ಕೆಲ ದಿನಗಳಿಂದ ಆಸ್ಕರ್ (Oscar) ಪ್ರಶಸ್ತಿ ಕುರಿತಾಗಿಯೇ ಭಾರತೀಯ ಸಿನಿಮಾ ರಂಗದಲ್ಲಿ ಚರ್ಚೆ ಶುರುವಾಗಿತ್ತು. 2023ನೇ ಸಾಲಿನ ಆಸ್ಕರ್‌ಗೆ ಭಾರತದ ಅಧಿಕೃತ ಸಿನಿಮಾವಾಗಿ ಯಾವುದನ್ನು ಕಳುಹಿಸಬೇಕು ಎನ್ನುವ ಮಾತುಕತೆ ಕೂಡ ನಡೆದಿತ್ತು. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ (RRR) ಮತ್ತು ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ಕಳುಹಿಸುವಂತೆ ಒತ್ತಡ ಹೇರಲಾಗಿತ್ತು.
Advertisement
ಆರ್.ಆರ್.ಆರ್ ಅಥವಾ ದಿ ಕಾಶ್ಮೀರ್ ಫೈಲ್ಸ್ (The Kashmir Files) ಈ ಎರಡು ಸಿನಿಮಾಗಳಲ್ಲಿ ಒಂದು ಚಿತ್ರ ಭಾರತದಿಂದ ಆಸ್ಕರ್‌ಗೆ ಸ್ಪರ್ಧಿಸಲಿದೆ ಎಂದೇ ನಂಬಲಾಗಿತ್ತು. ಹಾಗಾಗಿ ಈ ಎರಡೂ ಸಿನಿಮಾಗಳ ಅಭಿಮಾನಿಗಳು ಯಾವ ಚಿತ್ರ ಸೆಲೆಕ್ಟ್ ಆಗಬಹುದು ಎನ್ನುವ ಕುತೂಹಲದೊಂದಿಗೆ ದಿನಗಳನ್ನು ದೂಡುತ್ತಿದ್ದಾರೆ. ಆದರೆ, ಈ ಎರಡೂ ಸಿನಿಮಾಗಳ ಬದಲಾಗಿ ಗುಜರಾತಿನ ‘ಚೆಲ್ಲೋ ಶೋ’ (Chello Show) ಸಿನಿಮಾವನ್ನು ಭಾರತದ ಅಧಿಕೃತ ಪ್ರವೇಶದ ಸಿನಿಮಾ ಎಂದು ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ಘೋಷಣೆ ಮಾಡಿದೆ. ಇದನ್ನೂ ಓದಿ:‘ಸೈಮಾ ಅವಾರ್ಡ್’ ಐಷಾರಾಮಿ ಹೋಟೆಲ್‌ನಲ್ಲಿ ಸೆಲೆಬ್ರಿಟಿಗಳ ತಡರಾತ್ರಿ ಪಾರ್ಟಿ : FIR ದಾಖಲು
Advertisement
Advertisement
ದಕ್ಷಿಣದವರು ಆರ್.ಆರ್.ಆರ್ ಸಿನಿಮಾ ಕಳುಹಿಸಿ ಎಂದು ಸೋಷಿಯಲ್ ಮೀಡಿಯಾ ಮೂಲಕ ಮನವಿ ಮಾಡಿದ್ದರೆ, ಹಿಂದಿಯವರ ಆಸಕ್ತಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ಮೇಲಿತ್ತು. ಆದರೆ, ಅಲ್ಲಿ ಆಯ್ಕೆಯಾಗಿದ್ದೇ ಬೇರೆ ಸಿನಿಮಾ. ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ಸಂಸ್ಥೆಯು ಪಾನ್ ನಳಿನ್ (Paan Nalin) ನಿರ್ದೇಶನದ ‘ಚೆಲ್ಲೋ ಶೋ; ಸಿನಿಮಾವನ್ನು ಆಯ್ಕೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ಭಾವಿನ್ ರಾಬರಿ, ದಿಚಾ ಮೀನಾ, ಪರೇಶ್ ಮೆಹ್ತಾ ಸೇರಿದಂತೆ ಹಲವರು ನಟಿಸಿದ್ದಾರೆ.
Advertisement
ತಮ್ಮ ಸಿನಿಮಾ ಆಯ್ಕೆಗೆ ನಿರ್ದೇಶಕರು ಕೃತಜ್ಞತೆ ತಿಳಿಸಿದ್ದಾರೆ. ಒಂಭತ್ತು ವರ್ಷದ ಹುಡುಗನೊಬ್ಬ ಡಿಜಿಟಲ್ ಕ್ರಾಂತಿಯ ಮಾಂತ್ರಿಕತೆ ಬೆನ್ನು ಬೀಳುವಂತಹ ಕಥೆಯು ಸಿನಿಮಾದಲ್ಲಿ ಇದೆಯಂತೆ. ನಿರ್ದೇಶಕರ ಜೀವನದಲ್ಲಿ ನಡೆದ ಹಲವು ಘಟನೆಗಳನ್ನೂ ಸಿನಿಮಾದಲ್ಲಿ ಬಳಸಿದ್ದಾರಂತೆ. ಈ ಸಿನಿಮಾ ಈಗಾಗಲೇ ವಿವಿಧ ದೇಶಗಳಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿ ಹತ್ತಾರು ಪ್ರಶಸ್ತಿಗಳನ್ನು ಕೂಡ ಪಡೆದುಕೊಂಡಿದೆ ಎನ್ನುವುದು ವಿಶೇಷ.