ದಾವಣಗೆರೆ: ಭಾರತದಲ್ಲಿ ವಿದ್ವಂಸಕ ಕೃತ್ಯ ನಡೆಸಲು ಸಜ್ಜಾಗಿದ್ದ ಇಬ್ಬರು ಶಂಕಿತ ಭಯೋತ್ಪಾದಕರನ್ನು ತುಮಕೂರು (Tumakuru) ಪೊಲೀಸರು ದಾವಣಗೆರೆಯಲ್ಲಿ (Davanagere) ಬಂಧಿಸಿದ್ದಾರೆ.
ದಾವಣಗೆರೆಯ ಬಿಡಿ ಲೇಔಟ್‌ನ ಜಮೀರ್ ಖಾನ್ (22), ತುಮಕೂರಿನ ಅಲ್ಲಾಭಕ್ಷಿ ಬಂಧಿತರು. ಈ ಇಬ್ಬರೂ ಪಾಕ್‌ನ (Pakistan) ಐಎಸ್‌ಎಸ್ ಫಂಡಿಂಗ್ ಮಾಡುತ್ತಿದ್ದ ಉಗ್ರರಾದ ಶಾಬಾಸ್ ಭುಟ್ಟಿ ಹಾಗೂ ರಾಣಾ ಉನೇನ್ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಈ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಮಾಹಿತಿ ಆಧರಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು | ಅಕ್ರಮ ಸಂಬಂಧಕ್ಕೆ ಬಿತ್ತು ಹೆಣ – ಚಾಕುವಿನಿಂದ ಇರಿದು ವ್ಯಕ್ತಿಯ ಕೊಲೆ
ಈ ಇಬ್ಬರೂ ಸೇರಿ ದುರಂದರ್ ಶೈಲಿಯಲ್ಲಿ ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದರು. ದುರಂದರ್ ಸಿನಿಮಾದಲ್ಲಿ ಹೇಗೆ ಪಾಕಿಸ್ತಾನದಲ್ಲಿ ಬಾಂಬ್ ಸ್ಟೋಟ ಮಾಡಿದ್ರೋ ಅದೇ ರೀತಿ ಭಾರತದಲ್ಲಿ ನಡೆಸಲು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ. ಈ ಇಬ್ಬರನ್ನು ಪಿಐಒಗಳಾಗಿ (ಪಾಕಿಸ್ತಾನ್ ಇಂಟಲಿಜೆನ್ಸ್ ಅಪರೇಟರ್ಸ್) ಉಗ್ರರು ಬಳಕೆ ಮಾಡಿಕೊಂಡಿದ್ದರು.
ವಾಟ್ಸಾಪ್, ಇನ್ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಉಗ್ರರ ಸಂಪರ್ಕದಲ್ಲಿದ್ದರು. ದೇಶದಲ್ಲಿ ಸಂಚು ನಡೆಸಲು ಭಾರತದ ಮುಸ್ಲಿಂ ಯುವಕರನ್ನು ಬಳಕೆ ಮಾಡಿಕೊಂಡು ಐಎಸ್‌ಎಸ್ ಭಯೋತ್ಪಾದಕ ಸಂಘಟನೆ ವಿಸ್ತರಿಸಲು ಸಂಚು ರೂಪಿಸಿದ್ದರು. ಈಗಾಗಲೇ ಇಬ್ಬರು ಯುವಕರಿಗೆ ಉಗ್ರರು ಮುಂಬೈನಲ್ಲಿ ಉದ್ಯಮಿಯೊಬ್ಬನನ್ನು ಮುಗಿಸಲು ಟಾಸ್ಕ್ ನೀಡಿದ್ದರು. ಅಷ್ಟರೊಳೊಗೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಜಮೀರ್ ಖಾನ್ ಹಿನ್ನಲೆ: ದಾವಣಗೆರೆಯ ಬಿಡಿ ಲೇಔಟ್ ನಿವಾಸಿಯಾಗಿದ್ದ ಶಂಕಿತ ಭಯೋತ್ಪಾದಕ, ಕಟ್ಟಡ ನಿರ್ಮಾಣ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಹಾಸನ ಸೇರಿದಂತೆ ಹಲವು ಕಡೆಗಳಲ್ಲಿ ಕೆಲಸಕ್ಕಾಗಿ ಹೋಗುತ್ತಿದ್ದ. ತಂದೆ ತಾಯಿ ಇಬ್ಬರು ಸಹೋದರರ ಜೊತೆ ದಾವಣಗೆರೆಯಲ್ಲಿ ವಾಸವಿದ್ದ. ಇನ್ಟಾಗ್ರಾಂ ಮೂಲಕ ಪಾಕಿಸ್ತಾನದ ಶಾಬಾಸ್ ಭುಟ್ಟಿ ಹಾಗೂ ರಾಣಾ ಉನೇನ್ ಜೊತೆ ಈತನಿಗೆ ಸಂಪರ್ಕವಿತ್ತು. ಅವರ ನಿರ್ದೇಶನದಂತೆ ಭಾರತದಲ್ಲಿ ಸಂಚು ರೂಪಿಸುತ್ತಿದ್ದ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: Bengaluru | ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು
