ತುಮಕೂರು: ಬೀದಿ ನಾಯಿಗಳಿಗೆ (Stray Dogs) ವ್ಯಾಕ್ಸಿನ್ ಹಾಕಲು ತೆರಳಿದ್ದ ಮೂವರು ಪೌರ ಕಾರ್ಮಿಕರ ಮೇಲೆ ನಾಯಿಗಳು ದಾಳಿ ನಡೆಸಿದ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕಿನ ಪುರಸಭಾ (Municipality) ವ್ಯಾಪ್ತಿಯಲ್ಲಿ ನಡೆದಿದೆ.
ಇತ್ತೀಚೆಗೆ ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿ ಹೆಚ್ಚಾಗಿತ್ತು. ಈ ಹಿನ್ನೆಲೆ ನಾಯಿಗಳಿಗೆ ವ್ಯಾಕ್ಸಿನ್ ನೀಡಲು ಪುರಸಭೆ ಮುಂದಾಗಿತ್ತು. ನಾಯಿಗಳಿಗೆ ಲಸಿಕೆ ಹಾಕಲು ತಜ್ಞರ ತಂಡವನ್ನು ನೇಮಿಸದೆ ನಿರ್ಲಕ್ಷ್ಯ ತೋರಿಸಿರುವ ಆರೋಪ ಈಗ ಕೇಳಿಬಂದಿದೆ. ಇದನ್ನೂ ಓದಿ: ಅಗತ್ಯವಿದ್ದರೆ ಆಕ್ರಮಣಕಾರಿ, ಹುಚ್ಚು ಬೀದಿ ನಾಯಿಗಳನ್ನು ಕೊಲ್ಲಿ – ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಅನುಮತಿ
ಪೌರಕಾರ್ಮಿಕರಿಂದಲೇ ನಾಯಿಗಳಿಗೆ ವ್ಯಾಕ್ಸಿನ್ ಹಾಕಿಸಲು ಪುರಸಭೆ ಮುಂದಾಗಿದೆ. ಅನುಭವವಿಲ್ಲದೇ ವ್ಯಾಕ್ಸಿನ್ ಹಾಕಲು ಹೋಗಿ ನಾಯಿ ಬಳಿ ಪೌರಕಾರ್ಮಿಕರು ಕಚ್ಚಿಸಿಕೊಂಡಿದ್ದಾರೆ. ಸುರಕ್ಷತಾ ಸಲಕರಣೆಯನ್ನು ನೀಡದೇ ಪೌರ ಕಾರ್ಮಿಕರನ್ನು ಬಳಸಿಕೊಂಡಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೀದರ್‌ನಲ್ಲಿ ಬೀದಿ ನಾಯಿ ದಾಳಿಗೆ 5 ತಿಂಗಳ ಕಂದಮ್ಮ ದುರ್ಮರಣ
