– ವಾಲಗಳ್ಳಿ ಬಳಿಯ ರಾಜ್ಯ ಹೆದ್ದಾರಿ ಜಲಾವೃತ; ವಾಹನ ಸವಾರರ ಪರದಾಟ
ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಕರಾವಳಿಯಲ್ಲಿ ಅಬ್ಬರದ ಮಳೆಯಾಗಿದೆ. ವಾಲಗಳ್ಳಿ ಬಳಿಯ ರಾಜ್ಯ ಹೆದ್ದಾರಿ ಜಲಾವೃತವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ (Gokarna Mahabaleshwara Temple) ಗರ್ಭಗುಡಿಗೆ ನೀರು ನುಗ್ಗಿದ ಪರಿಣಾಮ ಆತ್ಮಲಿಂಗ ಸ್ಪರ್ಶ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ. ಮಧ್ಯಾಹ್ನ 12:30 ರ ಮಹಾಪೂಜೆ ಮಾಡಲಾಗದಷ್ಟು ಸಮಸ್ಯೆಯಾಗಿದೆ. ಗೋಕರ್ಣದ ಬೀದಿಗಳು ಹಳ್ಳದಂತಾಗಿವೆ. ಇದರಿಂದ ಪ್ರವಾಸಿಗರಿಗೆ ಭಾರಿ ಕಿರಿಕಿರಿಯಾಗಿದೆ. ಚರಂಡಿಯ ಹೂಳು ತೆಗೆಯದ ಹಿನ್ನೆಲೆ ಸಮಸ್ಯೆ ಉಂಟಾಗಿದೆ. ಕೇವಲ ಒಂದು ದಿನದ ಮಳೆಗೆ ಭಾರಿ ಅವಾಂತರ ಸೃಷ್ಟಿಯಾಗಿದೆ. ಇದನ್ನೂ ಓದಿ: ಗಂಡು-ಹೆಣ್ಣು ಅನ್ನೋ ಭೇದ ಇಲ್ಲದಿದ್ರೆ ನೀರಿನ ಬಿಕ್ಕಟ್ಟು ಬಗೆಹರಿಸಬಹುದೇ?
ಕುಮಟಾ ತಾಲೂಕಿನಾದ್ಯಂತ ಅಬ್ಬರದ ಮಳೆಯಾಗಿದ್ದು, ವಾಲಗಳ್ಳಿ ಬಳಿಯ ರಾಜ್ಯ ಹೆದ್ದಾರಿ ಜಲಾವೃತಗೊಂಡಿದೆ. ಕುಮಟಾದಿಂದ ಸಿದ್ದಾಪುರಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಇದಾಗಿದೆ. ಹಳ್ಳದಂತಾದ ರಸ್ತೆಯಲ್ಲಿ ವಾಹನ ಸಂಚಾರ ದುಸ್ತರವಾಗಿದೆ.
