ಚಂಡೀಗಢ: ಪಂಜಾಬ್ ಪೊಲೀಸ್ (Punjab Police) ಮತ್ತು ರಾಜ್ಯ ವಿಶೇಷ ಕಾರ್ಯಾಚರಣೆ ವಿಭಾಗ ತಂಡಗಳು ಮಹತ್ವದ ಕಾರ್ಯಾಚರಣೆ ನಡೆಸಿ, ವಿದೇಶಿ ಮೂಲದ ಭಯೋತ್ಪಾದಕ ಗುಂಪಿನ ಇಬ್ಬರು ಸದಸ್ಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆ ವೇಳೆ ಸುಧಾರಿತ ಸ್ಫೋಟಕ ಸಾಧನವನ್ನು ಪತ್ತೆ ಹಚ್ಚಲಾಗಿದೆ. ಇದರೊಂದಿಗೆ ಪ್ರಮುಖ ಸಾರ್ವಜನಿಕ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ರೂಪಿಸಲಾಗಿದ್ದ ಬಾಂಬ್ ಸ್ಫೋಟ ಸಂಚು ವಿಫಲಗೊಂಡಿದೆ. ಇದನ್ನೂ ಓದಿ: ಎಲ್ಲಾ ಕಂಪನಿಗಳ ಅಡುಗೆ ಎಣ್ಣೆ ಪ್ಯಾಕೇಟಿನ ಗಾತ್ರ ಪ್ರಮಾಣೀಕರಿಸಲು ಮುಂದಾದ ಕೇಂದ್ರ ಸರ್ಕಾರ
ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಗಡಿಯಾಚೆಗಿನ ಭಯೋತ್ಪಾದಕ ಜಾಲಗಳ ವಿರುದ್ಧ ಪ್ರಮುಖ ಯಶಸ್ಸು ಸಿಕ್ಕಿದೆ. ಮೊಹಾಲಿಯಲ್ಲಿ (Mohali) ವಿದೇಶಿ ಮೂಲದ ಭಯೋತ್ಪಾದಕ ಕಾರ್ಯಕರ್ತನ ಇಬ್ಬರು ಸಹಚರರನ್ನು ಬಂಧಿಸಲಾಗಿದೆ. ಕಾರ್ಯಾಚರಣೆಯಲ್ಲಿ ಐಇಡಿ (IED) ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಬಂಧಿತ ಆರೋಪಿ ಸಾಹಿಬ್‌ಜಾದಾ ಅಜಿತ್ ಸಿಂಗ್ ನಗರದ ಪ್ರಮುಖ ಸಾರ್ವಜನಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡಿದ್ದ ದುಷ್ಕೃತ್ಯದ ಸಂಚು ಈ ಕಾರ್ಯಾಚರಣೆಯಿಂದ ವಿಫಲಗೊಂಡಿದೆ. ತ್ವರಿತ ಕ್ರಮದಿಂದ ಸಾರ್ವಜನಿಕ ಸುರಕ್ಷತೆಗೆ ಎದುರಾಗಿದ್ದ ದೊಡ್ಡ ಬೆದರಿಕೆಯನ್ನು ತಪ್ಪಿಸಲಾಗಿದೆ ಎಂದು ಡಿಜಿಪಿ ಗೌರವ್ ಯಾದವ್ ಹೇಳಿದ್ದಾರೆ. ಇದನ್ನೂ ಓದಿ: ನೆಹರು ದಾಖಲೆ ಮುರಿದು ಹೊಸ ಇತಿಹಾಸ ಸೃಷ್ಟಿಸಲು ಮುಂದಾದ ಮೋದಿ
ಬಂಧಿತರ ಸಂಪರ್ಕಗಳು, ಪಿತೂರಿಯಲ್ಲಿ ಒಳಗೊಂಡಿರುವ ಎಲ್ಲಾ ವ್ಯಕ್ತಿಗಳು ಮತ್ತು ಭಯೋತ್ಪಾದಕ ಜಾಲದ ಸಂಪೂರ್ಣ ವಿವರಗಳನ್ನು ಬಯಲಿಗೆಳೆಯಲು ಹೆಚ್ಚಿನ ತನಿಖೆ ನಡೆಯುತ್ತಿದೆ. ಪಂಜಾಬ್ ಪೊಲೀಸರು ರಾಜ್ಯಾದ್ಯಂತ ಭಯೋತ್ಪಾದಕ ಜಾಲಗಳನ್ನು ನಾಶಪಡಿಸುವುದು, ಸಂಘಟಿತ ಅಪರಾಧಗಳನ್ನು ತೊಡೆದುಹಾಕುವುದು ಮತ್ತು ಜನರ ಶಾಂತಿ-ಸುರಕ್ಷತೆಗೆ ಆದ್ಯತೆ ನೀಡುವುದಾಗಿ ಡಿಜಿಪಿ ಭರವಸೆ ನೀಡಿದ್ದಾರೆ.
ಇತ್ತೀಚೆಗೆ, ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ATS) ಪೊಲೀಸರು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಮತ್ತು ಪಾಕಿಸ್ತಾನದ ಗ್ಯಾಂಗ್‌ಸ್ಟರ್ ಶಹಜಾದ್ ಭಟ್ಟಿ ಜೊತೆ ಸಂಪರ್ಕ ಹೊಂದಿರುವ ಭಯೋತ್ಪಾದಕ ಜಾಲದ ಪರ ಕೆಲಸ ಮಾಡುತ್ತಿದ್ದ ಆರೋಪದ ಮೇಲೆ ಅಜಮ್‌ಗಢ ಜಿಲ್ಲೆಯ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದರು. ಇದನ್ನೂ ಓದಿ: Explained| ಬರೋಬ್ಬರಿ 15.15 ಲಕ್ಷ ಕೋಟಿ ಅಕ್ರಮ – ಬೆಂಗಳೂರಿನ ಚಿನ್ನದ ಕಂಪನಿಯಲ್ಲಿ ‘ಕಾಗದದ’ ಆಟ!













