
ಮುಂಬೈ: ಮೋದಿಯನ್ನು ಗುಜರಾತ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಹಿಂದುತ್ವಕ್ಕೆ ಧಕ್ಕೆಯಾಗುತ್ತದೆ ಎಂದು ಲಾಲ್ ಕೃಷ್ಣ ಆಡ್ವಾಣಿ ಅವರಿಗೆ ಬಾಳ್ ಠಾಕ್ರೆ ಅವರು ಸಲಹೆ ನೀಡಿದ್ದರು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
2002ರಲ್ಲಿ ಗುಜರಾತ್ ನಲ್ಲಿ ನಡೆದ ಗೋದ್ರಾ ಗಲಭೆಯ ವೇಳೆ “ಮೋದಿ ಹಟಾವೋ” ಅಭಿಯಾನ ದೊಡ್ಡ ಮಟ್ಟದಲ್ಲಿ ಚಾಲ್ತಿಯಲ್ಲಿತ್ತು. ಈ ವೇಳೆ ನಮ್ಮ ತಂದೆ ಮತ್ತು ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ ಅವರು ಪ್ರಧಾನಿ ನರೇಂದ್ರ ಮೋದಿಗೆ ಬೆಂಬಲಿಸಿದ್ದರು ಎಂದು ತಿಳಿಸಿದರು. ಇದನ್ನೂ ಓದಿ: ನಾನು ಬಾಬರಿ ಮಸೀದಿ ಧ್ವಂಸದಲ್ಲಿ ಭಾಗಿಯಾಗಿದ್ದೆ, ಶಿವಸೇನೆ ನಾಯಕರು ಯಾರೂ ಇರಲಿಲ್ಲ : ಫಡ್ನವೀಸ್
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಗುಜರಾತ್‍ನಲ್ಲಿ 2022ರ ಕೋಮು ಗಲಭೆ ಬಳಿಕ ದಿವಂಗತ ಬಿಜೆಪಿ ಮಠಾಧೀಶ ಅಟಲ್ ಬಿಹಾರಿ ವಾಜಪೇಯಿ ಅವರು ದೇಶದ ಪ್ರಧಾನಿಯಾಗಿದ್ದರು. ಈ ವೇಳೆ ನಡೆದ ಗೋದ್ರಾ ಗಲಭೆಯ ವೇಳೆ “ಮೋದಿ ಹಟಾವೋ” ಅಭಿಯಾನ ದೊಡ್ಡ ಮಟ್ಟದಲ್ಲಿ ಚಾಲ್ತಿಯಲ್ಲಿತ್ತು. ಮೋದಿಯನ್ನು ಪದಚ್ಯುತಗೊಳಿಸುವ ಬೇಡಿಕೆಯ ಬಗ್ಗೆ ಬಾಳ್ ಠಾಕ್ರೆ ಅವರೊಂದಿಗೆ ಮಾತನಾಡಲು ರಾಷ್ಟ್ರ ಬಿಜೆಪಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಎಲ್‍ಕೆ ಆಡ್ವಾಣಿ ಅವರು ಮುಂಬೈಗೆ ಭೇಟಿ ನೀಡಿದ್ದರು.
ರ್‍ಯಾಲಿವೊಂದರಲ್ಲಿ ಪಾಲ್ಗೊಂಡು ನಂತರ ಕುಳಿತುಕೊಂಡು ಮಾತನಾಡುತ್ತಿದ್ದೆವು. ಆಗ ಎಲ್‍ಕೆ ಆಡ್ವಾಣಿ ಅವರು ಬಾಳ್ ಠಾಕ್ರೆ ಅವರೊಂದಿಗೆ ಯಾವುದೋ ವಿಚಾರ ಚರ್ಚಿಸಬೇಕು ಎಂದರು. ನಾನು ಮತ್ತು ಬಿಜೆಪಿ ದಿವಂಗತ ನಾಯಕ ಪ್ರಮೋದ್ ಜಿ ಅಲ್ಲಿಂದ ಎದ್ದು ಹೊರಟೆವು. ಆಗ ಎಲ್‍ಕೆ ಆಡ್ವಾಣಿಯವರು ಮೋದಿಯನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕುವ ಬೇಡಿಕೆಯ ಬಗ್ಗೆ ಬಾಳ್ ಠಾಕ್ರೆ ಅವರ ಅನಿಸಿಕೆಯನ್ನು ಕೇಳಿದ್ದರು. ಇದನ್ನೂ ಓದಿ: ಬಾಬರಿ ಮಸೀದಿ ಕೆಡವಿದಾಗ ನೀವು ಓಡಿಹೋಗಿದ್ದಿರಿ: ಬಿಜೆಪಿಗೆ ಉದ್ಧವ್ ಠಾಕ್ರೆ ತರಾಟೆ
ಈ ವೇಳೆ ಬಾಳ್ ಠಾಕ್ರೆ ಅವರು ಅಡ್ವಾಣಿ ಅವರಿಗೆ ಮೋದಿಯನ್ನು ಮುಟ್ಟೋಕು ಹೋಗಬೇಡಿ. ಮೋದಿಯನ್ನು ಸಿಎಂ ಸ್ಥಾನದಿಂದ ತೆಗೆದುಹಾಕಿದರೆ, ಬಿಜೆಪಿ ಗುಜರಾತ್‍ನನ್ನು ಕಳೆದುಕೊಳ್ಳುತ್ತದೆ ಮತ್ತು ಅದರಿಂದ ಹಿಂದುತ್ವಕ್ಕೆ ಹಾನಿಯಾಗುತ್ತದೆ ಎಂದು ತಿಳಿಸಿದ್ದರು ಎಂದಿದ್ದಾರೆ.