಫ್ರಾಂಚೈಸಿ? – ಸಿಎಸ್‌ಕೆ ಮೆಂಟರ್ ಆಗೋಕೆ ರೆಡಿನಾ ಧೋನಿ?

ಶಿವಮೊಗ್ಗದ ಪತ್ರಕರ್ತರ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎನ್‌ಇಎಸ್ ಮೈದಾನದಲ್ಲಿ ಫ್ಯಾನ್ಸ್ ಪಾರ್ಕ್ ಸ್ಥಾಪನೆಗಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೇ 16 ರ ಸಂಜೆ ನಡೆಯುವ ಗುಜರಾತ್ ಮತ್ತು ಕೆಕೆಆರ್ ನಡುವಿನ ಐಪಿಎಲ್ ಮ್ಯಾಚ್ (IPL Match) ಅನ್ನು ದೊಡ್ಡ ಪರದೆಯಲ್ಲಿ ತೋರಿಸಲಾಗುತ್ತಿದೆ. ಮರುದಿನ ಮೇ 17 ರಂದು ಪಂಜಾಬ್ ಕಿಂಗ್ಸ್ ಮತ್ತು ಆರ್‌ಸಿಬಿ (RCB) ಹಾಗೂ ಡೆಲ್ಲಿ ಕ್ಯಾಪಿಟಲ್ಸ್- ರಾಜಸ್ಥಾನ್ ರಾಯಲ್ಸ್ ಪಂದ್ಯಗಳು ನಡೆಯಲಿದ್ದು ಅವುಗಳ ನೇರಪ್ರಸಾರವಿರುತ್ತೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸದ್ದಿಲ್ಲದೇ ನಿವೃತ್ತಿ ಬಗ್ಗೆ ಸುಳಿವು ಕೊಟ್ರಾ ಕಿಂಗ್ ಕೊಹ್ಲಿ?

ಸುಮಾರು 5 ಸಾವಿರ ಕ್ರಿಕೆಟ್ ಫ್ಯಾನ್ಸ್ ಇಲ್ಲಿಗೆ ಬರುವ ಸಾಧ್ಯತೆಯಿದ್ದು, ಎಲ್ಲಾ ಸಿದ್ಧತೆ ಮಾಡಲಾಗುತ್ತಿದೆ. ಇನ್ನು ಬಹಳಷ್ಟು ಜನರು ಕ್ರಿಕೆಟ್ ಮ್ಯಾಚ್ ನೋಡಲು ಕ್ರೀಡಾಂಗಣಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಅವರಿಗೆಲ್ಲಾ ಫ್ಯಾನ್ಸ್ ಪಾರ್ಕ್ ನಲ್ಲೇ ಕುಳಿತು ಪಂದ್ಯ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ಕುಳಿತು ದೊಡ್ಡ ಪರದೆಯಲ್ಲಿ ಪಂದ್ಯ ವೀಕ್ಷಣೆ ಮಾಡುವುದು ನೇರವಾಗಿಯೇ ನೋಡಿದಷ್ಟು ಅನುಭವ ನೀಡುತ್ತದೆ. ಅದಕ್ಕೆ ತಕ್ಕಂತೆ ಈ ಫ್ಯಾನ್ಸ್ ಪಾರ್ಕ್ ಸಿದ್ಧಪಡಿಸಲಾಗಿದೆ. ಇಲ್ಲಿ ಆಸನದ ವ್ಯವಸ್ಥೆ ಇರುವುದಿಲ್ಲ. ಕಾರ್ಪೆಟ್ ನಲ್ಲಿ ಕುಳಿತುಕೊಂಡು ಅಥವಾ ಜನ ನಿಂತುಕೊಂಡೇ ಕ್ರಿಕೆಟ್ ಪಂದ್ಯದ ನೇರ ಪ್ರಸಾರವನ್ನ ಆನಂದಿಸಬೇಕು. ಕ್ರಿಕೆಟ್ ವೀಕ್ಷಣೆ ಜೊತೆಗೆ ಆಹಾರ ಮಳಿಗೆ, ಗೇಮ್ ಜೋನ್ ಇತ್ಯಾದಿಗಳು ಇರಲಿದ್ದು, ಸಾರ್ವಜನಿಕರಿಗೆ ಮುಕ್ತ ಅವಕಾಶವಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: IPL 2026 | ಪಡೆದಿದ್ದು 27 ಕೋಟಿ, ಗಳಿಸಿದ್ದು 251 ರನ್ – ಮುಂದಿನ ಆವೃತ್ತಿಗೆ ಪಂತ್ ಸೇರಿ ಮೂವರು ನಾಯಕರಿಗೆ ಕೊಕ್?

ಐಪಿಎಲ್ ಫ್ಯಾನ್ಸ್ ಪಾರ್ಕ್‌ಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ದೊಡ್ಡ ಪರದೆಗಳಲ್ಲಿ ತೋರಿಸುವುದರಿಂದ ಕ್ರೀಡಾಂಗಣದ ಅನುಭವವೇ ನೋಡುಗರಿಗೆ ದೊರಕುತ್ತದೆ. ಸಾಕಷ್ಟು ಮೋಜು, ಮಸ್ತಿ ಕೂಡಾ ಇರುತ್ತದೆ. ಕ್ರೀಡಾಂಗಣದಲ್ಲಿ ಪ್ರೇಕ್ಷಕರು ನೋಡುವಂತೆ ಇಲ್ಲಿಯೂ ಕೂಡಾ ಸಿಳ್ಳೆ, ಪ್ರೋತ್ಸಾಹ, ಮುಖಕ್ಕೆ ಪೇಂಟಿಂಗ್, ಘೋಷಣೆ, ಸಾಹಸಮಯ ಸ್ಟಂಟ್‌ಗಳು ಎಲ್ಲವೂ ಇರಲಿದ್ದು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ, ಶಿವಮೊಗ್ಗ ಘಟಕ, ಟಾಟಾ ಐಪಿಎಲ್‌ನವರ ಸಹಕಾರದಲ್ಲಿ ಆಯೋಜಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.
ಈ ವೇಳೆ ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾದ ನಾಗೇಂದ್ರ ಪಂಡಿತ್ ಉಪಸ್ಥಿತರಿದ್ದರು.

