– ಬಿಜೆಪಿ ಶಾಸಕರಿಗೆ ಕಡಿಮೆ ಅನುದಾನ – ಅಶೋಕ್ ಕಿಡಿ
– ನಾವಲ್ಲ, ನೀವು ತಾರತಮ್ಯ ಮಾಡಿದ್ದು- ಎಂಬಿಪಾ ತಿರುಗೇಟು
ಬೆಂಗಳೂರು: ರಾಜಧಾನಿಯ 28 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 2,000 ಕೋಟಿ ರೂ. ಮೊತ್ತದ ಅನುದಾನ (Grant) ಹಂಚಿಕೆ ಮಾಡಿ ಕರ್ನಾಟಕ ಸರ್ಕಾರ(Karnataka Government) ಆದೇಶಿಸಿದೆ.
ಈ ಪೈಕಿ ರಸ್ತೆ, ಚರಂಡಿ ಮತ್ತು ಪಾದಾಚಾರಿ ಮಾರ್ಗಗಳಿಗೆ 1,631 ಕೋಟಿ ರೂ. ನಾಗರಿಕ ಮೂಲಸೌಕರ್ಯ ಮತ್ತು ವಿಶೇಷ ಯೋಜನೆಗಳಿಗೆ 369 ಕೋಟಿ ರೂ. ಉಳಿದ 369 ಕೋಟಿ ಮೊತ್ತವನ್ನು ಉದ್ಯಾನಗಳು, ಸಮುದಾಯ ಭವನಗಳು, ಶಿಕ್ಷಣ ಸಂಸ್ಥೆಗಳು, ಆರೋಗ್ಯ ಸೌಲಭ್ಯಗಳು, ಕ್ರೀಡಾ ಮೂಲಸೌಕರ್ಯ, ಮಾರುಕಟ್ಟೆಗಳು, ಕೆರೆಗಳ ಅಭಿವೃದ್ಧಿ ಹಾಗೂ ಇತರ ಸಾರ್ವಜನಿಕ ಸೌಲಭ್ಯಗಳಿಗೆ ನೀಡಲಾಗಿದೆ.
ವಿಪಕ್ಷ ನಾಯಕ ಅಶೋಕ್ (Ashok) ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ಡಿಕೆ ಶಿವಕುಮಾರ್( DK Shivakumar) ಉದ್ದೇಶಿಸಿ, ವಿಪಕ್ಷ ಕ್ಷೇತ್ರಗಳ ಜನರಿಗೆ ಅನ್ಯಾಯವಾಗಿದೆ. ತೆರಿಗೆ ಹಣವನ್ನು ಪಕ್ಷದ ಆಧಾರದ ಮೇಲೆ ಹಂಚಿಕೆ ಮಾಡಬೇಡಿ. ಗುಂಡಿಗಳು, ಪ್ರವಾಹ, ಟ್ರಾಫಿಕ್ ಸಮಸ್ಯೆ ಕಡೆಗಣಿಸಬೇಡಿ. ಇದು ಕಾಂಗ್ರೆಸ್ ಹಣವಲ್ಲ, ಜನರ ತೆರಿಗೆ ಹಣ. ಸಿಎಂ ಎಲ್ಲರಿಗೂ ಇರಬೇಕೇ ಹೊರತು ಕಾಂಗ್ರೆಸ್‌ಗೆ ಮಾತ್ರ ಅಲ್ಲ. ಬೆಂಗಳೂರಿಗೆ (Bengaluru) ಬೇಕಿರುವುದು ಸಮಾನ ಅಭಿವೃದ್ಧಿ, ತಾರತಮ್ಯವಲ್ಲ ಎಂದು ಕಿಡಿಕಾರಿದ್ದಾರೆ.
ಈ ಅನುದಾನದಲ್ಲಿ ಸುಮಾರು 369 ಕೋಟಿಯನ್ನು ರಸ್ತೆ ಕಾಮಗಾರಿಗಳ ಬದಲಾಗಿ ಶಾಸಕರ ಕಚೇರಿಗಳು, ಸಮುದಾಯ ಭವನಗಳು, ಬಹುಉದ್ದೇಶ ಕಟ್ಟಡಗಳು, ಉದ್ಯಾನಗಳು ಹಾಗೂ ಇತರೆ ನಾಗರಿಕ ಕಾಮಗಾರಿಗಳಿಗೆ ತಿರುಗಿಸಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಅವರದ್ದೇ ಪಕ್ಷದ ಶಾಸಕರಿಗೆ ತಲಾ 50 ಕೋಟಿ ರೂಪಾಯಿ ಅನುದಾನವನ್ನು ಮುಕ್ತವಾಗಿ ಹಂಚಿಕೆ ಮಾಡಿದ್ದರು. ಆದರೆ ಅದೇ ಸಮಯದಲ್ಲಿ ನಮ್ಮ ಪಕ್ಷದ ಶಾಸಕರಿಗೆ ಕೇವಲ 25 ಕೋಟಿ ರೂಪಾಯಿ ನೀಡಿ ತಾರತಮ್ಯ ಮಾಡಲಾಗಿತ್ತು. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಎಷ್ಟು ಅನುದಾನ ನೀಡಲಾಗಿತ್ತು ಎಂಬುದನ್ನು ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಎಂಬಿ ಪಾಟೀಲ್ (MB Patil) ತಿರುಗೇಟು ನೀಡಿದ್ದಾರೆ.
CM @DKShivakumar avare, are you the Chief Minister of Karnataka… or merely the Chief Minister of constituencies represented by Congress MLAs?
The four Assembly constituencies receiving the highest allocations are all represented by @INCKarnataka MLAs. Coincidence? Or is this… pic.twitter.com/SLGUgPryRb
— R. Ashoka (@RAshokaBJP) June 29, 2026
ವಲಯವಾರು ಅನುದಾನ ಹಂಚಿಕೆ
> ಉತ್ತರ ವಲಯ – 466.5 ಕೋಟಿ ರೂ.
> ಪಶ್ಚಿಮ ವಲಯ – 415 ಕೋಟಿ ರೂ.
> ದಕ್ಷಿಣ ವಲಯ – 328 ಕೋಟಿ ರೂ.
> ಮಧ್ಯ ವಲಯ – 311.5 ಕೋಟಿ ರೂ.
> ಪೂರ್ವ ವಲಯ – 110 ಕೋಟಿ ರೂ.
ಹೆಚ್ಚು ಅನುದಾನ ಪಡೆದ `ಕೈ’ ಕ್ಷೇತ್ರಗಳು
> ಶಾಂತಿನಗರ – 100 ಕೋಟಿ ರೂ.
> ಬ್ಯಾಟರಾಯನಪುರ – 100 ಕೋಟಿ ರೂ.
> ಶಿವಾಜಿನಗರ – 100 ಕೋಟಿ ರೂ.
> ಚಾಮರಾಜಪೇಟೆ – 100 ಕೋಟಿ ರೂ.
> ಗೋವಿಂದರಾಜನಗರ – 100 ಕೋಟಿ ರೂ.
> ವಿಜಯನಗರ – 100 ಕೋಟಿ ರೂ.
> ಸರ್ವಜ್ಞ ನಗರ – 100 ಕೋಟಿ ರೂ.
> ಪುಲಕೇಶಿನಗರ – 100 ಕೋಟಿ ರೂ.
> ಹೆಬ್ಬಾಳ – 100 ಕೋಟಿ ರೂ.
> ಬಿಟಿಎಂ ಲೇಔಟ್ – 100 ಕೋಟಿ ರೂ.
ಕಡಿಮೆ ಅನುದಾನ ಪಡೆದ `ಕೈ’ ಕ್ಷೇತ್ರಗಳು
ಸಿ.ವಿ ರಾಮನ್ ನಗರ – 40 ಕೋಟಿ ರೂ.
ಆನೇಕಲ್ – 45 ಕೋಟಿ ರೂ.
ಗಾಂಧಿನಗರ – 73 ಕೋಟಿ ರೂ.
ಕಡಿಮೆ ಅನುದಾನ ಪಡೆದ ಬಿಜೆಪಿ ಕ್ಷೇತ್ರಗಳು
> ಚಿಕ್ಕಪೇಟೆ – 40 ಕೋಟಿ ರೂ.
> ಮಹಾಲಕ್ಷ್ಮಿ – ಲೇಔಟ್ 40 ಕೋಟಿ ರೂ.
> ಮಲ್ಲೇಶ್ವರಂ – 40 ಕೋಟಿ ರೂ.
> ರಾಜಾಜಿನಗರ – 40 ಕೋಟಿ ರೂ.
> ಬಸವನಗುಡಿ – 40 ಕೋಟಿ ರೂ.
> ಜಯನಗರ – 40 ಕೋಟಿ ರೂ.
