ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದ ಬಸವನಗರ ಹಾಗೂ ಸಿದ್ದೇಶ್ವರ ಕಾಲೋನಿಯಲ್ಲಿ ಶಾಸಕರ ವಿಶೇಷ ಪ್ರಯತ್ನದಿಂದ ಸುಮಾರು 1.35 ಕೋಟಿ ರೂ. ವೆಚ್ಚದ ರಸ್ತೆ ಚರಂಡಿ ಕಾಮಗಾರಿ ಮಂಜೂರುಗೊಂಡಿದೆ.
ಇಂದು ಕಾಗವಾಡ ಗುರುದೇವಾಶ್ರಮದ ಪರಮ ಪೂಜ್ಯ ಶ್ರೀ ಯತೀಶ್ವರಾನಂದ ಸ್ವಾಮೀಜಿ ಹಾಗೂ ಕಾಗವಾಡ ಶಾಸಕ, ಮಾಜಿ ಸಚಿವ ಶ್ರೀಮಂತ ಪಾಟೀಲ್ ಭೂಮಿ ಪೂಜೆ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
Advertisement
Advertisement
ಈ ಸಮಯದಲ್ಲಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಕಾಗವಾಡ ಗುರುದೇವಾಶ್ರಮದ ಪ.ಪೂ. ಶ್ರೀ ಯತೀಶ್ವರಾನಂದ ಸ್ವಾಮೀಜಿ ಮಾತನಾಡಿದ್ದು, ಕಾಗವಾಡಕ್ಕೆ ಶ್ರೀಮಂತ ಪಾಟೀಲರು ಶಾಸಕರಾದ ನಂತರ ಕಾಗವಾಡ ಕ್ಷೇತ್ರವು ಎಂದೂ ಕಾಣದಂತಹ ಅಭಿವೃದ್ಧಿಯನ್ನು ಕಾಣುತ್ತಿದೆ. ಶಾಸಕರು ಕ್ಷೇತ್ರದ ಜನತೆಗೆ ಕೊಟ್ಟ ಮಾತಿನಂತೆ ಹಲವಾರು ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿರುವ ಎಲ್ಲ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಬಣ್ಣಿಸಿದರು. ಇದನ್ನೂ ಓದಿ: ಹಳ್ಳಿಯಿಂದ ಬರುತ್ತಿದ್ದ ವಿದ್ಯಾರ್ಥಿನಿಯರಿಗೆ ಹಿಜಬ್ ಬಗ್ಗೆ ಅಷ್ಟಾಗಿ ತಿಳಿದಿರಲಿಲ್ಲ: ಕಲಬುರಗಿ ಶಿಕ್ಷಕ
Advertisement
ಮುಂದಿನ ದಿನಮಾನಗಳಲ್ಲಿಯೂ ಕೂಡ ಅವರ ಜನ ಸೇವೆ ನಿರಂತರವಾಗಿ ಸಾಗಲಿ ಎಂದು ಶುಭ ಹಾರೈಸಿದರು. ಶಾಸಕರು ಲೋಕೋಪಯೋಗಿ ಎಂಜಿನಿಯರ್‍ಗಳು ಹಾಗೂ ಗುತ್ತಿಗೆದಾರರಿಗೆ ವ್ಯವಸ್ಥಿತವಾಗಿ ರಸ್ತೆ ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದರು.
Advertisement
ಪಾಟೀಲ್ ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಜನರ ಆಶೀರ್ವಾದದಿಂದ ನಾನು ಶಾಸಕನಾಗಿದ್ದೇನೆ. ಸಚಿವನು ಕೂಡ ಆಗಿದ್ದೆ. ಪ್ರಸ್ತುತ ನಾನು ಶಾಸಕನಾಗಿದ್ದರೂ ಕೂಡ 24 ಗಂಟೆಗಳ ಕಾಲ ನಿಮ್ಮ ಸೇವಕನಾಗಿ ಸೇವೆ ಸಲ್ಲಿಸಲು ಸದಾ ಸಿದ್ಧನಿರುವುದಾಗಿ ಹೇಳಿದರು.
ಕ್ಷೇತ್ರದಲ್ಲಿ ಶಿಕ್ಷಣ, ನೀರಾವರಿ, ರಸ್ತೆ ಅಭಿವೃದ್ಧಿ ಹಾಗೂ ಮತ್ತಿತರ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುವುದರ ಮೂಲಕ ಕಾಗವಾಡ ಮತಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಸರ್ವಾಂಗೀಣ ಅಭಿವೃದ್ಧಿ ಪಡಿಸುವುದೇ ನನ್ನ ಮುಖ್ಯ ಗುರಿಯಾಗಿದೆ. ಆದುದ್ದರಿಂದ ತಮ್ಮೆಲ್ಲರ ಪ್ರೀತಿ ಆಶೀರ್ವಾದ ಸದಾ ನನ್ನ ಮೇಲಿರಲಿ ಎಂದು ಕೋರಿಕೊಂಡರು. ಇದನ್ನೂ ಓದಿ: ಹಿಜಬ್ ಧರಿಸಿಯೇ ಶಾಲೆಗೆ ಬಂದ ವಿದ್ಯಾರ್ಥಿನಿಯರು
ಇದೇ ಸಮಯದಲ್ಲಿ ಕಾಗವಾಡದ ನಮ್ಮ ಶಾಸಕರ ಕೇಂದ್ರ ಕಚೇರಿಯ ವತಿಯಿಂದ ಸಾರ್ವಜನಿಕರಿಗೆ ವೃದ್ದಾಪ್ಯ ವೇತನ, ಅಂಗವಿಕಲರ ವೇತನ, ವಿಧವಾ ವೇತನದ ಫಲಾನುಭವಿಗಳಿಗೆ ಪರಮಪೂಜ್ಯರು ಹಾಗೂ ಶಾಸಕರ ಹಸ್ತದಿಂದ ಮಂಜೂರಾತಿ ಪತ್ರಗಳನ್ನು ಸಾಂಕೇತಿಕವಾಗಿ ವಿತರಿಸಿದರು.
ಈ ವೇಳೆ ಸುಭಾಷ್ ಕಠಾರೆ, ರೇವಣ್ಣಾ ಪಾಟೀಲ್, ಎಮ್.ಬಿ.ಪಾಟೀಲ್, ರವಿ ಪಾಟೀಲ್, ರಾಜು ಕುಸನಾಳೆ, ಸೇರಿದಂತೆ ಮತ್ತಿತರ ಸ್ಥಳೀಯ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.