DistrictsGadagKarnatakaLatestMain Post

ಹಿಜಬ್ ಬೆಂಬಲಿಸಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಪ್ರತಿಭಟನೆ!

ಗದಗ: ಹಿಜಬ್-ಕೇಸರಿ ಶಾಲು ವಿವಾದದ ಬೆನ್ನಲ್ಲೇ, ಕೋಮುಸೌಹಾರ್ದತೆ ನಾಡಲ್ಲಿ ಹಿಜಬ್ ಬೆಂಬಲಿಸಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯಿತು. ಜಿಲ್ಲೆಯ ದಲಿತ ಸಂಘರ್ಷ ಸಮಿತಿ ಹಾಗೂ ಅಂಜುಮನ್ ಇಸ್ಲಾಂ ಕಮಿಟಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯಿತು.

ರಾಯಚೂರು ಜಿಲ್ಲಾ ನ್ಯಾಯಾಧೀಶರು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ್ದಾರೆ. ಅವರನ್ನು ಸೇವೆಯಿಂದ ವಜಾಗೊಳಿಸಬೇಕು. ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿಸಲು ಈ ರೀತಿ ಹುನ್ನಾರ ಮಾಡಲಾಗುತ್ತಿದೆ. ನರಗುಂದ ಗಲಾಟೆಯಲ್ಲಿ ಹತ್ಯೆಯಾದ ವ್ಯಕ್ತಿಯ ಬಗ್ಗೆ ಸಿ.ಐ.ಡಿ ತನಿಖೆ ಮಾಡಬೇಕು ಎಂದು ಈ ಎಲ್ಲ ಬೇಡಿಕೆಗಳನ್ನ ಆಗ್ರಹಿಸಿ ಈ ಪ್ರತಿಭಟನಾ ರ್ಯಾಲಿಯನ್ನು ಮಾಡಲಾಯಿತು. ಇದನ್ನೂ ಓದಿ:  1.35 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ ಶ್ರೀಮಂತ ಪಾಟೀಲ್

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಸರ್ಪಗಾವಲು ನೇಮಿಸಲಾಗಿತ್ತು. ಹಿಜಬ್ ಧರಿಸಿದ ಮಹಿಳೆಯರನ್ನು ಸುತ್ತಲೂ ಮಾನವ ಸರಪಳಿ ನಿರ್ಮಿಸಿ, ‘ನಮ್ಮ ಹೆಣ್ಣು ಮಕ್ಕಳಿಗೆ ನಮ್ಮ ರಕ್ಷಣೆ’ ಎಂಬಂತೆ ಯುವಕರು ರಕ್ಷಣೆಗೆ ಮುಂದಾದರು. ದೇಶದ ಎಲ್ಲ ಧರ್ಮಗಳಿಗೆ ಸಮಾನ ಹಕ್ಕಿದೆ.

ಜ್ಯಾತಿ-ಧರ್ಮಗಳ ಮಧ್ಯ ವಿಷ ಬೀತ ಬಿತ್ತದಿರಿ. ಸಂವಿಧಾನ ಉಳಿದರೆ ನಮ್ಮ ಉಳಿವು, ಅಭಿವ್ಯಕ್ತ ಸ್ವಾತಂತ್ರ್ಯ ನಮ್ಮ ಹಕ್ಕು. ವಿದ್ಯಾರ್ಥಿಗಳ ಹಕ್ಕು ಸಂವಿಧಾನ ಬದ್ಧವಾಗಿದೆ. ಸಂವಿಧಾನ ಈ ದೇಶದ ಗ್ರಂಥ. ಧರ್ಮ ನನ್ನ ಆಯ್ಕೆ ಬಲವಂತ ಬೇಡ. ಹೀಗೆ ಅನೇಕ ಪ್ಲಕ್ ಕಾರ್ಡ್‍ಗಳನ್ನು ಹಿಡಿಕೊಂಡು ಪ್ರತಿಭಟನೆ ಮಾಡಿದರು.

ನಗರದ ತೋಂಟದಾರ್ಯ ಮಠದಿಂದ ಆರಂಭಗೊಂಡ ಮೆರವಣಿಗೆ ಬ್ಯಾಂಕ್ ರೋಡ್, ಹುಯಿಲಗೋಳ ನಾರಾಯಣರಾವ್ ಸರ್ಕಲ್, ನಾಮಜೋಷಿ ರೋಡ್, ಕೆ.ಎಚ್.ಪಾಟೀಲ್ ವೃತ್ತ, ವೀರ ಸಾವರ್ಕರ್ ರಸ್ತೆ, ಭೂಮರಡ್ಡಿ ಸರ್ಕಲ್, ಮಹಾತ್ಮ ಗಾಂಧಿ ಸರ್ಕಲ್ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ರ್ಯಾಲಿ ನಡೆಸಿದರು. ಇದನ್ನೂ ಓದಿ:  ಮಹೀಂದ್ರಾ ಶೂಟ್‍ನಲ್ಲಿ ತಾಳ್ಮೆ ಕಳೆದುಕೊಂಡ ಅಜಯ್ ದೇವಗನ್!

ಈ ಪ್ರತಿಭಟನೆಯಲ್ಲಿ ಸಾವಿರಾರು ಜನ ಭಾಗವಹಿಸಿದ್ದರು. ನಂತರ ತಹಶಿಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Leave a Reply

Your email address will not be published. Required fields are marked *

Back to top button