– ಬೆಂಗಳೂರಿನ ಹಲವೆಡೆ ಮಳೆ ಆರಂಭ
– ಯಾವ್ಯಾವ ಭಾಗಗಳಲ್ಲಿ ಎಷ್ಟು ಮಳೆ ಕೊರತೆ – ಅಂಕಿ ಅಂಶ ಬಿಡುಗಡೆ
ಬೆಂಗಳೂರು: ರಾಜ್ಯದಲ್ಲಿ (Karnataka) ಮುಂದಿನ 7 ದಿನಗಳ ಕಾಲ ಭಾರೀ ಮಳೆಯಾಗಲಿದೆ (Rain) ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜು.5ರ ವರೆಗೆ ವಿವಿಧ ಭಾಗಗಳಿಗೆ ಅರೆಂಜ್ ಅಲರ್ಟ್ ಘೋಷಿಸಲಾಗಿದೆ. ಉಡುಪಿ ಹಾಗೂ ಕರಾವಳಿ ಭಾಗಗಳಲ್ಲಿ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ.
ಇಂದು ಬೆಂಗಳೂರಿನ ಹಲವೆಡೆ ಮಳೆ ಆರಂಭಗೊಂಡಿದೆ. ಕಾರ್ಪೋರೇಷನ್, ಟೌನ್ ಹಾಲ್, ಕೆಆರ್ ಮಾರ್ಕೇಟ್ ಸುತ್ತಮುತ್ತ ತುಂತುರು ಮಳೆಯಾಗುತ್ತಿದೆ. ಬೆಂಗಳೂರಿಗೆ ಯಾವುದೇ ಅಲರ್ಟ್ ನೀಡಿಲ್ಲ.
ರಾಜ್ಯವ್ಯಾಪಿ ಜೂನ್ ತಿಂಗಳಲ್ಲಿ ವಾಡಿಕೆಯಷ್ಟು ಮಳೆ ಆಗಿಲ್ಲ. ಈ ಬಗ್ಗೆ ಅಂಕಿ ಅಂಶಗಳನ್ನು ರಾಜ್ಯ ಹವಾಮಾನ ಇಲಾಖೆ ಬಿಡುಗಡೆ ಮಾಡಿದೆ. ಜೂನ್ ತಿಂಗಳಲ್ಲಿ ರಾಜ್ಯದಲ್ಲಿ 43.% ರಷ್ಟು ಮಳೆ ಕೊರತೆ ಉಂಟಾಗಿದೆ. ವಾಡಿಕೆಯಂತೆ ಜೂನ್‌ನಲ್ಲಿ 119 ಮೀಮೀ ನಷ್ಟು ಮಳೆಯಾಗಬೇಕು. ಈ ಬಾರಿ ಆಗಿರೋದು 110 ಮಿಮೀ ಮಾತ್ರ. ಕರಾವಳಿಯಲ್ಲಿ 46% ರಷ್ಟು, ಉತ್ತರ ಒಳನಾಡಿನಲ್ಲಿ 24% ರಷ್ಟು, ದಕ್ಷಿಣ ಒಳನಾಡಿನಲ್ಲಿ 50% ರಷ್ಟು ಮಳೆ ಕೊರತೆಯಾಗಿದೆ. ರಾಜ್ಯದಲ್ಲಿ ದಕ್ಷಿಣ ಒಳನಾಡು ಪ್ರದೇಶವೇ ಅತಿ ಹೆಚ್ಚು ಮಳೆ ಕೊರತೆ ಅನುಭವಿಸುತ್ತಿರುವ ಭಾಗವಾಗಿದೆ.

ರಾಜ್ಯದ ಜಿಲ್ಲೆವಾರು ಮಳೆ ಕೊರತೆ ಅಂಕಿ ಅಂಶ
ಜಿಲ್ಲೆ – ಕೊರತೆ
ದಕ್ಷಿಣ ಕನ್ನಡ – 54%
ಉಡುಪಿ – 50%
ಉತ್ತರ ಕನ್ನಡ – 39%
ಬೆಳಗಾವಿ – 20%
ಬೀದರ್ – 35%.
ಧಾರವಾಡ – 36%
ಹಾವೇರಿ – 61%.
ಕಲಬುರಗಿ – 48%
ಕೊಪ್ಪಳ – 25%
ಬೆಂಗಳೂರು ನಗರ 21.%
ಚಿಕ್ಕಮಗಳೂರು 56%
ದಾವಣಗೆರೆ – 55%.
ಹಾಸನ – 54%
ಕೊಡಗು – 63%
ಮೈಸೂರು 58%
ಬೆಂಗಳೂರು ದಕ್ಷಿಣ (ರಾಮನಗರ) 73%
ಶಿವಮೊಗ್ಗ – 72%
ವಿಜಯನಗರ – 69% ಮಳೆ ಕೊರತೆ ಉಂಟಾಗಿದೆ.
