ಇದೇ ಮೊದಲ ಬಾರಿಗೆ ಸೈಮಾ (SIIMA) ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನಲ್ಲಿ (Bangalore) ನಡೆಯಿತು. ಪುನೀತ್ ರಾಜ್‌ಕುಮಾರ್ ಸ್ಮರಣೆಗಾಗಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಕ್ಷಿಣದ ಬಹುತೇಕ ತಾರೆಯರು ಭಾಗಿಯಾಗಿದ್ದರು. ಕನ್ನಡ, ತಮಿಳು, ತೆಲುಗು ಹಾಗೂ ಮಲೆಯಾಳಂ ಸಿನಿಮಾ ರಂಗದ ಅನೇಕ ದಿಗ್ಗಜರು ಕೂಡ ಪಾಲ್ಗೊಂಡಿದ್ದರು. ಕಾರ್ಯಕ್ರಮ ಎರಡು ದಿನಗಳ ಕಾಲ ಅದ್ದೂರಿಯಾಗಿ ನಡೆಯಿತು. ಸೈಮಾ ಅವಾರ್ಡ್ (Award) ನಲ್ಲಿ ಭಾಗಿಯಾಗಿದ್ದ ಗಣ್ಯರಿಗೆ ಬೆಂಗಳೂರಿನ ಐಷಾರಾಮಿ ಹೋಟೆಲ್‌ನಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಅಲ್ಲೀಗ ಎಡವಟ್ಟಾಗಿದೆ.
Advertisement
ಸೈಮಾಗೆ ಹತ್ತು ವರ್ಷಗಳ ಸಂಭ್ರಮ. ಅಲ್ಲದೇ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಾರ್ಯಕ್ರಮ ಆಯೋಜನೆ. ಅಲ್ಲದೇ, ಬಹುತೇಕ ತಾರೆಯರು (Celebrity) ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರಿಂದ ಕನ್ನಡದ ಅನೇಕ ಸ್ಟಾರ್ ನಟರು ಕೂಡ ಭಾಗಿಯಾಗಿದ್ದರು. ಕಾರ್ಯಕ್ರಮದ ನಂತರ ಇವರೆಲ್ಲ ಐಷಾರಾಮಿ ಹೋಟೆಲ್‌ನಲ್ಲಿ ತಡರಾತ್ರಿ ಪಾರ್ಟಿ ಮಾಡಿ, ನಿಯಮ ಮುರಿದ ಕಾರಣಕ್ಕಾಗಿ ಕಬ್ಬನ ಪಾರ್ಕ್ ಪೊಲೀಸ್ ಸ್ಟೇಶನ್ ನಲ್ಲಿ ದೂರು ದಾಖಲಾಗಿದೆ. ತಡರಾತ್ರಿ 1 ಗಂಟೆಗೆ ಪಾರ್ಟಿ ಮುಗಿಸಬೇಕು ಎಂದು ಪೊಲೀಸರು ತಿಳಿಸಿದ್ದರೂ, ಮಧ್ಯರಾತ್ರಿ 3.30ರವರೆಗೂ ಪಾರ್ಟಿ ನಡೆದಿದೆ. ಹಾಗಾಗಿ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದಾರೆ. ಇದನ್ನೂ ಓದಿ:ನೆಗೆಟಿವ್ ಕಾಮೆಂಟ್ ಗೆ ಹೆದರಲ್ಲ, ತುಂಬಾ ಜನ ನನ್ನನ್ನು ಪ್ರೀತಿಸ್ತಾರೆ ಎಂದ ಸೋನು ಶ್ರೀನಿವಾಸ್ ಗೌಡ
Advertisement
Advertisement
ಅವಧಿ ಮೀರಿ ಮಧ್ಯರಾತ್ರಿವರೆಗೂ ಪಾರ್ಟಿ (Party) ಮಾಡುವುದಕ್ಕೆ ಅವಕಾಶ ಕೊಟ್ಟ ಹೋಟೆಲ್ ಮೇಲೆ ಈ ದೂರು ದಾಖಲಾಗಿದ್ದು, ಹೋಟೆಲ್‌ನ ಮ್ಯಾನೇಜರ್ ಮತ್ತು ಪಾರ್ಟಿ ಆಯೋಜಕರ ಮೇಲೆ ಎಫ್.ಐ.ಆರ್ (FIR) ದಾಖಲಿಸಿದ್ದಾರೆ ಪೊಲೀಸ್ ಅಧಿಕಾರಿಗಳು. ಕಬ್ಬನ್ ಪಾರ್ಕ್ (Kabbana Park) ಪೊಲೀಸ್ ಅಧಿಕಾರಿ ಚೈತನ್ಯಾ ಅವರು ಮೊದಲು ಒಂದು ಗಂಟೆಗೆ ಹೋಗಿ ಪರಿಶೀಲನೆ ಮಾಡಿದ್ದಾರೆ. ಒಂದು ಗಂಟೆಗೆ ಪಾರ್ಟಿ ಮುಗಿಸಿ ಎಂದೂ ಹೇಳಿದ್ದಾರೆ. ಆದರೆ, ಆಯೋಜಕರು ಮಧ್ಯರಾತ್ರಿ 3.30ರವರೆಗೂ ಪಾರ್ಟಿ ಮಾಡಿದ್ದಾರೆ ಎಂದು ಚೈತನ್ಯಾ (Chaitanya) ಅವರೇ ದೂರು ದಾಖಲಿಸಿದ್ದಾರೆ.
Advertisement
ಸೈ,ಮಾ ಆವಾರ್ಡ್ ಸಂದರ್ಭದಲ್ಲಿ ಅದೇ ಹೋಟೆಲ್‌ನಲ್ಲಿ ಸೆಲೆಬ್ರಿಟಿಗಳು ರೂಮ್ ಬುಕ್ ಮಾಡಿದ್ದರು ಎನ್ನಲಾಗುತ್ತಿದೆ. ಅಲ್ಲದೇ, ಕನ್ನಡದ ಕೆಲ ಸ್ಟಾರ್ ನಟರು ಕೂಡ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಎಫ್.ಐ.ಆರ್ ನಲ್ಲಿ ಯಾರ ಹೆಸರೂ ದಾಖಲಿಸಿಲ್ಲ. ಕೇವಲ ಹೋಟೆಲ್ ಸಿಬ್ಬಂದಿ ಮೇಲೆ ದೂರು ದಾಖಲಾಗಿದೆ.