– ಒಂದು ಲಕ್ಷಕ್ಕೂ ಅಧಿಕ ಜನರಿಗೆ ಅನ್ನಸಂತರ್ಪಣೆ
ಹಾಸನ: ಇಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ (HD Devegowda) ಧರ್ಮಪತ್ನಿ ಚೆನ್ನಮ್ಮ (Chennamma Devegowda) ಅವರ ಉತ್ತರ ಕ್ರಿಯಾದಿ ಕಾರ್ಯ ನೆರವೇರಲಿದ್ದು, ಒಂದು ಲಕ್ಷಕ್ಕೂ ಅಧಿಕ ಜನರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ.
ಹಾಸನ (Hassan) ಜಿಲ್ಲೆಯ ಹೊಳೆನರಸೀಪುರ (Holenarsipura) ತಾಲೂಕಿನ ಮಾವಿನಕೆರೆ ಬೆಟ್ಟದ ತಪ್ಪಲಿನಲ್ಲಿ ತಿಥಿ ಕಾರ್ಯ ನಡೆಯಲಿದೆ. ಕುಟುಂಬಸ್ಥರು 11ನೇ ದಿನದ ಕಾರ್ಯಕ್ಕೆ ತಯಾರಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ನಾಳೆ ಚನ್ನಮ್ಮ ಉತ್ತರ ಕ್ರಿಯೆ | 2 ಲಕ್ಷಕ್ಕೂ ಹೆಚ್ಚು ಜನ ಭಾಗಿ ನಿರೀಕ್ಷೆ- ಸಿದ್ಧತೆ ಪರಿಶೀಲಿಸಿದ ಹೆಚ್‌ಡಿಕೆ
ಒಕ್ಕಲಿಗ ಸಂಪ್ರದಾಯದ ಮುಳ್ಳುಗೌಡ ಪರಂಪರೆಯಂತೆ ಉತ್ತರ ಕ್ರಿಯಾದಿ ಕಾರ್ಯ ನಡೆಯಲಿದ್ದು, ಇಂದು ಬೆಳಿಗ್ಗೆ 10-30 ಕ್ಕ ಕುಟುಂಬ ಸದಸ್ಯರಿಂದ ಪೂಜೆ ನೆರವೇರಲಿದೆ. ಬಳಿಕ ಬರುವ ಅಭಿಮಾನಿಗಳು, ಬಂಧುಗಳಿಗೆ ಊಟದ ವ್ಯವಸ್ಥೆ ಇರಲಿದೆ.
ಸಂಪೂರ್ಣ ಸಸ್ಯಹಾರಿ ಊಟದ ವ್ಯವಸ್ಥೆ ಮಾಡಿ, ಕಾರ್ಯಕ್ಕೆ ಸಿದ್ದತೆ ಮಾಡಲಾಗಿದೆ. ಹೋಳಿಗೆ, ಲಡ್ಡು, ಮೈಸೂರು ಪಾಕ್ ಸೇರಿ ಆರು ಬಗೆಯ ಸಿಹಿ ತಿಂಡಿ ಇರಲಿದೆ. ಸುಮಾರು 2 ಸಾವಿರ ಬಾಣಸಿಗರಿಂದ ಭೋಜನ ಸಿದ್ಧತೆ ಮಾಡಿಕೊಂಡಿದ್ದಾರೆ.
ಕಾರ್ಯದ ವೇಳೆ ಒಂದು ಲಕ್ಷಕ್ಕೂ ಅಧಿಕ ಜನರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಏಕಕಾಲಕ್ಕೆ 22 ಸಾವಿರ ಜನರು ಕುಳಿತು ಊಟ ಮಾಡಲು ವ್ಯವಸ್ಥೆ ಮಾಡಲಾಗಿದೆ. ತಲಾ 1,800 ಜನರು ಏಕ ಕಾಲದಲ್ಲಿ ಊಟ ಮಾಡಲು 16 ಕೌಂಟರ್ ನಿರ್ಮಾಣ ಮಾಡಲಾಗಿದೆ. ಮಹಿಳೆಯರಿಗೆ 3 ವಿಐಪಿ, ವಿವಿಐಪಿಗಳಿಗೆ 2 ಸೇರಿ 16 ಕೌಂಟರ್ ನಿರ್ಮಾಣ ಮಾಡಿದ್ದಾರೆ.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ದೇವೇಗೌಡರ ಪತ್ನಿ ಚೆನ್ನಮ್ಮ ಅವರು ಜು.18ರಂದು ಹೃದಯಘಾತದಿಂದ ಕೊನೆಯುಸಿರೆಳೆದರು.ಇದನ್ನೂ ಓದಿ: ದೇವೇಗೌಡರ ಪತ್ನಿ ಚೆನ್ನಮ್ಮ ಸಮಾಧಿಗೆ ಸಂಸದ ಯದುವೀರ್ ನಮನ
