ದಾವಣಗೆರೆ: ರಾಮಮಂದಿರದ (Rama Mandira) ಮೇಲೆ ಉಗ್ರರು ಕಣ್ಣಿಟ್ಟ ವಿಚಾರ ತಿಳಿದು ಶಂಕಿತ ಸುಹೇಲ್‌ಗೆ ಮನೆ ಬಾಡಿಗೆ ಕೊಟ್ಟಿದ್ದ ಮಾಲೀಕ ಶಾಕ್ ಆಗಿದ್ದಾರೆ.
ಶಂಕಿತ ಉಗ್ರ ಸುಹೇಲ್ ಬಾಡಿಗೆ ಮನೆ ಕೊಟ್ಟಿದ್ದ ಬನ್ನಿಕೋಡು ಗ್ರಾಮದ ರೇಣುಕಮ್ಮ, ಗುತ್ಯಪ್ಪ ಅವರು ʻಪಬ್ಲಿಕ್ ಟಿವಿʼ ಜೊತೆ ಮಾತನಾಡಿದ್ದಾರೆ. ಈ ವೇಳೆ, 15 ದಿನಗಳ ಹಿಂದೆ ಮನೆಗೆ ಸುಯೇಲ್ ಬಾಡಿಗೆಗೆ ಬಂದಿದ್ದ. ಆತನ ಜೊತೆಗೆ 10 ಜನರು ಬಂದಿದ್ದರು. ತಿಂಗಳಿಗೆ 6,000 ರೂ. ಬಾಡಿಗೆ ನೀಡುವುದಾಗಿ ತಿಳಿಸಿದ್ದರು. ಇದನ್ನೂ ಓದಿ: ದಾವಣಗೆರೆಯಲ್ಲಿ ಜಿಹಾದಿ ಸಂಚು ಬಯಲು: ರಾಮಮಂದಿರ ಸ್ಫೋಟಿಸಲು ಸ್ಕೆಚ್, ಶಸ್ತ್ರಾಸ್ತ್ರ ಹಿಡಿದು ಫೋಟೋಶೂಟ್

ಅವರೆಲ್ಲ ಸದಾ ಹಿಂದಿಯಲ್ಲಿ ಮಾತನಾಡುತ್ತಿದ್ದರು. ನಮ್ಮ ಬಳಿ ಹಾಲು, ಮಜ್ಜಿಗೆ ಪಡೆಯುತ್ತಿದ್ದರು. ತಾವಾಯಿತು ತಮ್ಮ ಕೆಲಸ ಆಯಿತು ಅಂತಾ ಇದ್ದರು.
ಜೂ 23 ರಂದು ಬೆಳಗಿನ ಜಾವ 3 ಗಂಟೆ ವೇಳೆಗೆ 20ಕ್ಕೂ ಅಧಿಕ ಪೊಲೀಸರು ಮನೆ ಸುತ್ತುವರಿದು ನಮಗೆ ಬಾಗಿಲು ತೆಗೆಸಲು ಹೇಳಿದರು. ಬಾಗಿಲು ತೆಗೆದ ತಕ್ಷಣ ಕೆಲ ಪೊಲೀಸರು ಒಳಗೆ ಹೋಗಿ ಎಲ್ಲರನ್ನೂ ಬಂಧನ ಮಾಡಿಕೊಂಡು ಹೋದರು. ನಾವು ಪೊಲೀಸರ ಬಳಿ ಕೇಳಿದಾಗ ವಿಚಾರಣೆ ಇದೆ ಎಂದರು. ನಮಗೆ ಟಿವಿಯಲ್ಲಿ ನೋಡಿದಾಗಲೇ ಈ ವಿಚಾರ ಗೊತ್ತಾಗಿದ್ದು ಎಂದು ಮಾಹಿತಿ ನೀಡಿದರು.
ಸುಹೇಲ್ ಪದೇ ಪದೇ ನಮ್ಮ ಬೈಕ್ ಕೇಳ್ತಾ ಇದ್ದ. ಶುಕ್ರವಾರ ವಿಶೇಷವಾಗಿ ನಮಾಜ್‌ಗೆ ಹೋಗುತ್ತಿದ್ದ. ಎಲ್ಲರ ಪೈಕಿ ಆತ ಸ್ವಲ್ಪ ಚಾಲಾಕಿ ಇದ್ದ. ಆತ ಈ ರೀತಿ ಮಾಡುತ್ತಾನೆ ಅಂತ ಗೊತ್ತಿರಲಿಲ್ಲ. ಈ ಕುರಿತು ನಮಗೆ ಮೊದಲೇ ಗೊತ್ತಿದ್ದರೆ ಅವರಿಗೆ ಮನೆ ಕೊಡುತ್ತಿರಲಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಪಾಕ್ ಉಗ್ರರಿಂದ ಟಾಸ್ಕ್, ದೇಶದಲ್ಲಿ ವಿದ್ವಂಸಕ ಕೃತ್ಯಕ್ಕೆ ಸ್ಕೆಚ್ – ದಾವಣಗೆರೆಯಲ್ಲಿ ಇಬ್ಬರು ಶಂಕಿತರು ಲಾಕ್
